ಅಣುಲಿಪಿ ಅಕ್ಷರಗಳ ಗ್ರಂಥಗಳು ಮೈಕ್ರೋಲೇಟರ್ಸ್ ಬುಕ್ಸ್ (Micro Letters Books)

ಇತ್ತೀಚಿನ ದಿನಗಳಲ್ಲಿ ಅಕ್ಕಿಕಾಳಿನ ಮೇಲೆ, ಕೂದಲೆಳೆಯ ಮೇಲೆ ಸೂಕ್ಷ್ಮಆಯುಧಗಳಿಂದ ಅಕ್ಷರಗಳನ್ನು ಬರೆಯುವವರಿದ್ದಾರೆ. ಕೆಂಬ್ರೀಡ್ಜ್‌ನ ಕೆವೆಂಡೀಶ್ ಪ್ರಯೋಗಾಲಯದ ವಿಜ್ಞಾನಿಗಳು ಇನ್ನು ಮುಂದಕ್ಕೆ ಸಾಗಿ ಒಂದು ಶುಭಾಷಯ ಪತ್ರವನ್ನು ಸಿದ್ಧಪಡಿಸಿದರು. ಇದರ ಉದ್ದಗಲ ನೋಡಿದರೆ ಆಶ್ಚರ್ಯಯವಾದೀತು. ಕೇವಲ ಐದು ಚದರ ಮೈಕ್ರೋಮೀಟರ್ ಎಂದು ಖಚಿತವಾಯಿತು. ಮಾಮೂಲು ಗಾತ್ರದ ಒಂದು ಶುಭಾಷಯ ಕಾರ್ಡಿನ ಮೇಲೆ ಈ ಮೈಕ್ರೋಮೀಟರ್ ಕಾರ್ಡ್‌ಗಳನ್ನು ನೂರು ಕೋಟಿ ಇಡಬಹುದು. ಇದೊಂದು ಆಶ್ಚರ್ಯವಲ್ಲವೆ?!

ಆದಷ್ಟು ಪುಸ್ತಕಗಳ ಹೊರೆ ಮತ್ತು ಪುಸ್ತಕಗಳ ಗಾತ್ರವನ್ನೂ ತಗ್ಗಿಸಿ ಕಡಿಮೆ ಸ್ಥಳದಲ್ಲಿ ಹೆಚ್ಚು ವಿಷಯವನ್ನು ಸಂಗ್ರಹಿಸಿ ಮುಂದಿನ ಜನಾಂಗಕ್ಕೆ ಒಯ್ಯುವ ಮಹೋದ್ದೇಶ ವಿಜ್ಞಾನಿಗಳದ್ದಾಗಿದೆ. ಒಂದು ಚದರ ಮಿ೭ಮೀ. ಸ್ಥಳದಲ್ಲಿ 60ಸಾವಿರ ಬಿಲಿಯನ್ ಶಬ್ದಗಳನ್ನು ಬರೆಯುವ ಸಾಧ್ಯತೆಯನ್ನು ಕಂಡುಹಿಡಿಯಲಾಗಿದೆ. (ಒಂದು ಸಾವಿರ ಮೈಕ್ರೋಮೀಟರ್‌- ಗಳಿಗೆ ಒಂದು ಮಿಲಿಮೀಟರ್ ಸಮ. ಒಂದು ಸಾವಿರ ಮಿಲಿ ಮೀಟರ್‌ಗೆ ಒಂದು ಮೀಟರ್ ಸಮ). ಆದರೂ ಇನ್ನಷ್ಟು ಮತ್ತಷ್ಟು ಅಕ್ಷರಗಳನ್ನು ಯಂತ್ರಗಳ ಸಹಾಯದಿಂದ ಕಿರಿದು ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಸಾಧಾರಣ ಗಾತ್ರದ 10 ಲಕ್ಷ ಪುಸ್ತಕಗಳಲ್ಲಿಯ ವಿಷಯವನ್ನು ಒಂದು ಗುಂಡುಪಿನ್ನಿನ ತಲೆ ಮೇಲಿನ ಗಾತ್ರದಲ್ಲಿ ಕೆತ್ತಲು ಸಾಧ್ಯವಾಗಿದೆ. ಎಸೆಕ್ಸ್‌ನ ಸರಿಶೋಧನಾಲಯದ ಜೇಮ್ಸಮೆಂಟರ್ “ಟ್ರಾನ್ಸ್‌ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಯಂತ್ರವನ್ನು ಸೂಕ್ಷ್ಮಲಿಪಿ ಬರವಣಿಗೆಗೆ ಸಿದ್ಧಪಡಿಸಲಾಗಿದೆ. “ಮೈಕ್ರೋಲಿಥೋಗ್ರಫಿ” ಎಂಬ ಇನ್ನೊಂದು ಉಪಕರಣವು ಅಣುಗಾತ್ರದ ಅಕ್ಷರಗಳನ್ನು ಬರಯುತ್ತದೆ. ಒಂದು ಚದರ ಮಿಲಿಮೀಟರ್ ಸ್ಥಳದಲ್ಲಿ 50,000 ಶಬ್ದಗಳನ್ನು ಮೂಡಿಸಬಹುದು. ಇದೂ ಸಾಲದೆಂಬಂತೆ ಇದೀಗ ಅಭಿವೃದ್ಧಿಗೊಂಡ ಯಂತ್ರದಿಂದ ಅಷ್ಟೇ ಜಾಗದಲ್ಲಿ 60,000 ಶತಕೋಟಿ ಶಬ್ದಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಪೀಲ್ಡ್ ಐಯಾನ್ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಮತ್ತು ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಹಾಲೋಗ್ರಾಫಿಕ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಅಣುಲಿಪಿ ಕಾರ್ಯದಲ್ಲಿ ಬಹಳ ನೆರವು ನೀಡಿದೆ.

