ನಡೆಯು ಕನ್ನಡ
ನುಡಿಯು ಕನ್ನಡವಾಗಲಿ|
ನಡೆನುಡಿಗಳೊಂದಾಗಿ
ಕನ್ನಡತನವು ಬೆಳಗಲಿ||
ಕನ್ನಡವು ಜಗಜಗಿಸಿ
ಕನ್ನಡವು ವಿಜೃಂಭಿಸಲಿ|
ಕನ್ನಡದ ಕಹಳೆಯು
ಎಲ್ಲೆಡೆಯು ಮೊಳಗಿ
ಕನ್ನಡಾಂಬೆಯ
ವಿಜಯ ಪತಾಕೆ ಹಾರಡಲಿ||
ಕನ್ನಡ ಮಾತುಗಳು
ಮುತ್ತಿನಂತಹ ಹರಳುಗಳು|
ಕನ್ನಡ ಪದಗಳು
ರತ್ನಕಮಲದಂತಿಹ ಗುಚ್ಚಗಳು
ಕನ್ನಡ ಪದ್ಯಗಳು
ಸ್ಫಟಿಕ ಮಣಿ ಹಾರಗಳು|
ಕನ್ನಡದ ಕತೆ ಕಾದಂಬರಿ ಕಾವ್ಯಗಳು
ಆಗರ್ಭ ಶ್ರೀಮಂತ ಜಗ ಜನಿತವು||
ಕನ್ನಡದ ಜನರು ಹೃದಯ
ಶ್ರೀಮಂತರೆಂದೆನಿಸಿಕೊಂಡವರು|
ಕನ್ನಡದ ಜನರು ಸ್ನೇಹ
ಸಂಘಜೀವಿಯಾದವರು|
ಸದಾಹೀಗೆ ಕನ್ನಡವ ಬೆಳೆಸಿ
ಕನ್ನಡತನವನುಳಿಸಲು ಹರಕೆ ದೀಕ್ಷೆ
ತೊಡುವುದೇ ನಮ್ಮಯ ಕರ್ತವ್ಯವು||
*****