ಈ ಕಾರು ಇನ್ನು ೬ ತಿಂಗಳಲ್ಲಿ ಭಾರತೀಯ ಹೆದ್ದಾರಿಗಳಲ್ಲಿ ಚಲಿಸಲಿದೆ. ಡೈಮ್ಲರ್ ಕ್ರೈಸೃರ್ ಕಂಪನಿ ಮರ್ಸಿಡಿಸ್‌ಬೆಂಜ್ ಕಾರುಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಕಂಪನಿಯು ಪ್ರತಿವರ್ಷ ಕೇವಲ ೧,೦೦೦ ಮೇಬ್ಯಾಚ್‍ಗಳನ್ನು ಉತ್ಪಾದಿಸಬೇಕೆಂದು ಮಿತಿಹಾಕಿ ಕೊಂಡಿದೆ. ಆದರೆ ಈ ಕಾರಿನಲ್ಲಿ ೫ ಕೋಟಿ ಬೆಲೆ ಬಾಳುವಂಥಾದ್ದೇನಿದೆ ಎಂಬ ಪ್ಪಶ್ನೆ ಸಾಮಾನ್ಯವಾಗಿ ಮೂಡುತಿದೆ. ಹಾಗಾದರೆ ನೋಡಿ – ಇದರಲ್ಲಿಯ ಆಂತರೀಕ ವಿನ್ಯಾಸಗಳನ್ನು ೨೦ ವಿಧಗಳಲ್ಲಿ ಬದಲಿಸಬಹುದು. ಬಳಸಲಾಗುವ ಚರ್ಮಕ್ಕೆ ವಿವಿಧ ಆಯ್ಕೆಗಳಿವೆ. ಮರದಲ್ಲಿ೩ ವಿಧ ಮತ್ತು ಬಾಹ್ಯ ಬಣ್ಣದಲ್ಲಿ ೧೭ ವಿಧಗಳಲ್ಲಿ ಆಯ್ಕೆಮಾಡಿಕೊಳ್ಳಬಹುದು. ಎರಡು ಡಜನ್‌ಗೂ ಹೆಚ್ಚು ಆಧುನಿಕ ತಾಂತ್ರಿಕ ಐಷಾರಾಮವನ್ನು ಒಳಗೊಂಡಿದೆ. ಸೀಟ್‌ಗಳಲ್ಲಿಯೇ ವೆಂಟಿಲೇಷನ್ ಇದೆ, ೨.೬೮ ಮೀಟರ್ ಒಳಭಾಗದಲ್ಲಿ ಮಲ್ಟಿಪಲ್ ಡಿ.ವಿ.ಡಿ. ಪ್ಲೇಯರ್ಗಳಿವೆ. ಒಂದು ಟಿ.ವಿ. ಒಂದು ಪ್ರಿಜ್, ಎರಡು ಹ್ಯಾಂಡ್‌ಸಟ್‌ಗಳು ಕಾರ್ಡ್‌ಲೆಸ್ ಫೋನ್‌ಗಳಿವೆಯಲ್ಲದೇ ಬೆಳಕಿಗೆ ಬಣ್ಣಬದಲಿಸಬಲ್ಲ ಮೇಲ್ಚಾವಣಿ, ವಿಶೇಷ ಅಳತೆಯ ಲಗೇಜ್‌ಸೆಟ್, ವಿಶಿಷ್ಟ ಗಾಲ್ಫ್ ಬ್ಯಾಗ್, ಇವೆಲ್ಲವೂ ಮೆಬ್ಯಾಚ್ ವೈಶಿಷ್ಟತೆಯ ಕೆಲವು ಅಂಶಗಳು. ೫೫೧೩ ಸಿ.ಸಿ. ೫೫೦ ಬಿ.ಹೆಚ್.ಪಿ. ಮತ್ತು ಟ್ವಿನ್‌ಟರ್ಬೋದ ಈ ಪೆಟ್ರೋಲ್ ಕಾರು ಕೇವಲ ೫.೪ ಸೆಕೆಂಡುಗಳಲ್ಲಿ ೧೦೦ ಕಿ.ಮೀ. ವೇಗದಲ್ಲಿಚಲಿಸುತ್ತದೆ! ಗರಿಷ್ಟವೆಂದರೂ ಗಂಟೆಗೆ ೨೫೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಈ ಕಾರಿನಲ್ಲಿರುವವರ ಸುರಕ್ಷತೆಗಾಗಿ ಅನೇಕ ವ್ಯವಸೆಗಳಿದ್ದು ಅದರಲಿ ೧೦ ಏರ್‌ಬ್ಯಾಗ್‌ಗಳ ವ್ಯವಸ್ಥೆ ಇದೆ. ಇಂಥಹ ಅತ್ಯಮೂಲ್ಯವಾದ ಅದ್ಭುತ ಕಾರನ್ನು (ನಮ್ಮ ದೇಶದಲ್ಲಿ) ಯಾರು ಖರೀದಿಸಬಲ್ಲರು, ಯಾರು ಒಳಗೆ ಕುಳಿತು ಐಷಾರಾಮಿಗಳಾಗಬಲ್ಲರು, ಯಾರು ಬಳೆಸಬಲ್ಲರು ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ.
*****