ಕೆವೆಂಡಿಶ್ ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಅಲ್ಯೂಮಿನಿಯಂ ಫ್ಲೋರೈಡ್ ಪದರ ಮೇಲೆ ಅಣುಲಿಪಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ಸ್ಪಾಟ್ ಆಪ್ಪಿಕಲ್ ಮೈಕ್ರೋಸ್ಕೋಪ್’ ಎಂಬ ಯಂತ್ರವು ಅಕ್ಷರಗಳನ್ನು ಮೂಡಿಸುತ್ತದೆ ಮತ್ತು ಓದಲು ನೆರವಾಗುತ್ತದೆ. ಇದುವರೆಗೆ ಇಂಥಹ ಬರಹಗಳನ್ನು ಓದಲು ಮತ್ತು ಬರೆಯಲು ಚಾಕ್ಷುಕ್ಷ ಮಸೂರಗಳನ್ನು ಒಳಗೊಂಡಿರುವ ಉಪಕರಣವನ್ನು ಬಳೆಸಲಾಗುತ್ತಿತ್ತು ಈ ಎಲ್ಲಅಣುಲಿಪಿಯ ಅಭಿವೃದ್ದಿಯಿಂದಾಗಿ ಅನೇಕ ಪ್ರಯೋಜನಗಳಿವೆ, ಎಂದು ನಿರ್ಮಾತೃಗಳು ತಿಳಿಸುತ್ತಾರೆ. ಈ ಹಿಂದೆ ಹೇಳಿದಂತೆ ಜಾಗತಿಕ ಸಾಹಿತ್ಯವನ್ನು ಅತ್ಯಂತ ಕಿರಿದಾದ ಸ್ಥಳದಲ್ಲಿ ಸಂಗ್ರಹಿಸುವುದೇ ಆಗಿದೆ. ವಾಶಿಂಗ್‌ಟನ್ The Library of Congress ನಲ್ಲಿರುವ ಒಂದು ಕೋಟಿ ಗ್ರಂಥವನ್ನು ಒಂದು ಶಾಲೆಯ ಬ್ಯಾಗಿನಲ್ಲಿ ಸೆರೆಹಿಡಿಯಬಹುದು. ಕಂಪ್ಯೂಟರ್‌ಗಳಲ್ಲಿ  ಸಂಗ್ರಹಿಸಿಡುವಂತೆ ಈ ಅಣುಲಿಪಿ ತಂತ್ರಜ್ಞಾನದ ಯಂತ್ರದಲ್ಲಿ ಇನ್ನೂ ಚಿಕ್ಕ ಸ್ಥಳದಲ್ಲಿ ಶೇಖರಿಸಿ ಇಡಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದು ಸಿಹಿಯೂಟ?
Next post ಯಕ್ಷಗಾನದ ನೃತ್ಯ ಮತ್ತು ಮಾತು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…