
ತುಂಬಿದೊಡಲ ಅಬಲೆ ಮೇಲೆ ಕಾಮಾಂಧರ ನರ್ತನ ತಾಯೆ ನಿನ್ನ ಒಡಲ ಮೇಲೆ ನಿತ್ಯ ರಕ್ತ ತರ್ಪಣ ಅರಳಲಿಲ್ಲಿ ತಾವು ಎಲ್ಲಿ ಫಲಪುಷ್ಪದ ನಂದನ? ಅತ್ತು ಅತ್ತು ಸತ್ತ ಭ್ರೂಣ ಬಿಕ್ಕಿ ಬಿಕ್ಕಿ ಅತ್ತ ’ಬಾನು’ ಜೀವ ಜೀವದಾರ್ತನಾದ ಕಾಣಲಿಲ್ಲ ಕುರುಡು ಜನಕೆ ಕೇಳಲಿಲ್...
ಒಳಗೆ ಇಳಿದು ಬಾ ಇಳಿಯುವಂತೆ ನೀ ಮಳೆಯು ಮಣ್ಣ ತಳಕೆ ಕೆಸರ ಮಡಿಲಿಂದ ಕೆಂಪನೆ ಕಮಲವ ಮೇಲೆತ್ತುವ ಘನವೇ ಹೂವಿನ ಎದೆಯಲಿ ಬಗೆಬಗೆ ಪರಿಮಳ ಬಿತ್ತುವಂಥ ಮನವೇ ನಿಂತ ಗಿರಿಗಳಿಗೆ ನಡೆಯುವ ನದಿಗಳ ಕರುಣಿಸುವಾ ಒಲವೇ ಆನೆ ಅಳಿಲುಗಳ ಅಂತರವೆಣಿಸದೆ ತಾಳುವಂಥ ನ...
ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್‌ಅಟ್ಯಾಕ್ ಆಗಿಬಿಡುವುದು. *****...
ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ. ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ! ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ. ೧ ಒಲೆ ಮೇಲಿನ, ಹೊಸತು ಮಡಿಕೆ, ಕುದಿವ...
ಯಾರು ಏನಂದರೇನು ಯಾರಿಗೆ ಹೇಗಿದ್ದರೇನು ಅವರವರ ಮಗು ಅವರಿಗೇ ಚೆನ್ನ ಪುಟಿಕಿಟ್ಟ ಚೊಕ್ಕ ಚಿನ್ನ ಮೂಗು ಮೊಂಡಾಗಿದೆಯೆಂದಿರಾ? ಬೇಟೆಗಾರನ ಕೈಯ ಬಾಣ ಜೋಕೆ ಕಣ್ಣು ಗುಲಗುಂಜಿಯೇ? ದೇವರ ಮುಂದೆ ಹಚ್ಚಿಟ್ಟ ದೀಪ ದೂರವಿರಿ ನಕ್ಕರೆ ಭಯವೇತಕೆ? ಮೊಗ್ಗು ಬಿರಿ...
ನಾನು ನಾನು ಎಂಬ ಮಾಯೆ ಏಳುವುದೆಲ್ಲಿಂದ? ಎಲ್ಲವನೂ ಅಲ್ಲಾಡಿಸಿ ಹಾಯುವುದೆಲ್ಲಿಂದ? ಬುದ್ಧಿಯೇ ವಿದ್ಯೆಯೇ ಜೀವ ಹೊದ್ದ ನಿದ್ದೆಯೇ, ನೆಲ ಜಲ ಉರಿ ಗಾಳಿಯಿಂದ ಎದ್ದು ಬಂದ ಸುದ್ದಿಯೇ? ನಾನು ಎಂಬ ಹಮ್ಮಿಗೆ ತನ್ನದೆ ನೆಲೆ ಎಲ್ಲಿ? ಯಾವುದೊ ಬೆಳಕನು ಕನ್ನ...
ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು? ಬಾರಯ್ಯ ಬಾ!! ಶಕಪುರುಷ… ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?! ಈ ನಿನ್ನ ಬರುವಿಕೆಯಲ್ಲಿ?! ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ! * ಬರುವೆ! ಬ...
ತಿಳಿ ನೀಲಿಯಾಗಸದಿ ಕರಿಮುಗಿಲ ಹಿಂಡು ‘ಜೋಕುಮಾರನೆ ಚಂದಿರ’ ಮರೆತೆಯಲ್ಲೋ ಬೆಳ್ಳಂಬೆಳಕಿನ ನಗುವ ಉಂಡು ಮಲಗುವ ಮಂಚ ಅವ್ವನ ಹರಿದ ಸೀರೆಯ ಕೌದಿ ನಿನ್ನ ಅಪ್ಪುಗೆಯಿರದೆ ಚಂದಿರ ಮೌನ ತಾಳಿವೆಯಲ್ಲೋ ತಣ್ಣಗೆ ಹೆಬ್ಬಾವಿನೊಲು ಹೊರಳುವ ಹಾದಿಗೆ ಸಾಲು ದೀಪಗಳ...













