ಕೆಲವರಿಗಂತೂ ಇಂಜೆಕ್ಷನ್ ಅಂದರೆ ಹೆದರಿಕೆ. ಅದರಲ್ಲಿಯೂ ಕೆಲವು ವೈದ್ಯರು ನಿರ್ದಾಕ್ಷಿಣ್ಯವಾಗಿ ಸೂಜಿಯನ್ನು ಚುಚ್ಚುವಾಗಿನ ದೃಷ್ಯ ಭೀಕರವಾಗಿರುತ್ತದೆ. ಕೆಲವು ಸಲವಂತೂ ಇಂಜಕ್ಷನ್ ಮಾಡಿಸಿಕೊಂಡ ಸ್ಥಳದಲ್ಲಿ ಸೆಪ್ಪಿಕ್ ಆಗಿ ನರಳಬೇಕಾಗುತ್ತದೆ. ಒಟ್ಟಿನಲ್ಲಿ ಇಂಜಕ್ಷನ್ ಬದಲು ಮಾತ್ರೆಗಳೇ ಸಾಕು, ಎನ್ನುವ ಜನರೇ ಹೆಚ್ಚು. ಈ ಸ್ಥಿತಿಯನ್ಪು ನೋಡಿ ಅಧ್ಯಯನ ಮಾಡಿದ ಆಕ್ಸ್‌ಫರ್ಡ್ನ ಜೀವ ವಿಜ್ಞಾನಿಗಳು ಚುಚ್ಚುಮದ್ದನ್ನು ಪಿಚಕಾರಿ (Syringe) ಯಲ್ಲಿ ಸಿಂಚನಿಸಿ ಔಷಧಿಯನ್ನು ನೋವಿಲ್ಲದಂತೆ ದೇಹದೊಳಕ್ಕೆ ಕಳಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.
ಹಿಂದಿನ ಕಾಲದಲ್ಲಿ ಡಬ್ಬಳದಂತಹ ಚುಚ್ಚುಸೂಜಿಗಳಿದ್ದವು. ಕೆಲವು ದಿನಗಳ ನಂತರ ಉಪಯೋಗಿಸಿ ಎಸೆಯುವ ದರಿ ಅಕರ್ಷಕವಾಗಿತ್ತು ಆವರಣ ಕಿಂಚಿತ್ತಾದರೂ ನೋವಿನ ಭಯ ಇದ್ದೇ ಇತ್ಪು ಈ ಸಮಸ್ಯೆಗೆ ನೋವಿಲ್ಲದ, ಕ್ಷಣದಲ್ಲಿ ಔಷಧಿಯನ್ನು ಸಿಂಚನದ ಮೂಲಕ ದೇಹದೊಳಕ್ಕೆ ಕಳಿಸುವ ವಿಧಾನವು ಹೊಚ್ಚ ಹೊಸದು ಮತ್ತು ಧುನಿಕವಾದದ್ದೆಂದು ರೋಗಿಗಳ ಅನುಭವವಾಗಿದೆ.
ಈ ನವೀನ ಪಿಚಕಾರಿಯನ್ನು ಹಿಸುಕಿದ ತಕ್ಷಣ ಅದರೊಳಗೆ ಸಂಕುಚಿತ ‘ಹೀಲಿಯಂ ಅನಿಲ’ ಶಬ್ದಕ್ಕಿಂತಲೂ ಎರಡುಪಟ್ಟು ಮುನ್ನುಗ್ಗಿ (SuperSonic) ಚಿಮ್ಮುತ್ತ ತನ್ನೆದುರಿಗಿನ ಔಷಧಿ (Powdered drug) ಯ ಕೋಣೆ ಹೊಕ್ಕು ಹೊರಗೆ ನೆಗೆಯುತ್ತದೆ. ಎಳ್ಳಷ್ಟು ನೋವಾಗದಂತೆ ಚರ್ಮವನ್ಪು ಬೇಧಿಸಿ ಒಳಸೇರುತ್ತದೆ. ಈ ಸಿಂಚನದೊಂದಿಗೆ ಔಷಧಿಕಣಗಳು ಸೇರಿರುವುದರಿಂದ ದೇಹದೊಳಗೆ ಕ್ರಿಯೆನಡೆಯಿಸಿ ರೋಗಿಗಳನ್ನು ಗುಣಮುಖರನ್ನಾಗಿಸುತ್ತದೆ.
ಈ ಅನಿಲಗಳು ಅತ್ಯಂತ ಹಗುರವಾಗಿದ್ದು ಕಿಂಚಿತ್ತು ನಿರ್ದಿಷ್ಟ ಸ್ಥಳಕ್ಕೆ ನೋವು ಆಗುವುದೇ ಇಲ್ಲ. ಈ ಪಿಚಕಾರಿಯಲ್ಲಿ ಬಳಸುವ ಔಷಧಿ ಪುಡಿ ರೂಪದಲ್ಲಿರುವ ಔಷಧಿಯ ಬೆಲೆಯೂ ಕೂಡ ಕಡಿಮೆಯಾಗುತ್ತೆದೆ. ಬಾಳಿಕೆ ಬರುತ್ತೆದೆಂದು ವಿಜ್ಞಾನಿಗಳು ಹೇಳುತ್ತಾರೆ.
ಮೊದಲಿನ ಸೂಜಿ ಪಿಚಕಾರಿ ಬಳಸಿದಾಗ ಕೆಲ ಅಂಶ ಗಾಳಿಯು ರಕ್ಲದೊಳಗೆ ಹೋಗಿ ಅಪಾಯ ಮಾಡುವ ಸಂದರ್ಭಗಳಿವೆ. ಆದರೆ ಈ “ಅನಿಲ ಸಿಂಚನ ಪಿಚಕಾರಿ” ಇಂಥಹ ಅಪಾಯವನ್ನು ಮಾಡಲಾರದು. ವೈದ್ಯಕೀಯ ವಿಜ್ಞಾನಕ್ಕೊಂದು ಇದು ಹೊಸ ಸೇರ್ಪಡೆ ಮತ್ತು ನೊವಿವಿಲ್ಲದೇ ರೋಗಿಗಳು ಗುಣಮುಖರಾಗುವುದು ಸ್ತುತ್ಯಾರ್ಹವಾಗಿದೆ.
****