ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ ಇದು ಸಂಪರ್ಕ ಮತ್ತು ಸಂಘಟನೆ ಎರಡನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿದೆ. ಅಮೇರಿಕಾ ಸೇರಿದಂತೆ ಯೂರೋಪಿನ ಹಲವಾರು ರಾಷ್ಟ್ರಗಳ ಗಮನ ಸೆಳೆಯಲು ವಿಫಲವಾದರೂ ಇದರ ಕಲ್ಪನೆ ಮಾತ್ರ ಅದ್ಭುತಪಾದದ್ದು ಈಗಾಗಲೇ ಸೆಲ್ಯೂಲರ್ ಫೋನ್ ವಿಶ್ವವಿಖ್ಯಾತಿಗಳಿಸಿರುವ ಮೋಟರೋಲಾ ಮತ್ತು ಕ್ವಾಲ್‌ಕಾಮ್ ಎರಡೂ ಕಂಪನಿಗಳು ಈ ದಿಸೆಯಲ್ಲಿ ಸ್ಪರ್ಧಾತ್ಮಕವಾಗಿ ತಯಾರಿಸುತ್ತ ಮಾರುಕಟ್ಟೆಗೆ ಬಿಡುಗಡೆಗೆ ಸೆಣಸುತ್ತಲಿದೆ.
ಈ ದಿನಗಳಲ್ಲಿ ಉಪಯೋಗಿಸುತ್ತಿರುವ ಸೆಲ್‌ಫೋನ್‌ಗಳಿಗಿಂತ ಎರಡುಪಟ್ಟು ಭಾರವಾದ ಈ ಸ್ಮಾರ್ಟ್ ಫೋನ್ ಬಹುಮುಖ ಸೇವೆಯನ್ನು ನೀಡುತ್ತದೆ. ಇದರಲ್ಲಿ L.C.Dಸ್ಕ್ರೀನ್ ಮತ್ತು ಜನಪ್ರಿಯ ಚಿತ್ರಗಳನ್ನು ಹೊಂದಿದೆ. ೩ ಕಾಮನ್‌ನ ಫಾಮ್ ಉಪಕರಣವನ್ನು ಉಪಯೋಗಿಸಿದವರಿಗೆ ಇದು ಸುಪರಿಚಿತ. ಅಂದರೆ ಪಿಡಿಕ್ಯು ಡಿಜಿಟಲ್ ದೃಶ್ಯಗಳನ್ನು ಒಳಗೊಂಡ ನಿಸ್ತಂತು (ವೈರ್‌ಲೆಸ್) ಫೋನ್ ಮತ್ತು ಫಾರ್ಮ್ ಆರ್ಗನೈಜರ್ ಹೊಂದಿದೆ.
ಸಿ.ಡಿ.ಎಂ.ಎ. ಪ್ರೊಟೊಕಾಲ್, ಡಿಜಿಟಲ್‌ಫೋನ್ ತರಹವೇ ಪಿಡಿಕ್ಯೂ ಸಹ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ‘ವಾಯ್ಸ್ ಮೇಲ್’ ಕರೆಮಾಡುವವರ ಪರಿಚಯ, ಚಿಕ್ಕದಾದ ಸಂದೇಶ ಸೇವೆ. ಹೀಗೆ ದೂರವಾಣಿ ಸಂಬಂಧಿತ ಎಲ್ಲ ಸೇವೆಗಳು ಡಯಲ್ ಪ್ಯಾಡ್‌ಮೂಲಕ ನಡೆಯುತ್ತವೆ. ಮುಟ್ಟಿದ ತಕ್ಷಣ ತೆರೆದುಕೊಳ್ಳು ಕೀಪ್ಯಾಡ್ ಸ್ಕ್ರೀನನ್ನು ಕ್ರಿಯಾಶೀಲಗೊಳಿಸುತ್ತದೆ. ನಿಮಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ. ಈ ಫೋನ್ ಬಳಕೆಯಿಂದ ಗಮನಾರ್ಹ ಉಳಿತಾಯ ಮಾಡಬಹುದಲ್ಲದೇ ತಕ್ಷಣದಲ್ಲೇ ನಿಮ್ಮ ಅಂದಿನ ಕಾರ್ಯಕ್ರಮ ವಿವರ, ವಿಳಾಸಗಳು, ಪ್ರಮುಖ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸುವುದರ ಮೂಲಕ ಉಪಕಾರಿಯಾಗಿದೆ.
*****