ಈಗಾಗಲೇ ಗುಂಡು ಬೇಧಿಸಲಾಗದ ಕಾರು, ಗಾಜು, ಎದೆಕವಚಗಳನ್ನು ತಯಾರಿಸಲಾಗಿದೆ. ಇದೀಗ ಗನ್ ಫ್ರೂಪ್ ಬಟ್ಟೆಯನ್ನು ತಯಾರಿಸಲಾಗಿದ್ದು ಶಟ್೯, ಪ್ಯಾಂಟ್ ಏನನ್ನಾದರೂ ಹೊಲಿಸಿಕೊಂಡು ಧೈರ್ಯದಿಂದ ಓಡಾಡಬಹುದಂತೆ. ಇದರ ನಿರ್ಮಾತೃ ಸೈಪನಿಯ್ ನೊಲೆಕ್, ಇವರು ತಮ್ಮ ಡುಪಾಂಟ್ ಪ್ರಯೋಗಾಲಯದಲ್ಲಿ 1965 ರಲ್ಲಿಯೇ ‘ಕೆವ್‌ವಾರ್’ನ್ನು ಕರಗಿಸಿಕೊಳ್ಳಬಲ್ಲ ದ್ರಾವಕವನ್ನು ಕಂಡು ಹಿಡಿದರು. ಮತ್ತು ಈ ರೀತಿ ಕರಗಿದ ಕೆನಲಾರ್ ಅನ್ನು ನೂಲಿನ ದಾರವನ್ನಾಗಿ ಮಾಡಿ, ಅದರಿಂದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಇದರ ದಾರವು ಬಲಯುತ ಶಕ್ತಿಯಿಂದ ಕೂಡಿದ್ದು ಇದರ ಬಟ್ಟೆಗೆ ಅಥವಾ ಅಂಗಿಗೆ ಬಂದೂಕಿನ ಗುಂಡು ಏನು ಮಾಡಲಾಗದು. ಈಗೀಗ ವಿದೇಶಗಳಲ್ಲಿ ಮಾರಾಟ ಮಳಿಗೆಗಳಲ್ಲಿ ದೊರೆಯುತ್ತವೆ. ಹಣ ಮಾತ್ರ ದುಭಾರಿ.
ಬಂದೂಕಿನಿಂದ ಗುಂಡು ಹೊರಬಂದು ಬಟ್ಟೆಗೆ ಬಡೆದಾಗ ಅದು ಅಣಬೆಯಾಕಾರದಲ್ಲಿ ಬಟ್ಟೆಯ ಮೇಲೆ ಉಳಿಯುತ್ತದೆ. ಕೆವ್‌ಲಾರ್‌ನ ಬಲ ಮತ್ತು ಗಡಸುತನವು ಈ ಪರೀಕ್ಷೆಯಲ್ಲಿ ಕೆವಲಾರ್‌ನ ಎಳೆಗಳ ಎಳೆತಕ್ಕೊಳಗಾದರೂ ಗುಂಡಿನಿಂದ ತೂತು ಅಗಲಾರವು.
***