ಕಾವೇರಿ ಕಾವು; ಸರ್ಕಾರ ನಿರ್ಲಕ್ಷ

ಕಾವೇರಿ ಕಾವು; ಎಲ್ಲೆಲ್ಲೂ ವಿವಾದ
ಭಾರತಾಂಬೆಯ ಶ್ರೇಷ್ಠ ಮಗಳಾಗಿ
ನಮ್ಮೆಲ್ಲರ ಮಾನವರ ತಾಯಿಯಾಗಿ
ಕಾವೇರಿ ತಾ ನದಿಯಾಗಿ ಹರಿಯುತ್ತಿದ್ದಾಳೆ.

ನೀರಿಗಾಗಿಯೇ ಎಲ್ಲೆಲ್ಲೂ ಆಹಾಕಾರ
ಕಾವೇರಿ ನದಿಗಾಗಿ ವಾದ-ವಿವಾದ
ರಾಜಕೀಯದ ಪಕ್ಷಗಳ ಮತಭೇದ
ರಾಜ್ಯ ರಾಜ್ಯಗಳ ಮಧ್ಯ ಸಂಘರ್ಷ

ಕರ್ನಾಟಕದ ಪ್ರಮುಖ ನದಿಯಾಗಿ
ಕಂಗೊಳಿಸುವಳು ತಾ ರೇಷ್ಮೆ ಜರತಾರಿಯಂತೆ
ಕಾವೇರಿಗಾಗಿ ಸದನದಲ್ಲಿ ಚರ್ಚೆ
ತಡೆಯಲಾರದೆ ಮುಂದೂಡುವ ಕಲಾಪಗಳು

ಕಾವೇರಮ್ಮಗಾಗಿ ಎಲ್ಲೆಲ್ಲೂ ಆಗ್ರಹ ಪ್ರತಿಭಟನೆ
ಕಛೇರಿ ಮುಂದೆ ಸರದಿ ಉಪವಾಸ
ಸತ್ಯಾಗ್ರಹಿಯನ್ನು ನಿರ್ಲಕ್ಷ ಮಾಡಿ
ರಕ್ಷಣೆ ಮಾಡಲಾರದು ಈ ನಮ್ಮ ಸರ್ಕಾರ

ಕಾವೇರಿ ವಾದ-ವಿವಾದ ತಡೆಯದೆ
ರಾಜ್ಯಕ್ಕೆ ಸರ್ಕಾರ ರಾಜೀನಾಮೆ
ಸರ್ಕಾರಕ್ಕೆ ಸಂಪುಟ ರಾಜೀನಾಮೆ
ಸಂಪುಟಕ್ಕೆ ಸದಸ್ಯರು ರಾಜೀನಾಮೆ

ಸದಸ್ಯರು ಪಕ್ಷಕ್ಕೆ ರಾಜೀನಾಮೆ
ಎಲ್ಲೆಲ್ಲೂ ರಾಜೀನಾಮೆ ಸಿದ್ದಿ
ಯಾರು ಕಾಣದಂತಹ ನಾಡಿದು
ಯಾರು ಅಳಿಸದಂತಹ ವಾದ-ವಿವಾದವಿದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾರ್ಟಿ ಕಳೆದ ಮೇಲೆ
Next post ಆರೋಪ – ೩

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…