ಆನಂದ

ರಸ ತುಂಬಿದ ಬಣ್ಣ ಬಣ್ಣದ ಹಣ್ಣ ಕೈಯಲ್ಲಿ ಹಿಡಿದುಕೊಂಡು, ಬಾಯಲ್ಲಿಡದೆ ನೋಡುತ್ತಾ ಕೂಡುವುದೇನೋ! ಹಾಗೆ ನೋಡುವಾಗ ಊರಿನಿಂತ ಬಾಯಿನೀರೇನೋ! ಒತ್ತಿ ಹಿಚುಕದೆ, ಕಿತ್ತೆಸೆದು ಸಿಪ್ಪೆಸುಲಿಯದೆ, ಮುಖ ಮೈಗಳ ಮುಟ್ಟಿಮುಟ್ಟಿ ಬಾಯಿ ಬಿಡುವುದೇನೋ! ಮೂಸಿ ಮೂಗು...

ಗಂಟಲಲ್ಲಿ ಸಿಕ್ಕಿಕೊಂಡ ಹೊಟ್ಟೆ

ಇವರ ಡೊಳ್ಳು ಹೊಟ್ಟೆಗಳನೆಲ್ಲ ನಗಾರಿ ಬಾರಿಸಬೇಕು ಒಡೆಯುವವರೆಗೆ ಇವರ ಮುಖವಾಡಗಳ ಕಿತ್ತೆಸೆದು ಇವರ ಕತ್ತೆ ಮುಖಗಳ ಕತ್ತುಹಿಡಿದು ಹೊಲೆಗೇರಿಗಳ ಕೊಳಚೆಗಳಲ್ಲದ್ದಬೇಕು ಇವರು ಕಟ್ಟಿದ ಸಂಚುಕೋಟೆಗಳ ನುಡಿಗುಂಡುಗಳಿಂದ ಒಡೆಯಬೇಕು ಇವರು ಹಾಕಿದ ಲಕ್ಷ್ಮಣರೇಖೆಗಳನೆಲ್ಲ ಅವಲಕ್ಷಣವಾಗಿ ಅಳಿಸಿ...

ಆ ದನಿ

ಆ ದನಿಯನ್ನೊಮ್ಮೆ ಹೇಳಹೆಸರಿಲ್ಲದಂತೆ ಹೂಳಿಬಿಡಬೇಕು ನೆಲದೊಳಕ್ಕೆ ಇಳಿಯುವಂತೆ ರಸಾತಳಕ್ಕೆ ಪತ್ತೆ ಹತ್ತದ ಭೂಗರ್ಭ ಕೇಂದ್ರಕ್ಕೆ ಅಪ್ಪಿತಪ್ಪಿಯೂ ಕೇಳೀತು ನೋಡು! ಅದರಲ್ಲಿ ಮೈ ಹಣ್ಣಾಗುವ ಮದ್ದಿದೆ ಹದ್ದುಗಣ್ಣು ಕೆಕ್ಕರಿಸುವ ಮೋಡಿ ಇದೆ ಮಣ್ಣ ಮುಕ್ಕಿಸುವ ಮಾಟವಿದೆ...

ಕಾಯುತ್ತಿದ್ದೇನೆ

ಅನಿಸಿಕೆಯ ಬೀಜ ಮರವಾಗಿ ಅಭಿವ್ಯಕ್ತಿ ಪಡೆಯುವುದನ್ನು ಎಲ್ಲ ಗೋಲಿಗಳೂ ಸಟಸಟ ತಂತಮ್ಮ ಗುಳಿಗಳಲ್ಲಿ ಸಲೀಸಾಗಿ ಬೀಳುವುದನ್ನು ಎಲ್ಲ ಬಾಗಿಲುಗಳು ನನ್ನ ಟಕಟಕಾಟಕ್ಕೆ ಕೂಡಲೇ ತೊರೆದುಕೊಂಡು ನನ್ನ ಸ್ವೀಕರಿಸುವುದನ್ನು ಎಲ್ಲ ಕಲ್ಪತರುವಿನ ತಲೆಕಾಯಿಗಳಿಗೆ ಬಡಕೊಂಡಿರುವ ಸಣ್ಣ...

