ಕಂದೀಲಿನ ಬೆಳಕಿನಲಿ
ಬೊಚ್ಚು ಬಾಯಿ ಮುದುಕಿಯ
ಕನವರಿಕೆ, ಕದಲಿಕೆ
ಒಂದೊಂದು ನೆರಿಗೆಯಾಳದಲೂ
ಒಂದೊಂದು ನೆನಪು
ಒಂದಿಷ್ಟು ಪುಳಕ
ಸಾಕಷ್ಟು ದುಗುಡ
ಆಳ ಆಳಕ್ಕಿಳಿದಂತೆಲ್ಲ
ನೆನಪು ಬೇರುಗಳಿಳಿಸಿದ
ಕಿತ್ತೆಸೆಯಲಾರದ
ಹುಳ ಕೊರೆದ ಕಾಂಡ
ಮುಸ್ಸಂಜೆಯ ಇಳಿ ಹೊತ್ತಿನಲಿ
ಕಪ್ಪು ಕರಾಳ ಕತ್ತಲೆಯ ಭೀತಿ
ಎಲ್ಲಿ ಸಲ್ಲುವೆನೋ, ದುಮ್ಮಾನ
ಕಣ್ಣೀರಿಲ್ಲದ ಗುಳಿ ಬಿದ್ದ
ಕಣ್ಣಿನಾಳದಲಿ
ಏನಿಲ್ಲ, ಏನುಂಟು?
ಹುಡುಕಾಟ, ಸೆಣಸಾಟ
ಈಗಿರುವುದಷ್ಟೆ ಸತ್ಯ
ಮಿಕ್ಕೆಲ್ಲವೂ ಮಿಥ್ಯ
*****