ಕರ್‍ದಾಗೆ ವೋಗಾದೇ!
ಯೇಳಿ ಕೇಳಿ ಬರ್‍ಲೇನು
ಅಳಿಯ್ನೇ? ಗೆಳೆಯ್ನೇ!
ಬರ್‍ದೋ ಗ್ವತ್ತಿಲ್ಲ
ವೋಗ್ದೋ ಗ್ವತ್ತಿಲ್ಲ
ವತ್ತು ಗ್ವತ್ತು ಯೇನಿಲ್ಲ
ಗತ್ತು ಮಾತ್ರ ಬಾಳ!
ಯಿದು ಮೂರ್‍ದಿನ್ದ ಸಂತಿ
ಸಿಂತಿ ಬ್ಯಾಡ ಬಾಳ!
ಆದ್ರೂ ಯೆಶ್ಟೊಂದು ಬಡ್ಕೊಂಡಿ?!
ಯೇನೆಲ್ಲ ವಡ್ಕೊಂಡಿ?!
ಬಲ್ವಾಸ್ರಾ ಯೆಲ್ಲಾದ್ರಾಗೇ
ಯಿಶ್ಟಾವಾಸ್ರಾಂದ್ರೇಗೇ?!
ಯಿಂಗೇದ್ಮೇಲೆ ನಿಂತ್ರೆಂಗೆ?!
ಯಿದ್ದಕ್ಕಿದ್ದಂಗೆ ಬಿಟ್ಟಿದ್ಬಿಟ್ಟೆಂಗೇ
ವೋಗಾದೆಂದ್ರೆ… ಯಾರ್‍ಗೆ ತಾನೇ ಸಾಧ್ಯ?!
ಯೆದೇದ್ಗೆಟ್ಸಿಕೊಳ್ಳಾದೇ ಬಾಕಿ!
ಅವ್ದು! ನಾನೇನು ತಲ್ಮೇಲೆ ಬಟ್ಟಿಲ್ದಾನೇ?
ನಾಯ್ಕ! ಪ್ರತಿನಾಯ್ಕ! ಜನನಾಯ್ಕ!
ಸೋಲಿಲ್ದಾ ಸರ್‍ದಾರ, ಬಾದ್ದೂರ, ವೂರ್‍ಮೀರಾ!
ಯೀ ದೇಸಾ, ಭಾಸೆ, ಜನ ನನ್ನವ್ರು!!
ಯಿನ್ನು ನನ್ನಾ ಸಮ್ನಾರು?!
ಯೀಗಾ ಮೂಲೋಕ್ನೂ ಅತ್ಲುಕೊತ್ಲೇ…
-೨-
ಅಗ್ಲೀರ್‍ಳು… ನಿದ್ಗೆಟ್ಟು, ಬುದ್ಗೆಟ್ಟು
ಕೂಡ್ಟೀ ಆಸ್ತಿ, ಸಿಮಾಸ್ನಾ…
ಯೀ ಜಗತ್ತು… ನನ್ದೆಂದು ಬೀಗಿ, ಅವ್ರಿವ್ರಾ ಬಿಲ್ಲಾಗ್ಸಿ…
ಯೀಗ್ಬಿಟ್ಟು ಯಂಗೆ ವೋಗಾದು?!
ಯೆಂತೆಂತಾ ಯಿರಿಯ್ನಾಗ್ರಿಕ್ರಿದ್ದಾರೆ…
ಅಣ್ಣಾಣ್ಣು ಮುದ್ಕ ಮುಪ್ರು, ರೋಗಿಶ್ಟ್ರು, ಭಿಕ್ಸುಕ್ರು, ಕಳ್ರು, ಸುಳ್ರು,
ಭಯೋತ್ಪಾದಕ್ರು, ಪ್ರಧಾನಿಗ್ಳು, ಮಂತ್ರಿಗ್ಳು, ಸಾಸ್ಕಾರು…
ಅಬ್ಬಬ್ಬಾ! ಪಟ್ಟಿ ಅನ್ಮೂನ್ಬಾಲ…
ಯಿಂತಾವ್ರ ಮದ್ಲು ಕರ್‍ಸಿಕೋ…
ನಂತ್ರ ನಾಽ… ಯಿದ್ದೇ ಯಿದ್ದೀನಲ್ಲ?!
