ದೇವರಿದ್ದಾನೆ

-೧-
ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ,
ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ
ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ
ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ
ಸತ್ಯ, ಶಾಂತಿ, ತ್ಯಾಗದಿರಿಮೆಲಿ, ಊರುಕೇರಿ ಒಂದೆಂಬ
ಸಂತೃಪ್ತಿಲಿ ದೇವರಿದ್ದಾನೆ.
ಇದ್ದಾನೆ: ಕಲ್ಲಲ್ಲಿ, ನನ್ನಲ್ಲಿ, ನಿನ್ನಲ್ಲಿ ಎಲ್ಲೆಲ್ಲೂ ಇದ್ದಾನೆ!

-೨-
ನನ್ನೂರ ಸೂರ್ಯೋದಯ ಸೂರ್ಯಾಸ್ತಮಾನದಲಿ
ಹಾಲು ಚೆಲ್ಲಿದ ತಿಂಗಳ ಬೆಳಕಲಿ
ತಂಗಳು ಮುದ್ದೆಗೆ, ತಂಪು ನಿದ್ದೆಯ, ಸವಿಗನಸಲಿ
ಸೆರಗಿನ ಮರೆಲಿ ಮೊಲೆಯುಣಿಸುವ ಅಮ್ಮಂದಿರಲಿ
ಗಾಳಿಪಟದಿ ತೇಲುವ ರಣಹದ್ದಿನಲಿ
ಬಡವರ ಹಸಿವಲಿ, ಶ್ರಮದ ದುಡಿಮೆಲಿ
ಮುಸ್ಸಂಜೆ ಹೊತ್ತಲ್ಲಿ, ದೀಪಮುಡಿಸುವ ಕೈಗಳಲ್ಲಿ, ದೇವರಿದ್ದಾನೆ.

-೩-
ದೇವರಿದ್ದಾನೆ ಮುಗ್ಧ ಮಗುವಿನ ನಗುವಲಿ
ಚೆಂಗುಲಾಬಿಯ ತುಟಿ ಸವಿ ಜೇನಲಿ
ತೊಂಡೆ ಹಣ್ಣಿನ ಚೆಲುವಲಿ, ಹಿಮಮಣಿ ಸಾಲಲಿ
ಮಲ್ಲಿಗೆ ಮೊಗ್ಗಿನ ಹಿಗ್ಗಲಿ, ಪೈರು ಪಚ್ಚೆ ಹಚ್ಚಹಸಿರಿನ ಸಿರಿಲಿ
ಕೆರೆಕುಂಟೆ ಕೋಡಿ ಬೀಳುವ ಸುಭಿಕ್ಷೆಲಿ
ರಾಶಿ ರಾಶಿ ಬೆಳೆವ ಹಣ್ಣು ಹೂವು ಕಾಯಲ್ಲಿ
ಇರುವೆ ಸಾಲಿಗೆ, ಸಕ್ಕರೆ ಉಣಿಸುವ, ಕೊಡಗೈಲಿ ದೇವರಿದ್ದಾನೆ.

-೪-
ದೇವರಿದ್ದಾನೆ:
ಅಣು, ರೇಣು, ತೃಣ ಕಾಷ್ಟಲಿ,
ಬಡಬಗ್ಗರ ಎದೆಗೂಡಲಿ,
ತಿನ್ನುವ ಅನ್ನ, ಕುಡಿವ ನೀರಲಿ,
ಜ್ಞಾನ, ಭಕ್ತಿ, ಯೋಗ, ಭೋಗದಲಿ,
ಬರೆವ ಕವನದಲಿ… ದೇವರಿದ್ದಾನೆ!

-೫-
ದೇವರಿಲ್ಲನ್ನುವ ನಾಸ್ತಿಕರೆದೆಲಿ ದೇವರುಂಟು!
ಊರಲಿ, ಕೇರೀಲಿ, ಮರ, ಗಿಡ, ಮಳೆ, ಗಾಳಿಲಿ ದೇವರುಂಟು,
ದೇವರಿಲ್ಲದಾ ಮೇಲೆ, ಮನುಶ್ಯರೆಲ್ಲಿ?!
ಬರೀ ಕಾಡು ಮೃಗ, ಪಕ್ಷಿ, ಜಂತು, ಪಾಪ ಕೂಪ, ತುಂಬಿ ತುಳುಕುತ್ತಿತ್ತು!
ಅಂಜಿಕೆಯಿಲ್ಲದೆ, ಜನ ದನಗಳಾಗುತ್ತಿದ್ದರು! ಬಲು ಪಾಪಿಗಳಾಗುತ್ತಿದ್ದರು!
ದೇವರಿದ್ದಾನೆಂಬಾ ಬಲು ನಂಬಿಕೆಲಿ, ಸ್ವಲ್ಪ ನೆಮ್ಮದಿ ಕಾಣಲಿದ್ದಾರೆ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀಳು
Next post ಪುಣ್ಯಶಾಲಿ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…