ಸೃಜನ

ಮೇಲೆ ಚಂದ್ರಾಮ ಇಲ್ಲಿ ಚಿಗುರೆಲೆ ಬಳ್ಳಿ ಅದರಲ್ಲಿ ಬಿಟ್ಟ ಅಮೃತಕಲಶ ಮೇಲೊಂದು ಜೇನತೊಟ್ಟು ಈ ತಂಬೂರಿ ಕುಂಬಳಕಾಯಿ ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ ಈ ದೇಗುಲ ಕಲೆಯುಸಿರಾಡುವ ಸ್ತಂಭಗಳು ನವರಂಗದ ಮೇಲೆಕೆಳಗಿರಿಸಿದ ಅರಳಿದ...

ಬೇಲಿ

ಈ ಹಸಿರು ಹುಲ್ಲು, ಈ ಹೂವು-ಹಣ್ಣು ಈ ಬಣ್ಣದ ಹಕ್ಕಿಗಳು ಈ ಗಂಧಗಾಳಿ ಈ ಗೂಢ ಶಾಂತಿ ಈ ತಂಪು ತೋಟದಲ್ಲಿ ಶ್ವೇತಾಂಬರಿಯ ಹಂಸಗಮನ ಆಚೀಚೆ ಹಾಲ ಹಸುಳೆಗಳ ಬೆಳದಿಂಗಳ ನಗು ಸೂರ್ಯನಿಲ್ಲಿ ಚಂದಿರ...

ನಾಯಿ ಪಾಲು

ಹಲ್ಲು ಹಲ್ಲು ಮಸೆದವು, ಕರುಳು ಕರುಳ ಕಡಿದವು ಹೊಟ್ಟೆ ತನ್ನನ್ನೇ ಸುತ್ತಿ ತಿನ್ನಲನುವಾಯ್ತು ಹಸಿವು ತೀರದೆ ಇನ್ನೂ ಹೆಚ್ಚಾಯಿತು ಒಂದು ಚಣದ ಬೇಡಿಕೆಯಲ್ಲ ಇದು ಜೀವಮಾನದ ಬೇಡಿಕೆ ಜನ್ಮಾಂತರಗಳ ಕುಣಿಗಳನ್ನು ನಾವೇ ತೊಡುವ ತೋಡಿಕೆಯಾಗಿ...

ಈ ಮುಖ ಆ ಮುಖ

ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ ಆ ಬಿಳಿಮಹಲಿನ ಹೂಹಾಸಿಗೆಯೊಳು ಉರುಳಾಡಿ ದಣಿಯಿತು ಕಗ್ಗಲ್ಲ ಹರಳು ಈ ಸೆರೆಗುಡಿದ, ಸೆರಗ...

ಸವಾಲು

ಶುಚಿರ್ಭೂತನಾಗಿ ಗುಡಿಯ ಕಿವುಡು ದೇವರಿಗೆ ಕೇಳಿಸಲೆಂದು ಗಂಟೆ ಬಡಿದು ಕಲ್ಲಿಗೆ ತೆಂಗಿನ ಕಾಯಿ ಒಡೆದು ಭಕ್ತಿಯ ಮಹಾಪೂರ ಹರಿಸುವುದು ಬೇಡ ಕತ್ತಲ ಕರ್ಮಗಳಿಗಾಗಿ ಬೆಳಕಿನಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ ಬೇಡ ಸುಮ್ಮನೇ ಇರುವುದಕ್ಕೆ ಬಾರದೆ ಬರಿದೆ...

ಕಪ್ಪು ಸೀಮೆ

ಸಾವಕಾಶವಾಗಿ ಕಪ್ಪು ಬೆಕ್ಕು ಬಳಿಸಾರುತ್ತದೆ ಎಂದೂ ಮಿಡಿಯದ ಸ್ಥಾಯಿಗಳಲ್ಲಿ ತಂತಿ ಕಂಪಿಸಿ ಅಪರಿಚಿತ ನಾದಗಳ ಹೊರಡಿಸುತ್ತವೆ ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ ಹತ್ತಿಕ್ಕಿದ್ದ ಅನುಭವಗಳು ಬಯಲಾಟವಾಡುತ್ತವೆ ಕಾಣದ ಹಕ್ಕಿಗಳ ಕೇಳದ ಹಾಡು ಕೇಳಿ ಬರುತ್ತದೆ ಎಂದೂ...