
ಕೇಳಿದ್ದೆವು ಗಗನಸಖಿಯರೆಂದಷ್ಟೆ ಯಾವ ಮಾಯಾಲೋಕದವರಿವರು- ತೆಳ್ಳನೆಯ ದೇಹ ಗುಲಾಬಿ ಬಣ್ಣ ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು ತಿಳಿನಗೆ ಹೊಳಪು ಕಣ್ಣು ತುದಿಗಾಲಲಿ ನಡೆವ ನವಿಲೆಯರು ಬೆಡಗು ಬಿನ್ನಾಣಗಿತ್ತಿಯರು ಮೆಲ್ಲಗೆ ಕೈ ಮುಗಿದು ಸ್ವಾಗತಿಸಿ ...
ಹೊಳೆಯ ಆ ದಂಡೆಯಲಿ ಸುಂದರ ಜನ ಕಣ್ಣ ಕುಕ್ಕುತ್ತಾರೆ ತುಂಬಿ ಹರಿವ ಹೊಳೆ ಸಿಹಿ ನೀರು ಅವರ ಹೊಲಗದ್ದೆಗಳಿಗೆ ಅಲ್ಲಿ ಮೀಯುವ ಮೀನು ಅವರ ಗಂಗಾಳಕೆ ಆ ಹಸಿರು ಕಾಡು ಅಲ್ಲಿ ಜಿಗಿದಾಡುವ ಜಿಂಕೆ ಕುಣಿವ ನವಿಲು ಉಲಿವ ಹಕ್ಕಿಗಳು ಅವರ ಸಂತೋಷಕೆ ಕಣ್ಣು ಕುಕ್ಕ...
ಹರಿಯುವ ಹೊಳೆಗೂ ಸುರಿಯುವ ಮಳೆಗೂ ಏನೇನಿದೆಯೋ ಸಂಬಂಧ! ಬೆಳಕಿನ ಹನಿಗೂ ಹಕ್ಕಿಯ ದನಿಗೂ ಇಲ್ಲವೆ ಹೇಳಿ ಒಳಬಂಧ? ನಾರುವ ಕಸಕೂ, ಹೂ ಪರಿಮಳಕೂ ಇದ್ದೇ ಇದೆ ಬಿಡಿ ಮಾತುಕಥೆ; ಹಣ್ಣಿನ ಒಳಗೇ ಬೀಜವಿಡಲು ಮರ ಉಪಾಯವಲ್ಲದೆ ಇದ್ದೀತೇ? ಕುಡಿಯಲು ಬಾರದ ಕಡಲಿನ ...
ದೇವಲೋಕದ ಹೂವು ಭೂಲೋಕಕಿಳಿದಂತೆ ಭಾವವೆನ್ನೊಳಗೆ ಬಂತು ಸಾವಿಗಂಜಲು ಬೇಡ ಪರರಿಗಳುಕಲು ಬೇಡ ನೋವುಂಟೆ ಬಕುತರಿಗೆ? ಹಸುಳೆ ಕೇಳೆಂದು ಸಾಲು ದೀವಿಗೆಯಂತೆ ತಾರೆ ನೆಲಕಿಳಿದಂತೆ ಪೊಳೆವ ಮಾಣಿಕ್ಯದಂತೆ ಕೋಲು ಮಿಂಚೊಡೆದಂತೆ ಫಕ್ಕನೇ ನಕ್ಕಂತೆ ಬೆಳಕು ನೋಡೆಲ...
ಸದಾ ಕಿಚಿಪಿಚಿಗುಡುವ ಗೊಂದಲದ ಗುಬ್ಬಿ ಗೂಡು ಕೇಳುವುದಿಲ್ಲ ಒಂದಾದರೂ ಸುಮಧುರ ಹಾಡು ಬಿಡುವಿಲ್ಲದೇ ತುಯ್ಯುವ ಒಂದು ವೀಣೆ ನಿರಂತರ ಕಾಡುವುದೇಕೋ ಕಾಣೆ! ಮಧ್ಯಂತರದಲಿ ನಿಂತ ನಾನು-ನನ್ನಂತವರು ದವಡೆಯ ಕೊನೆಯ ಹಲ್ಲುಗಳನ್ನು ಅರ್ಧವಷ್ಟೇ ಕಂಡವರು. ಹಳತು...
ಗ್ರೀಸ್ ಸಖಿ ಹಿಮಗಲ್ಲಲಿ ಕೊರೆದ ಸುಂದರಿ ಲಿಪ್ ಸ್ಟಿಕ್ ತುಟಿತೆರೆದು ಬಳುಕಿ ಬಿನ್ನಾಣವಾಗಿ ಡ್ರಿಂಕ್ಸ್ ಬೇಕಾ…. ಹೆಸರುಗಳೇನೇನೋ ಹೇಳಿ ಗ್ಲಾಸ್ ಹಿಡಿದೇ ಇದ್ದಳು. ಬೆಚ್ಚಿಬೆರಗಾಗಿ ತಲೆ ಅಲುಗಾಡಿಸಿ ಕೇವಲ ತಂಪುನೀರು ಕೇಳಿದರೆ ತುಳು ತುಳುಕಿ ...
ಕೂತಲ್ಲಿ ಕೂಡಲಾರದ ನಿಂತಲ್ಲಿ ನಿಲಲಾರದ ಮನವೀಗ ಕಲ್ಲು ಬಿದ್ದ ಕೊಳ ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ? ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು ನನಗಾದರೂ ಏನು ಗೊತ್ತಿತ್ತು…? ಗೋಡೆಗಳು ಕೇಳಿಸಿಕೊಳ್ಳುವುದು ಹಲ್ಲಿಗಳು ಮಾತನಾಡುವುದು ಅ...
ಈ ಆಗಸ ಈ ತಾರೆ – ಜುಳು ಜುಳನೆ ಹರಿವ ಜಲಧಾರೆ ಮುಗಿಲ ಮಲೆಯೆ ಸಾಲೇ-ಆಹಾ ಯಾರದೊ ಈ ಬಗೆ ಲೀಲೆ! ಬೆಳಗ ಕಾಯ್ದ ಹಿಮವೋ – ಹಿಮವ ಮೆಲ್ಲನೆ ನೇಯುವ ತಮವೋ ತಮವ ಕಳೆದು ಹಿಮ ಓಡಿಸುವ ಬೆಚ್ಚನೆ ಬಿಸಿಲಿನ ಕ್ರಮವೋ! ಹೆಣ್ಣಿನ ಕಣ್ಣಿನ ದೀಪ ಉರಿಸ...













