ಎಲ್ಲಿಗೆ ಕರೆದೊಯ್ಯುವೆ ನೀ
ಹೇಳು ಕನ್ನಯ್ಯಾ?
ಬ್ಬಂದಾವನ ಬೀದಿಗಳಲಿ
ಹೂ ಚೆಲ್ಲಿದ ಹಾದಿಗಳಲಿ
ಎಳೆದೊಯ್ಯುವೆ ಎಲ್ಲಿಗೆ
ಹೇಳು ಕನ್ನಯ್ಯಾ?
ಮಡಕೆ ಒಡೆದು ಮೊಸರ ಕುಡಿದೆ
ನನ್ನ ಭಂಗಿಸಿ!
ಬೆಣ್ಣೆ ಸವಿದು ನಡೆದೆ ಪುಂಡ
ನನ್ನ ನಂಬಿಸಿ
ಮೋಡಿ ಮಾಡಿ ಕೂಡಿ ಮುಂದೆ
ಎಲ್ಲಿ ಹೋದೆಯೋ?
ಅರಿಯದಂಥ ಹಾದಿಗೆಳೆದು
ಹೇಗೆ ತೊರೆದೆಯೋ?
ನಂಬಿ ಬಂದ ಹೆಣ್ಣ ಭಂಡ
ಹಾಗೆ ತೊರೆವುದೇ?
ಎಂದೋ ನೆನಪು ಬಂದು ಹೀಗೆ
ಒಮ್ಮೆ ಬರುವುದೇ?
ನಾನು ಮಾತ್ರ ನಿನ್ನ ನೆನದೇ
ಬಾಳುತಿರುವೆನೋ,
ನೀನಿಲ್ಲದೆ ಗಿರಿಧಾರಿ
ಹೇಗೆ ಉಳಿವೆನೋ?
***