ಯೇಳ್ಕೇಳಿ ಯಿವ ಜವ್ರಾಯ! ಯಿನ್ನು ಕೇಳ್ಯಾನೇ?
ಕಟ್ಕು, ನಿರ್ಧಯಿ! ನಿತ್ಯ ಪಾಶದಿ ಯೆಳೇದೇ ದೊಡ್ಕಾಸ್ಬು!
ಯಿವ್ನಿಗಿಲ್ಲ ಚುಟ್ಟಿ, ತಲ್ರೊಸ್ಗೆ?!
ಕುಂಟ್ನೇಪದಿ ಯೇನೇನೋ ಆದ್ಲೀ ನಿತ್ಯಸೆಳ್ವೆ ಕಿಂಕ್ರ!
ನರಭಯಂಕ್ರ, ವಿಧಿ ಸಂಹಾರ!
-೩-
ವರ್‍ಸು ವರ್‍ಸೂ ಅರ್‍ಸುದಿ, ಮೂರ್‍ಸಾರಿ ಬಂದ್ಬೂಂದು ವೋದಾ…
ತಲ್ನೋವ್ನಿ ಗಿರಾಕಿ, ಯೆಂದಾನ್ಸಿದಿದ್ದರ್‍ಹೇಗೇ?!
ಸಾವೆಂದ್ರೆ: ಯೇನು ವುಡ್ಗಾಟ್ಕ್ನೇ? ಆಗ್ಲಿರ್‍ಳೆ? ಮರ್‍ಳೇ…
ಯೀಗಾಗ್ಲೇ. ಅಪ್ಪಮ್ಮನಾ ಕಳ್ಕಂಡು, ನೆಪ್ಪು ಮಾಡ್ಕೊಳಾಂಗಿದೆ!!
ನಾ ಸತ್ತು… ಬದ್ಕಿ ಬರ್‍ಲೇನು? ಸತ್ಯಾವ್ನಾನೇ?
ಮಾರ್ಕೆಂಡ್ಯಾಣೇ? ಸಿವ್ಭಾಕ್ತ್ನೇ? ಸುಡ್ಗಾಡ್ಸದ್ನೇ?
ನಾವೊಬ್ಬ ಕವಿ! ಅದೂ… ಕನ್ಡಾದ ಕವಿ!!
ವೋಗಿ ವೋಗಿ, ನನ್ಗೇ ಗಂಟ್ಬಿದ್ದಿರ್‍ವೊ ಗುಟ್ಟೇನು??
ಟೊಳ್ಳು ಮನ್ಸುನೆಂದೇ? ಕವಿ ವೃದಯಿಯೆಂದೇ??
ಮೇಲಿಂದ್ಮೇಲೇ ವರ್ಗಾವಣೇ, ಅಪಘಾತ, ಸರ್ಜರೀ…
ಭರ್ಜರಿ ಶ್ಯಾಕು, ಕಿರಿಕ್ಕು.. ನರ್‍ಕಾ ಕಂಡ್ರೂ ಸಾವು ಕಂಡಿಲ್ಲಾಲ್ಲಾ?!
ನೆಲ್ಕಚ್ಚಿದ್ರೂ… ಕ್ವಚ್ಚಿವೋದ್ರು, ಪ್ರಾಣ ವೋಗಿಲ್ವಾಲ್ಲಾ?!
ಯಿವ್ಕಾಂಡಿತಾ ಯಮ್ನೇ? ಮಾಮ್ನೇ… ಅದ್ಕೆ ಗಂಟ್ಬಿದ್ದಾನೆ!!
ಭಗ್ನೀ ಗೂಟಬಾಡ್ಕಾಂಡ್ರಿಲಿಲ್ಲಿ ಯಾರಿಗ್ಬಿಟ್ಟಾನೇ?!
