ಕಾಲಪುರುಷನ ಕುರಿತು

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು?
ಬಾರಯ್ಯ ಬಾ!! ಶಕಪುರುಷ…
ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?!
ಈ ನಿನ್ನ ಬರುವಿಕೆಯಲ್ಲಿ?!
ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ!
*

ಬರುವೆ! ಬಂದೇ ಬರುವೆ!!  ಸಂಕ್ರಮಣ ರಾಮ, ನೀ ಚೆನ್ನಿಗರಾಮನಲ್ಲವೇ?
ವರ್ಷ ವರ್ಷ… ಅದೆಂಥಾ ಹರ್ಷವಯ್ಯ ನಿನಗೆ??
ನೀ ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಹುಲಿ, ಸಿಂಹನೇರಿ
ಬರುವೆಯಲ್ಲಯ್ಯಾ?!
ನೀ ಸಾಮನ್ಯನೇನಯ್ಯ?! ಏನನೇರಿ ಬಂದರೂ, ಕುಸ್ತಿ ಒಗೆವೆನಲ್ಲಯ್ಯ?!
*

ನೀ ಬರುವ ಹಾದಿಲಿ: ಕೊಲೆಂಟು, ಸುಲಿಗೆವುಂಟು, ರಕ್ತರಂಜಿತ,
ವರ್ಣರಂಜಿತ, ವಿನಾ ಕಾರಣ ಅವಮಾನ, ಅಪಮಾನವುಂಟು!
ಯುದ್ಧ ಘೋಷಿತ, ಸುನಾಮಿ, ಲೈಲಾ, ಗುಡುಗು, ಸಿಡಿಲು,
ಅಬ್ಬಬ್ಬಾ… ವಿಮಾನ, ಅಗ್ನಿದುರಂತ, ತೈಲ ಸೋರಿಕೆ…
ಎನೆಲ್ಲ ಉಬ್ಬರವಿಳಿತ! ಬರೀ ವಿಭ್ರಮ ಭ್ರಮರಿ ವಿದ್ವುಂಸ ಕುಕೃತ್ಯಗಳೇನು?!
*

ದೇಶದಾ ಉದ್ದಗಲಕೂ ಏನೆಲ್ಲ ಲೇಲೆ, ಹಳವಂಡಗಳಯ್ಯ??
ಎಳೆ ಗರ್ಭಗಳ ಅರಾತುರಿ ಸೀಳಿದ ಖೂಳ ರಕ್ಕಸ ನೀಽ…
ಕಟ್ಟೆಯೊಡೆದು, ಸುದರ್ಶನ ಚಕ್ರವಿಡಿದು ಝೇಂಕರಿಸುತ್ತಾ
ರಾಹು ಮಂಡಲಗಳ ದಾಟಿ, ವೃತ್ತಾಕಾರದಲಿ ನೀ ಬಾರಯ್ಯ! ಬಾ…
*

ಎನು ನಿನ್ನ ಲೀಲೆಯೋ? ಮಾಯೆಯೋ ಜನನ… ಮರಣವೋ?
ನಾಳೆ ನಾಡಿದ್ದು ನಿನ್ನೆ ಮೊನ್ನೆಗಳ ಎಡತಾಕಿಸುತ್ತಾ
ಸ್ಥಾವರ ಜಂಗಮ, ಸಂಗಮಗಳ ಜಪಿ ಜಪಿಸುತ್ತಾ
ಕಂಪ್ಯೂಟರ್‍, ಟೀವಿ, ಇಂಟರ್‌ನೆಟ್, ಐಟಿ, ಬಿಟಿಗಳಲ್ಲಿ ನಿನ್ನ ಜಾಲವೋ…
*

