ಸಿನಿಮಾ ನಟರೂ ಎಲ್ಲರಂತೆ ಮನುಷ್ಯರು. ನಟನೆಯನ್ನೇ ವೃತ್ತಿ ಪ್ರವೃತ್ತಿಯನ್ನಾಗಿಸಿಕೊಂಡು ತರಬೇತಿ ಪಡೆದುಕೊಂಡು ಕೆಲವರು ಖ್ಯಾತ ನಟರೆನಿಸಿರುವರು. ಅದೂ ಅವರ ವರಮಾನದ ಮೇಲೆ…
ಈಗೀಗ ಭವ್ಯಭಾರತದಲ್ಲಿ ಬಾಲಿವುಡ್ ಚಿತ್ರಗಳ ಬಾಕ್ಸ್‌ಆಫೀಸ್ ಗಳಿಕೆ ನೂರಾರು ಕೋಟಿ ರೂಪಾಯಿ ಮೀರುತ್ತಿವೆಯಾದರೂ ಅವುಗಳ ಸಂಪಾದನೆ ಹಾಲಿವುಡ್ ಚಿತ್ರಗಳನ್ನು ಮೀರಿಸುತ್ತಿಲ್ಲವೆಂಬ ಮಾತು ಅಲ್ಲಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ!
ಬೆಂಕಿಯಿಲ್ಲದೆ ಹೊಗೆ ಏಳದು ಎಂಬಂತೆ ಆಗಸ್ಟ್ ೨೦೧೫ರಲ್ಲಿ ಫೋರ್‍ಬ್ಸ್ ಪ್ರಕಟಿಸಿರುವ ವಿಶ್ವದ ಸಿರಿವಂತರ ಮಹಾಪಟ್ಟಿಯಲ್ಲಿ ಮುಂಬಯಿಯ ಐವರು ನಟರು ಇದ್ದಾರೆ!
ಈ ಹಿಂದೆ- ಶಾರುಖ್ ಖಾನ್ ಅವರು ಇದೇ ಫೋರ್‍ಬ್ಸ್ ಪಟ್ಟಿಯಲ್ಲಿದ್ದಿದು ತಮಗೆಲ್ಲ ತಿಳಿದಿರಬಹುದು ಎಂದುಕೊಂಡಿದ್ದೇನೆ! ಆದರೆ… ಈ ಸಾರಿ ಅವರನ್ನು ಓವರ್ ಟೇಕ್ ಮಾಡಿ ಮತ್ತಷ್ಟು ನಟರು ಈಗಾಗಲೇ ಮುನ್ನುಗ್ಗಿವರು….
ಸೂಪರ್‌ಸ್ಟಾರ್ ಬಿಗ್‌ಬಿ ಅಮಿತಾಭ್ ಬಚ್ಚನ್- ಬ್ಯಾಡ್‌ಬಾಯ್ ಸಲ್ಮಾನ್ – ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್, ಶಾರುಖ್ ಖಾನ್, ರಣಬೀರ್ ಕಪೂರ್- ಈ ಬಿಗ್ ಪಟ್ಟಿಯಲ್ಲಿ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ತೀರಾ ಯಶಸ್ವಿಯಾಗಿರುವರು.
ಬಹಳ ವಿಸ್ಮಯದ ಸಂಗತಿಯೆಂದರೆ… ಬಿಗ್‌ಬಿ ಅಮಿತಾಭ್ ಬಚ್ಚನ್ ಹಾಗೂ ಬ್ಯಾಡ್ ಬಾಯ್ ಸಲ್ಮಾನ್‌ಖಾನ್ ಸರಿಸಮಾನವಾಗಿ ಏಳನೆಯ ಅದ್ಭುತ ಸ್ಥಾನಮಾನವನ್ನು ಹಂಚಿಕೊಂಡಿರುವರು!
ಅದೇ ಒಂಭತ್ತನೆಯ ರ್‍ಯಾಂಕ್‌ನಲ್ಲಿ ನಮ್ಮ ಆಕ್ಷನ್‌ಕಿಂಗ್ ಅಕ್ಷಯ್ ಕುಮಾರ್ ಪಡೆಯುವಲ್ಲಿ ಸಫಲರಾಗಿರುವರು.
ಅಮಿತಾಭ್ ಮತ್ತು ಸಲ್ಮಾನ್‌ಖಾನ್ ವಾರ್ಷಿಕವಾಗಿ ಇವರೀರ್ವರು ೨೧೩ ಕೋಟಿ ರೂಪಾಯಿ ಗಳಿಕೆ ಹೊಂದಿರುವರು. ಅದೇ ಅಕ್ಷಯ್ ವಾರ್ಷಿಕವಾಗಿ ೨೦೭ ಕೋಟಿ ವರಮಾನ ಹೊಂದಿರುವರು. ಶಾರುಖ್ ಖಾನ್ ೧೬೫ ಕೋಟಿ ರೂಪಾಯಿ ಗಳಿಕೆ ಹೊಂದಿದ್ದು ೧೮ನೆಯ ಸ್ಥಾನದಲ್ಲಿ ಉಳಿದಿದ್ದಾರೆ. ಇನ್ನು ೩೦ನೆಯ ಬ್ಯಾಂಕಿನಲ್ಲಿ ರಣಬೀರ್ ಕಪೂರ್ ಇದ್ದು ೯೫ ಕೋಟಿ ರೂಪಾಯಿಗೆ ತೃಪ್ತಿಪಟ್ಟು ಕೊಂಡಿರುವರು.
ಅಬ್ಬಾ! ಬಾಲಿವುಡ್‌ನ ಇಷ್ಟೂ ನಟರ ಗಳಿಕೆಯು ವಾರ್ಷಿಕವಾಗಿ ೮೯೫ ಕೋಟಿ ರೂಪಾಯಿ ಮುಟ್ಟಿದೆ.
ಆದ್ದರಿಂದ ಮಕ್ಕಳೆ ನೀವೆಲ್ಲ ಇನ್ನು ಮುಂದೆ ಸಿನಿಮಾ ನಟರಾಗುವ ಗುರಿ ಹೊಂದಿರಿ. ಅದಕ್ಕಾಗಿ ನಟನೆ, ಮಾತು, ಹಾಸ್ಯ, ಮೈಕಟ್ಟು ಹೊಂದಿ. ಬರೀ ಡಾಕ್ಟರ್ ಇಂಜಿನಿಯರ್ ಐಎಎಸ್, ಐಪಿಎಸ್ ಎಂದು ಹತ್ತರಲ್ಲಿ ಹನ್ನೊಂದನೆಯವರಾಗಿ ಕೊರಗದಿರಿ, ಪುಸ್ತಕದ ಹುಳುವಾಗದಿರಿ.
*****