-೪-
ಸರ್‍ಕೀರ್‍ದೆರು ಕಣ್ಕಿಸ್ರು, ಮಾಡಬೇಡಾ ದಮ್ಮಯ್ಯ…
ಯೆಂದ್ರು ಬೆಂಬಿಡಾ.. ಮೂಢಾ! ನಿಶ್ಕಾರುಣೇ…
ಮೊಮ್ಮಕ್ಳಾ, ಮರ್‍ಮಿಕ್ಳಾ, ಆಡ್ಸಿ ಬೆಳ್ಸೆಬೇಡ್ವೇ??
ಬಂಗ್ಲೆ ಕಟ್ಟಿ, ಅವ್ರಿವ್ರಾ… ಕಣ್ಣು ಕುಕ್ಕಿಸ್ಬೇಡ್ವೇ??
ದೇಸ, ವಿದೇಶ, ಸುತ್ತಿ… ಆಸೆ, ದ್ವಾಸೆ, ಅಪ್ಡ.. ಮೆಲ್ಬೇಡ್ವೇ??
ಮಂತ್ರಿ, ಪ್ರಧಾನ್ಮಾಂತ್ರಿ, ಕನ್ಸು ಕಾಣ್ಬೇಡ್ವೇ?
ಯಾಕಿಶ್ಟು ಅವ್ಸಾರ್‍ವಾಸ್ರಾವೆಂದ್ರೂ ಕೇಳ್ಲೋಲ್ಲ!
ದರ್‍ಗೆಡಿಯಾ! ಯಮ್ಲೋಕ್ದ ಮತ್ಗೆಡಿಯಾ!
ಸರ್‍ಸಾರಾಽ… ಮುಂದ್ನಿ ಬಾಗ್ಲಿಗೆ ವೋಗೆಂದ್ರೂ ವೋಗಾಽ…
ಮುಳಾ! ಬೆನ್ಗಿಬಿದ್ದ ಬೇತ್ಳಾ!
ಪಾತ್ಳಾಕಂಡ್ರು ಕತ್ತಾಳೆಯಂಗೇ
ಕಳ್ಳಿ, ಮಳ್ಳಿ, ಯಲ್ರಲ್ಲಿ ವಿಧಿಕೈಗೊಂಬೆ
ಯೆಂಡ್ರಿ, ಮಕ್ಳು, ಬಂಧುಬಳ್ಗವೆಲ್ಲ…
ನನ್ನವ್ರೆಂದೂ ಬಿದ್ವಾದ್ಡಾದ್ದು
ಕೊನ್ಗೆ ಯಾರ್‍ಗೆ ಯಾರಿಲ್ಲ! ಯಲ್ರು ಮಸಣ್ದವ್ರೆಗೇ…
ನೀರ್‍ಮೇಲ್ನಿ ಗುಳ್ಳಿ ಮರ್‍ಳೇ…
ಯಿದ ಅರಿಯ್ಲು ಕತ್ತೆ ವಯಸ್ಸಾಗಿದ್ದು ಸುಳ್ಳೇ…
ಯೆನೆಲ್ಲ ಗೆದ್ದವ್ರುಂಟು… ಸಾವಗೆದ್ದವ್ರುಂಟೇ?
-೫-
… ನಾ ಗೆಲ್ವು ಮಾರ್ಗ ಕಂಡುಕೊಂಡೆ…
‘ಅಯ್ಯಾ ಯಮಾ ನನ್ನ ಕವಿತೆ ಕೇಳು ನೀ…
ನರ್‍ಕಾಧಿಪತ್ಯ ವೋಗಿ, ಸ್ವರ್ಗಾಧಿಪತಿಯಾಗುವೆ!
ಸುಭಿಯೋಗ ಬರ್‍ವುದು! ಅಪವಾದ ವೋಗ್ವುದು…’
‘ಅವುದಾಽ… ಕವಿಶ್ರೇಷ್ಠನೇ…
ಯಿಂತಾ ಸರಳ ಸೂತ್ರವನ್ಯಾರೂ…
ಯೀ ತನ್ಕಾ ನನ್ಗೆ ಯೇಳಿರಲಿಲ್ಲ!’
‘ಯಮಾನೀ ನಮ್ಮಂಗಿರುವೆ…
ನೀ ಕಪ್ಪಿರುವೆ! ಯಿಗೋ ನಾ ಕಪ್ಪಿರುವೆ!