ಸೆಲ್‌ಪೋನಿಂದಲೇ ಗದೆ ಬಿಟ್ಟು, ಬಾಣತೊಟ್ಟು, ಮಕ್ಕಳ್ಹೆರುವ
ಸಹಸ್ತ್ರ ಪುರುಷ ಬಾರಯ್ಯ! ಬಾ…! ನವ ಶತಮಾನದ ತೇಜಾಽ…
ಯೇನೆಲ್ಲ ಅವತಾರ, ಲೇಲೆ, ವಿನೋದ, ಭೀಕರವಯ್ಯ?!
ಸುಮ್ಮನಿರೆ ಉಂಡಬಾನ, ಕುಡಿದ ನೀರು ಪಥ್ಯವಾಗದೇನಯ್ಯ?!
*

ಅಯ್ಯ ದುರುಳ ದುರ್‍ಯೋಧನ, ದುಶ್ಯಾಸನ, ಶಕುನಿ, ಕಂಸ, ಕೀಚಕ,
ರಾವಣ, ಕೊಂಡಿಮಂಚಣ್ಣ, ಮಲ್ಲಪ್ಪಶೆಟ್ಟಿ, ಮೀರ್‌ಸಾಧಿಕ್…
ಕುಂಭಕರ್ಣ, ಸೂರ್ಪನಖಿ, ಮಂಥೆರೆ, ಮಂಡೋದರಿ, ಅಹಲ್ಯೆರೆಲ್ಲ
ಅರಮನೆ, ಸೆರೆಮನೆಯೊಳಗಿಲ್ಲ!
ಮನೆ, ಮನಗಳಲ್ಲಿ, ರಕ್ತಾ ಬೀಜಾಸುರರಾಗಿ, ಮೃತ್ಯುಂಜಯರಾಗಿ
ವಿಜೃಂಭಿಸಿಹರಲ್ಲ?!
ನಿನ್ನ ಆಗಮನ, ನಿರ್ಗಮನ ಮಾತ್ರ ಎದ್ದು ಕಾಣುವುದು!
*

ಅಯ್ಯೋ ಕಗ್ಗತ್ತಲೆ ತುಂಬಿ ತುಳುಕಿ, ಹಗಲೇ ಕೊಲೆ, ಸುಲಿಗೆ, ದರೋಡೆ,
ಮಾನಭಂಗವೇ?? ಶಾಸಕರ ಕತ್ತೆ, ಕುದುರೆ ವ್ಯಾಪಾರವೇ…
ಕಾಲಪುರುಷನ ಹೆಸರಲಿ, ಸಾಲೆ, ಕುತ್ತೆ, ಗದ್ದುಗೆ ಹಿಡಿದು, ಗುದ್ದಾಟ
ನಡೆಸಿಹರಲ್ಲ?! ವಿಶ್ವಾಸ ಮತಕೆ ಷಡ್ಯಂತ್ರ ಬಳಸಿಹರಲ್ಲ…
ಉದ್ಧಾರ, ಪ್ರಗತಿ, ಸುಧಾರಣೆ, ಸಹಾಯ ಹಸ್ತ, ಬರೀ ಕನವರಿಕೆಗಳೇ ಆದವಲ್ಲಾ…
ಬುದ್ಧ, ಬಸವ, ಅಂಬೇಡ್ಕರ್‍, ಮದರ್‍ ತೆರೀಸಾರಂಥವ್ರಿನ್ನು ಬರಲಿಲ್ಲ ಯಾಕೆ??
*

ಈ ನಿನ್ನ ಆಗಮನಕೆ, ತಳಿರು ತೋರಣಕಟ್ಟಿ,
ರಾತ್ರಿಯೆಲ್ಲ ಕುಡಿದು, ಕುಣಿದು, ಕುಪ್ಪಳಿಸಿ,
ಸಿಡಿಮದ್ದು ಸಿಡಿಸುವುದೂ ವ್ಯರ್ಥ…
ಇದು ಹೀನ ಸಂಸ್ಕೃತಿಯಲ್ಲದೆ ಇನ್ನೇನು?
ನೀ ಬಂದು ಕಿಸುದು ಗುಡ್ಡೆ ಹಾಕಿದ್ದಾರೂ ಇನ್ನೇನು?!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಡ ಸರಸ
Next post ನಮ್ಮೂರ ಹೋಳಿ ಹಾಡು – ೯

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…