ಹರಿಯ ನಂಬಿದವರಿಗೆ ಮೋಸವಿಲ್ಲ|
ಹರಿಯ ನಂಬಂದಲೇ
ಮೋಸಹೋದರು ಎಲ್ಲಾ|
ಹರಿಯ ನಂಬಲೇ ಬೇಕು
ಸತ್ಯವನರಿಯಲು ಬೇಕು||
ಹರಿಯ ನಂಬಿ ಪಾಂಡವರು
ಸಕಲವನು ಮರಳಿ ಪಡೆದರು|
ಹರಿಯ ನಂಬದಲೆ ಕೌರವರು
ರಾಜ್ಯಕೋಶ, ಪ್ರಾಣಗಳ ಕಳಕೊಂಡರು|
ಹರಿಯ ನಂಬಿ ಅಜಮಿಳನು
ಮೋಕ್ಷದಯಪಾಲಿಸಿಕೊಂಡನು|
ಹರಿಯ ನಂಬಿ ಕನಕದಾಸರು
ಶ್ರೀ ಹರಿಯ ದರುಶನಭಾಗ್ಯ ಪಡೆದರು ||
ಹರಿಯಪಾದ ನಂಬಿ ಬಲಿಚಕ್ರವರ್ತಿಯು
ಶ್ರೀ ಹರಿಯ ಪಾದವ ಸೇರಿಕೊಂಡನು|
ಹರಿಯ ನಂಬದಲೆ ಕರ್ಣನು ತನ್ನ
ಅವಸಾನವನು ತಾನೇ ತಂದುಕೊಂಡನು|
ಹರಿಯ ಸೇವೆಯ ಮಾಡಿ
ಗೊರ ಕುಂಬಾರನು ಕಷ್ಟಸಮಯದಿ
ಹರಿಸೇವೆಯನು ಪಡೆದನು||
ಹರಿಯ ನಂಬಿ ಶ್ರೀಪುರಂದರದಾಸರು
ಸಕಲ ಸಂಪತ್ತ ಹರಿಗೆ ಅರ್ಪಿಸಿ
ಆನಂದವ ಅನುಭವಿಸಿದರು|
ಹರಿಯ ನಂಬದೆ ಮಾವ ಕಂಸ
ಹರಿಯ ನಂಬದ ಹತ್ತುತಲೆಯ ರಾವಣ
ಹರಿಯಿಂದಲೇ ಹತರಾದರು||
*****