ನನ್ನ ಯೆಸ್ರು, ನಿನ್ನ ಯೆಸ್ರೂವಂದಿದೆ!
ರೂಪು, ಗುಣ, ವಾಸ, ವಾಸ್ನೆ ಯಲ್ಲ ವಂದಿದೆ!’
‘ಆಯ್ತು ನಿನ್ನ ಕಳ್ಕಳ್ಗೆ ಮೆಚ್ಚಿದೆ! ಮಾನ್ವರು ಪಕ್ಷಪಾತ್ಗಿಳು!
ಕವಿತೆ ವೋದು! ನನ್ಗೆ ವೊಳಿತಾದ್ರೆ ನಿನ್ಗೆ ಜೀವ್ದಾನ!’
‘ಆಗ್ಲೀ ಯಮಧರ್‍ಮಾ… ನನ್ನ ಯಿಶ್ಟು ಕವಿತ್ಗೆಳ
ಆಕ್ಳಿಸ್ದೆ, ತೂಕ್ಡಿಸ್ದೆ, ಕೇಳ್ದಿಲ್ಲಿ…
ನಿನ್ನ ರೂಪು, ಗುಣ, ವುದ್ದೆ, ಸಿದ್ಧಿಸುವುದು ಸತ್ಸಿದ್ಧಾ!’
‘ವ್ಞು… ವೋದುವಂತ್ವನಾಗು!’
‘……………..
………………’
‘ಯಮುಂಡಾಽ… ಯಿದ್ಯಾವ ಭಾಸೇ ನರುಡಾಽ…?!
ಸಾಕು ನಿಲ್ಲಿಸು… ಸಾಕು…!
ಸಂಸ್ಕೃತ, ಪಾಳಿ, ಯಿಂದೀ, ಯಿಂಗ್ಲೀಶ್… ತೆಲ್ಗು… ತಮಿಳು… ಅಬ್ಬಾ!
ಯೀ ಆರು ಭಾಸೆಗಳಲ್ಲಿದ್ರೆ ವೋದು!
ನಿನ್ಗೆ ಜೀವ್ದಾನವಿದೆ…’
‘ಯಮಾಽ… ಕನ್ನಡ… ಕನ್ನಡವೆಂದ್ರೆ…
ಗುಂಡಿಗೆ ಬಾಯಿಗೆ ಬರುವುದು!
ರಕ್ತ ಸಂಚಾರ ವುಕ್ಕಿ ಹರಿವುದು!
ಕಾಲ್ಗುಳು ಶಿವತಾಂಡವ ಗೈಯುವುವು!
ಜೈಲಿಗೆ ಹೋಗಲು ಸಿದ್ಧ, ಹೊಳೆಗೆ ಹಾರಲೂ… ಬದ್ಧ!
ಮುಕ್ಕೋಟಿ ದೇವತೆಗಳ ಧರೆಗಿಳಿಸುವೆ…’
‘ಅದ್ಭುತ! ಆಗಾದ್ರೆ ಕನ್ನಡ ಕವಿತೆಗಳ ವೋದು…
ನನ್ನೀ ಜೀವ್ನ ಪಾವ್ನವಾಗ್ಲಿ…
ಬೇಗ ಸಂಕಲ್ಪ ಸಿದ್ಧಿಸಲಿ…’
‘ವುರುಪಲಿ ಕವಿತೆಗಳ ವಾಚ್ಸಿದೆ…
ತಲೆಬುಡ ತಿಳಿದೆ, ತಲ್ತೆಲೇ ಕೆರ್‍ಕಂಡಾ…
ಯಮುಂಡಾ… ಸೊಗ್ಸಾಗಿ ನಿದ್ದೆಗೆ ಜಾರಿದ!’
‘ಮತ್ತೆ ಮತ್ತೆ ಬರೀತಾಽ… ತಾ ಕುಂತೇ…
ಯಮಕಣ್ಣು ಬಿಟ್ರೆ ಸಾಕು!
ಕವಿತೆ ವೋದುವೆ…
ಮತ್ತೆ.. ಮತ್ತೆ ನಿದ್ದೆಗೆ ಜಾರಿಸುವೆ…’
‘ನಾ ಬದುಕುಳಿವೆ!’
‘…………….’
*****