
ನೂರು ಬಣ್ಣದಲಿ ಊರು ನಗುತಿರಲು ಗಿರಿಯ ತಪ್ಪಲಲ್ಲಿ ಬಾಳಿನ ಚೆಲುವನು ಹಸಿರು ಬರೆದಿರಲು ಬೆಟ್ಟದ ಮೈಯಲ್ಲಿ ಕೈಯ ಬೀಸಿ ಕರೆಯುತ್ತಿರೆ ಜೀವನ ಸಾವಿರ ಕೈಗಳಲಿ ಕಣವೂ ಚಲಿಸದೆ ಕಣ್ಣೇ ಹರಿಸದೆ ಕುಳಿತನಲ್ಲ ವೀರ ಯಾರೀ ದಿಟ್ಟ ಫಕೀರ? ಮಿಂಚು ಸಿಡಿಲು ಮಳೆಗಾಳ...
ತಾನೊಂದು ರಂಭೆ ಅಂದುಕೊಂಡಂತಿದೆ ನನ್ನ ಪಕ್ಕದ ಸೀಟಿನಾಕೆ ಪಾರ್ಲರ್ ದಿಂದ ನೇರ ವಿಮಾನಕ್ಕೇರಿದ ಮೂವತ್ತರ ಬೆಡಗಿ ಥೇಟ್ ಐಟಮ್ ಸಾಂಗ್ ಗರ್ಲ್ ಗುಲಾಬಿ ಬಣ್ಣ ತಲೆತುಂಬ ಹುಚ್ಚೆದ್ದ ಕೂದಲು ಉದ್ದನೆಯ ಉಗುರು ಮೇಲೆ ಕಪ್ಪುಬಣ್ಣ ಕೂತಲ್ಲಿ ಕೂರಲಾರೆ ನಿಂತಲ್...
ಮೌನದ ಚಿಪ್ಪೊಳಗೆ ನುಸುಳಿ ಗುಪ್ತಗಾಮಿನಿಯಂತೆ ಹರಿದು ಅಜ್ಞಾನದಲ್ಲಿಯೇ ಅಸ್ತಿತ್ವವಿಲ್ಲದ ಅಗೋಚರಗಳ ನಡುವೆ ನರಳಿ ಬೂದಿಯಾದ ಕನಸುಗಳು ಹೊರಳಿ ಬದುಕ ಬಯಲ ದಾರಿಯಲಿ ಮೇಣದಂತೆ ಕರಗಿ ಕೊರಗಿ ಹುಟ್ಟೇ ಶಾಪ, ತಾರತಮ್ಯ ವಾಸ್ತವ ನಾಳೆಗಳಿಲ್ಲದ ಬದುಕಲಿ ಬಿಂದ...
ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ ಎಂಥೆಂತಾ ಚಿತ್ರಗಳು, ವಿಚಿತ್ರಗಳು! ತಾಜಮಹಲು, ಕುತುಬ್‌ಮಿನಾರು ದೊಡ್ಡಾನುದೊಡ್ಡ ಬಾಹುಬಲಿ ಮತ್ತಿನ್ನಿನೇನೇನೋ… ಗರದಿಯವ ಚಕ್ರ ತಿರುಗಿಸಿದಂತೆಲ್ಲಾ ಬದಲಾಗುವ ಬಣ್ಣದೊಂದಿಗೆ ಚಿತ್ರವೂ ಬದಲಾಗುತ್ತದೆ ಒಂದಿ...
ಒಂದು ಧರ್ಮಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ, ಹನಿ ಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ, ಹತ್ತು ವನಗಳ ಸುತ್ತಿ, ಹೂ ಹೂವನೂ ಮುತ್ತಿ ಒಂದೇ ಜೇನಿನ ಹುಟ್ಟು ಕಟ್ಟಿದಾತ, ಎಲ್ಲಿ ಹೇಳೋ ತಾತ, ಹಿಂ...
ಎಂಥ ಮಾತುಗಳ ಹೇಳಿದೆ ಗುರುವೇ ನಮಸ್ಕಾರ ನೂರು ಇಂಥ ನೀತಿಗಳ ಹೇಳಬಲ್ಲವನು ಕಬೀರನಲ್ಲದೆ ಯಾರು? ಹಿಂದೂ ಮುಸ್ಲಿಮ ಗಂಧಗಳೆಲ್ಲಾ ಮಣ್ಣಿನ ಶರೀರಕಷ್ಟೇ; ಆತ್ಮಕೆ ಮತದ ಬಂಧನವೆಲ್ಲಿದೆ? ಇರುವುದು ಸತ್ಯದ ನಿಷ್ಠೆ ವೇದ ಖುರಾನು ಗ್ರಂಥಸಾಹಿಬ ದಾರಿಯಿವೆ ಹಲವ...













