Home / ಲೇಖನ / ವಿಜ್ಞಾನ / ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ ‘ಡಾರ್ಕ್‌ಸ್ಟಾರ್’ ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ  ಸಾಧ್ಯತೆಗಳಿವೆ. ಮತ್ತಿನ್ನಿಷ್ಟು ವರ್ಷಗಳು ಕಳೆದರೆ ರೋಬಟ್ ಹೆಲಿಕ್ಯಾಪ್ಪರ್‌ಗಳು ಸೈನಿಕರನ್ನು ಯುದ್ಧಕ್ಕೆ ಬಿಡಬಹುದು. ಮನುಷ್ಯರ ಮನಸ್ತತ್ವವನ್ನು ಆಧರಿಸಿ ಈ ಚಾಲಕ ರಹಿತ ವಿಮಾನಗಳು ತಯಾರಾಗಲಿವೆ. 21ನೇ ಶತಮಾನದಲ್ಲಿ ಇಂತಹ ವಿಮಾನಗಳು ಚಾಲಕ ರಹಿತ ವಿಮಾನಗಳೂ ಸಹ ಹಳೆಯದಾಗ ಬಹುದು. ಒಬ್ಬ ಪೈಲೆಟ್, ಮತ್ತು 7 ಜನ  ಪ್ರಯಾಣಿಕರೊಂದಿಗೆ ಗಂಟೆಗೆ 220 ಕಿ.ಮೀ. ವೇಗದಲ್ಲಿ ಚಲಿಸುವ ಮಿನಿವ್ಯಾನ್‌ನಂತಹ ವಿಮಾನಗಳು ಪ್ರಪಂಚದ ಎಲ್ಲೆಡೆ ಸಂಚರಿಸುತ್ತವೆ. 21ನೇ ಶತಮಾನದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಂಶೋಧನೆಗಳನ್ನು ಮಾಡುವ ಖಾಸಗಿ ಸಂಸ್ಥೆಗಳನ್ನು ಗುರುತಿಸಲು ನಾಸಾ ಸಂಸ್ಥೆಯು ಕೈಕೊಂಡ ಯೋಜನೆಯಾದ Advanced General Eviation Transport Experiment (ಆಗೇಟ್) ಎನ್ನುವ ಪದವನ್ನು ತಮ್ಮ ಸಂಸ್ಥೆಯ ನಿಕ್‌ನೇಮ್ ಆಗಿ ಮಾಡಿಕೊಳ್ಳಲು ಸಂಸ್ಥೆಗಳು ಆತುರದಿಂದ ಕಾಯುತ್ತವೆ. ಕಾಕ್‌ಪಿಟ್ ಪ್ರವೇಶದ್ವಾರದ ಮೇಲೆ ಹೈವೆ ಇನ್ ದಿ ಸ್ಕೈ (Highway in the sky) ಎನ್ನುವ ಬೋರ್ಡು, ಸುತ್ತಲಿನ ದೃಶ್ಯಗಳು ಕಾಣುವಂತೆ ತಲೆಯ ಮೇಲ್ಭಾಗದಲ್ಲಿ ಸುತ್ತಲೂ ಗಾಜಿನ ಆವರಣ, ವಿಮಾನವನ್ನು ಸರಿಯಾಗಿ ನಡೆಸಲು ಡಿಜಿಟಲ್ ವೇಟ್‌ಲಿಂಕ್ಸ್ (Digital Weight Links) ಸಹಕರಿಸುವಿಕೆ, ವಿಮಾನ ಸರಿಯಾದ ಎತ್ತರ ಮತ್ತು ದಿಕ್ಕಿನಲ್ಲಿ ಚಲಿಸಲು ಸೂಕ್ಷ್ಮವಾದ ಕಂಟ್ರೋಲ್ ಪ್ಯಾನಲ್(Control Panel)ಗಳು, ಭವಿಷ್ಯದ ಆಗೆಟ್  Projectಗಳೊಂದಿಗೆ ಹಗುರವಾದ ದೃಢವಾದ ಸಾಮರ್ಧ್ಯವನ್ನು ಹೊಂದಿರುವ ಇಂತಹ ಮಾದರಿಯ ಚಾಲಕನಿಲ್ಲದ ವಿಮಾನಗಳು ತಯಾರಾಗುವ ನಿರೀಕ್ಷೆ ಇದೆ, ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...