ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು
ತುಳಿದೀಯ ಗೆಳೆಯ ಅದು ನಮ್ಮ ನೋವು
ಭೂತ ಬಿತ್ತಿದ ಬೀಜ ನರಳಿತ್ತು ಜೀವ
ನೆತ್ತರಿನ ಚಿತ್ತಾರ ಬೆಳಗಿನ ಜಾವ
ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು
ನೀರೊಳಗೆ ತೇಲುತಿವೆ ನೂರಾರು ವ್ಯಥೆಗಳು
ಮುರುಕು ಮನೆಯೊಳಗೆ ಹರಕು ಬದುಕು
ಆರಿಹೋಗಿದೆ ಒಲೆಯು ಉರಿಯ ತವಕ!
ಹೊಸ್ತಿಲಿಗೆ ಬಡಿದ ಮೊಳೆ
ಕೈತುಂಬ ಹಸಿರು ಬಳೆ
ಕುಂಕುಮದ ಕೆಂಪು ನಗೆ ಚೂರಾಗಿದೆ;
ಮೋಟು ಗೋಡೆಯ ಮೇಲೆ
ಮಿಣುಕು ದೀಪದ ನೋಟ
ಮತ್ತೆ ಮುತೈದೆತನಕಾಗಿ ಕಾಯುತ್ತಿದೆ.
*****