Home / Kavana

Browsing Tag: Kavana

ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬದಬನೆ ನಿಸರ್ಗ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೊಡುತ್ತಿದೆ. *****...

“ಎಲ್ಲಾ ತಿಂಡಿಯು ನನಗೇ ಬೇಕು ಎಲ್ಲಾ ಹಣ್ಣೂ ನನಗೇ ಬೇಕು ಆರಿಗು ಚೂರನು ಗೀರನು ಕೊಡೆನು” ಕೊಡೆನೆನ್ನುತ ಎಳ ಮಗ ಹರಮಾಡಿದನು. “ಅಣ್ಣನು ತಮ್ಮನು ಎಲ್ಲರು ಇರುವರು ಅಕ್ಕನು ತಂಗಿಯು ಎಲ್ಲರು ಇರುವರು ನಾನೂ ಅಮ್ಮಾ ಎಲ್ಲರು ಇರುವೆ...

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ! ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?! ಆದಿಶೇಷನ ತೆರದಿ ಭುಸುಗುಟ್ಟುವೆ! ಕಣ್ಣು ಗುಡ್ಡೆ… ನಿಗಿ, ನಿಗಿ… ಉರಿವ ಕುಡಿಕೆ, ಬ...

ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ...

ಬಾ ಬಾ ಓ ಬೆಳಕೇ ಕರುಣಿಸಿ ಇಳಿ ನೆಲಕೆ ನೀನಿಲ್ಲದೆ ಬಾಳೆಲ್ಲಿದೆ? ಹೋಳಾಗಿದೆ ಬದುಕೇ ಕಾಡು ಕಡಲು ಬಾನು ಏನಿದ್ದೂ ಏನು? ಮೈಯೆಲ್ಲಿದೆ ಇಡಿ ಬುವಿಗೇ ಕಾಣಿಸದಿರ ನೀನು? ನಿನ್ನ ಕೃಪಾಚರಣ ಚಾಚಿ ತನ್ನ ಕಿರಣ ಸೋಂಕಿದೊಡನೆ ಸಂಚರಿಸಿದೆ ನೆಲದೆದೆಯಲಿ ಹರಣ! ...

ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. *****...

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು, ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು. ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು ! ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ...

ಕರ್‍ದಾಗೆ ವೋಗಾದೇ! ಯೇಳಿ ಕೇಳಿ ಬರ್‍ಲೇನು ಅಳಿಯ್ನೇ? ಗೆಳೆಯ್ನೇ! ಬರ್‍ದೋ ಗ್ವತ್ತಿಲ್ಲ ವೋಗ್ದೋ ಗ್ವತ್ತಿಲ್ಲ ವತ್ತು ಗ್ವತ್ತು ಯೇನಿಲ್ಲ ಗತ್ತು ಮಾತ್ರ ಬಾಳ! ಯಿದು ಮೂರ್‍ದಿನ್ದ ಸಂತಿ ಸಿಂತಿ ಬ್ಯಾಡ ಬಾಳ! ಆದ್ರೂ ಯೆಶ್ಟೊಂದು ಬಡ್ಕೊಂಡಿ?! ಯೇನೆಲ...

ಅಂತರಂಗದಿ ಕರುಣವಿರಿಸುವ ಅಂತರಾತ್ಮ ವಿಚಾರನೆ ಭ್ರಾಂತಿಹರ ಅದ್ವೈತ ಸಿದ್ಧನೆ ಸ್ವಾಮಿ! ಚಿಂತವಿದೂರನೇ ನಿಮ್ಮ ನುಡಿಗಳ ಕೇಳಿ ತಣಿದೆನು ಸರಿ ಇದೆನ್ನುತ ತಿಳಿದೆನು ಕರುವು ತಾಯನು ಅಗಲಿದಂದದಿ ಏನೊ ಬಳಲುತಲಿರುವೆನು ಹಿಂದು ಮುಂದುಗಳೊಂದನರಿಯದೆ ಸುತ್ತ ...

ನೀನೆಲ್ಲೋ ನಾನೆಲ್ಲೋ ದೂರದೂರವಾಗಿ ಕಾಯುವೆವು ಕೂಡಲೆಂದು ಹೃದಯ ಭಾರವಾಗಿ ಜೊತೆಯಾಗಿರಲು ಇರುತಿತ್ತೇ ಇಂಥ ತೀವ್ರಧ್ಯಾನ? ನೆಲದ ಮಿತಿಯ ಮೀರಿದಂಥ ಸೂರ್ಯಚಂದ್ರ ಕಾಣದಂಥ ಕಲ್ಪನೆಗಳ ಯಾನ? ಇಂಥ ಪ್ರೀತಿಯೊ೦ದಕೇ ತಾಳಬಲ್ಲ ಕೆಚ್ಚು, ಬೇಡಿದೊಡನೆ ಬಾರದೆ ಹಾ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...