ನಾ ನಿನ್ನ ಪಾದ ಧೂಳಿ

ಹರಿ ಜನುಮ ಜನುಮದಲ್ಲೂ ನಾ
ಮಾಡಿದೆಷ್ಟೊ ಪಾಪ ಕೋಟಿ ಕೋಟಿ
ಮಾಯೆ ಮಮತೆ ಮಮಕಾರದಲ್ಲಿ ಬೆಂದು
ನಾನು ಮೆರೆದೆ ನನಗಿರದ ಸಾಟಿ

ಮತ್ತೆ ನಿನ್ನೆದುರಿನಲಿ ನಾನೀಗ ನಿಂತು
ಕೈ ಮುಗಿದು ಬೇಡುತ್ತಿರುವೆ ತಂದೆ
ನನ್ನ ಪಾಪಗಳ ಪರಿಹರಿಸು ಹರಿಯೆ
ನಾನು ಸಂಸಾರ ಬಾಣೆಲೆಯಲಿ ಬೆಂದೆ

ಸಾಗರನು ನೀನು ಹನಿಯು ನಾನು
ನಾನು ನಿನ್ನಲಿ ಸೇರದೆ ವಿಧಿಯಿಲ್ಲ
ನಿನೋರ್ವನೆ ಎನಗೆ ಇಹಪರದ ಇಂಬು
ನಿನ್ನ ಹೊರತು ಎನಗೆ ಬೇರೆ ನಿಧಿ ಇಲ್ಲ

ನೀನು ಕೃಪೆ ತೋರಿಸು ಕರುಣಿಸು ಹರಿಯೆ
ನಾನಾಗ ಬಯಸುವೆ ನಿನ್ನ ಪಾದಧೂಳಿ
ನನ್ನ ಮನದ ಇಂಚು ಇಂಚು ನಿನ್ನಲಿ
ಮಾಣಿಕ್ಯ ವಿಠಲನಿಗೆ ತಾಗಲಿ ನಿನ್ನ ಕೃಪಾಗಾಳಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಕ್ಷ್ಮಿಯೇ ನೀನೊಲಿದರೇನೇ
Next post ಜಂಭದ ಮುದುಕಿ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…