ಜನಶಕ್ತಿ

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು || ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ ಹೊಟ್ಟೆಕಟ್ಟುವ ಜನರು ಸಾಮಾನ್ಯರು ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ ದೇಶಕಟ್ಟುವ ಶಕ್ತಿ ಸಾಮಾನ್ಯರು ||...

ನಿರೀಕ್ಷೆ

ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು ತುಳಿದೀಯ ಗೆಳೆಯ ಅದು ನಮ್ಮ ನೋವು ಭೂತ ಬಿತ್ತಿದ ಬೀಜ ನರಳಿತ್ತು ಜೀವ ನೆತ್ತರಿನ ಚಿತ್ತಾರ ಬೆಳಗಿನ ಜಾವ ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು ನೀರೊಳಗೆ ತೇಲುತಿವೆ...

ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ ಊರು ಸೇರುವುದೇ ಒಂದು ಬದುಕು. ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ. ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು ಹಾಡು ಹರಿದು ಚಿಂದಿಯಾಗಿ ಚೀರುತ್ತವೆ. ಸಾಯಬೇಕೆನ್ನುವ...

ಕನಸಿನ ಕೋಣೆ

ಕರೆಯುತ್ತೇನೆ ಮನಸೇ ಕನಸಿನ ಕೋಣೆಯೊಳಗೆ ಬೇಲಿಗಟ್ಟಿದ ಭಾವದೊಳಗೆ ಅಲ್ಲಿ ಮಾತಾಡೋಣ ಮೌನದ ಬಗೆಗೆ ಮೌನವಾಗೋಣ ಮಾತಿನ ಬಗೆಗೆ ಬೆಳೆಯುತ್ತ ಬೆಳೆಯುತ್ತ ಹೋಗೋಣ ಸಿಕ್ಕದ ಸುಖವನ್ನು, ಹುಡುಕುತ್ತ ಹುಡುಕುತ್ತ ಹೋಗೋಣ ಕಾಣದ ಮುಖವನ್ನು ಗುಬ್ಬಚ್ಚಿ ಗೂಡಲ್ಲಿ...

ಮಡದಿಯೊಂದಿಗೆ

ಹುಟ್ಟಿದ್ದು ಉರಿಬಿಸಿಲ ಒಡಲಲ್ಲಿ ಬೆಳೆದದ್ದು ಬೆಳದಿಂಗಳ ಕನಸಿನಲ್ಲಿ ಬದುಕಿದ್ದು ನಿರೀಕ್ಷೆಗಳ ನೆರಳಲ್ಲಿ; ನಮಗೆ ಭೋಗವೃಕ್ಷವೂ ಬೇಡ ಬೋಧಿವೃಕ್ಷವೂ ಬೇಡ; ಬಾಳ ಉರಿಯಲ್ಲಿ, ಸಂಕಟದ ಸಿರಿಯಲ್ಲಿ ಜೊತೆಯಾಗಿ ಉಂಡಿದ್ದೇವೆ ಜೊತೆಯಾಗಿ ಕಂಡಿದ್ದೇವೆ ಮಕ್ಕಳ ಪಡೆದು ಮಕ್ಕಳಾಗಿದ್ದೇವೆ...

ಪಿಸುಮಾತು

ಪಿಸುಮಾತು ಆಡೋಣ ಬಾ ಕತ್ತಲೆ ಬೆಳಕೆಂಬ ಮಾಯೆ ಬರಿ ಬೆತ್ತಲೆ! ಬೆಳಕು ಬೆಂಕಿಯಾಗುವುದ ಕುರಿತು ಬೆಂಕಿ ಬೆಳಕುಗಳ ಅಂತರ ಅರಿತು ಬೆಂಕಿಯೇ ಬೆಳಕಾಗದ ಹೊರತು ಕಲ್ಲು ಅರಳೀತು ಹೇಗೆ? ಮಾತು ಮೀಟೀತು ಹೇಗೆ? ಪಿಸುಮಾತು...

ತಬ್ಬಲಿ ಮಗು

ಬೋಳು ಮರಗಳ ಮೇಲೆ ಗೋಳು ಕಾಗೆಯ ಕೂಗು ಸಂತೆಗದ್ದಲದ ನಡುವೆ ಚಿಂತೆ-ತಬ್ಬಲಿ ಮಗು! ಇತಿಹಾಸ ಗೋರಿಯ ಮೇಲೆ ಉಸಿರಾಡುವ ಕನಸಿನ ಬಾಲೆ ತಂತಿ ಸೆಳೆತದ ಕರ್ಣ ಕುಂತಿ ಕರುಳಿನ ಮಾಲೆ ಸುತ್ತ ಹುತ್ತದ ಕೋಟೆ...

ತವರಿನ ಜನ

ಕತ್ತಲ ಮಗ್ಗದಲ್ಲಿ ಬೆಳಕು ನೆಯ್ದವರು ಬೆವರಿನ ಜನ, ನಾವು ತವರಿನ ಜನ. ನಾಡ ಒಳಿತಿಗೆ ಸುಖವೆಲ್ಲ ಸುಟ್ಟು ರಕುತದ ಹನಿಹನಿಯನು ಕೊಟ್ಟು ಕನಸಿಗೆ ಕಿವಿ ಕಣ್ಣು ಕೊಟ್ಟೆವು ಬರಿ ಬೆತ್ತಲೆಯ ಉಟ್ಟೆವು. ಗುಡಿ ಗುಡ್ಡಗಳಲ್ಲಿ...