ತಬ್ಬಲಿ ಮಗು

ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!

ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ

ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****

One thought on “0

  1. ನಿಮ್ಮ ಕವಿತೆ ಯೊಳಗೆ ಇಣುಕಿದರೆ ಕಾಣುತಿದೆ ಧರೆಯ ಬರ . ಹೊರಲಾಗದೆ ಹೊಣೆ. ಇರಿಯುತಿದೆ ವಿವೇಚನೆ. ಕಾಣದಾಗಿದೆ ದಾರಿ ಬಂದು ಕೂತಿದೆ ಮಾರಿ .,. ಮಾರಾಟ ವಾಗುತ್ತಿದೆ ದೇಶ ಉಳಿಸಲು ಬರಲೋಲ್ಲ ಈಶ
    ಭರವಸೆಯ ಬೆಳಕು ಬರಬಹುದು ಬದುಕು ಬದುಕು ಬದುಕು ತೊಲಗಲಿ ಹುಳುಕು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಯ ನಂಬಿದವರಿಗೆ
Next post ಕಟುಕ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…