Home / ಬಾಲ ಚಿಲುಮೆ / ಕಥೆ / ಸೋಮನ ತಂದೆಯ ಕಥೆ

ಸೋಮನ ತಂದೆಯ ಕಥೆ

ಒಂದೂರಿನಲ್ಲಿ ಒಬ್ಬ ಬಡವನು ಇದ್ದನು. ಅವನು ದಿನವೂ ತಿರುಪಕ್ಕೆ ಹೋಗಿ ಹಿಟ್ಟನ್ನು ತರುವನು. ತನ್ನ ಹೊಟ್ಟೆಗಾಗಿ ಉಳಿದುದನ್ನು ಒಂದು ಮಡಿಕೆಯಲ್ಲಿ ಹಾಕಿ, ತನ್ನ ಮಲಗುವ  ಕಡೆ ಅದನ್ನು ಒ೦ದು ಗೂಟಕ್ಕೆ ನೇತು ಹಾಕಿದ್ದನು. ಅದನ್ನು ಆಗಾಗ ನೋಡುತ್ತಿದ್ದರೆ ಅವನಿಗೆ ಏನೋ ಒಂದು ಸಂತೋಷ.
ಒಂದು ರಾತ್ರಿ ಅವನಿಗೆ ಹಿಟ್ಟಿನ ಮಡಿಕೆಯನ್ನು ನೋಡಿ ಹಾಗೆಯೇ ಒಂದು ಯೋಚನೆ ಬಂತು; “ಈ ಮಡಕೆಯೇನೋ ಹಿಟ್ಟನಿಂದ ತುಂಬಿತು. ಏನಾದರೂ ದುರ್ಭಿಕ್ಷ ಬಂದರೆ ಇದಿಷ್ಟು ಹಿಟ್ಟಿಗೇ ಹೊನ್ನು ಸಿಕ್ಕೀತು. ಆ ಹಣನನ್ನು ಕೊಟ್ಟು ಎರಡು ಆಡುಗಳನ್ನು ಕೊಂಡುಕೊಳ್ಳುವುದು. ಅವು ಆರು ತಿಂಗಳಿಗೆ ಮರಿ ಹಾಕುವುದರಿಂದ ಕೆಲವು ವರ್ಷಗಳಲ್ಲಿ ಒಂದು ಹಿಂಡು ಆಗುತ್ತವೆ. ಆ ಹಿಂಡು ಮಾರಿ ಒಂದು ಒಳ್ಳೆಯ ದೊಡ್ಡ ಹಸುವನ್ನು ಕೊಂಡು ಕೊಳ್ಳುವುದು: ಜೊತೆಗೆ ಒಂದು ಎಮ್ಮೆಯನ್ನೂ ಕೊಳ್ಳುವುದು. ಜೊತೆಗೆ ಒಂದು ಹೆಣ್ಣು ಕುದುರೆಯನ್ನು ಕೊಂಡುಕೊಳ್ಳುವುದು. ಇವೆಲ್ಲವೂ ಈದು ಅವೆಲ್ಲವೂ ದೊಡ್ಡವಾದ ಮೇಲೆ ಅವುಗಳನ್ನು ಮಾರಿದರೆ ಬೇಕಾದಷ್ಟು ಚಿನ್ನವು ಸಿಕ್ಕುವುದು. ಆ ಚಿನ್ನದಿಂದ ಒಂದು ತೊಟ್ಟಿಯ ಮನೆಯನ್ನು ಕೊಂಡುಕೊಳ್ಳುವುದು.
ಆಗ ಯಾವನಾದರೂ ಒಬ್ಬನು ಯೋಗ್ಯನು ಬಂದು ರೂಪವತಿಯಾದ ತನ್ನ ಮಗಳನ್ನು ಬಲವಂತ ಮಾಡಿ ನನಗೆ ಕೊಡುವನು. ಅವಳಲ್ಲಿ ಒಂದು ಗಂಡು ಮಗುವಾಗುವುದು. ಆ ಮಗುವಿಗೆ ಸೋಮಶರ್ಮ ಎಂದು ಹೆಸರು ಇಡುವೆನು. ಆ ಮಗವು ಅಂಬೆಗಾಲು ಇಡುವಷ್ಟು ಆಗುವುದು. ಅದು ನಾನು ಒ೦ದು ದಿವಸ ಅಶ್ವ ಶಾಲೆಯ ಬಳಿ ಪುಸ್ತಕವನ್ನು ಹಿಡಿದು ಓದುತ್ತಾ ಕುಳಿತಿದ್ದರೆ ನನ್ನನ್ನು ಕಂಡು ಅಂಬೆಗಾಲಿಕ್ಕಿಕೊಂಡು ನನ್ನ ಕಡೆಗೆ ಬರುವುದು. ಆಗ ನಾನು “ಮಗುವು ಕುದುರೆಯ ಕಾಲಿಗೆ ಸಿಕ್ಕಿದರೆ ಏನು ಗತಿ?” ಎಂದು ಕೋಪಗೊಂಡು, ಮಗುವಿನ ತಾಯನ್ನು ಕೂಗಿ “ಮಗುವನ್ನು ಎತ್ತಿಕೋ” ಎಂದು ಗದುರುವೆನು. ಅವಳು ಏನೋ ಮನೆಗೆಲಸ ಮಾಡುತ್ತಿದ್ದು ನನ್ನ ಮಾತು ಅವಳಿಗೆ ಕೇಳಿಸದೆ ಹೋಗುವುದು. ಆಗ ನಾನು ಎದ್ದು ಹೋಗಿ ಅವಳನ್ನು ಹೀಗೆ ಝಾಡಿಸಿ ಒದೆಯುವೆನು.”
ಹೀಗೆ ಯೋಚನೆ ಮಾಡುತ್ತ ಮಾಡುತ್ತ ಅವನಿಗೆ ಮೈಮರೆತು ಹೋಗಿತ್ತು. ನಿಜವಾಗಿಯೂ ಹೆಂಡತಿಯನ್ನು ಒದೆಯುವವನಂತೆ ಝಾಡಿಸಿ ಒದ್ದೇ ಒದ್ದನು. ಆ ಒದೆತವು ಮಡಿಕೆಗೆ ಬಿತ್ತು ಆ ಮಡಿಕೆಯು ಒಡೆಯಿತು. ಅದರಲ್ಲಿದ್ದ ಹಿಟ್ಟೆಲ್ಲ ಅವನ ಮೇಲೆ ಬಿತ್ತು. ಅದರಿಂದ “ಫಲಿಸಿದ ಕಾರ್ಯದ ಫಲವಂ ಚಿಂತಿಸಿ ಮೊದಲಾಗಿ ಹೇಳಿದೆನು” ಎಂದನು.
ಸುವರ್ಣಸಿದ್ದಿಯು “ನಿಜ ನಿಜ ಇದು ನಿನ್ನ ದೋಷವಲ್ಲ ಸರ್ವರೂ ಲೋಭದಿಂದ ಹಾಗಾಗುವರು- ಕೇಳಲಿಲ್ಲವೆ?
ಫಲವನೆಣಿಸದೆ ಚಪಲ ಮತಿಯಿಂ | 
ಕೆಲಸ ಮಾಡಲು ಕೇಡು ತಪ್ಪದು ॥ 
ಚಂದ್ರ ನರಪನ ನೋಡಿ ಕಲಿಯೈಯ್ಯಾ ॥ ೨೯ ॥ 
ಚಕ್ರಧರನು “ಅದೆಂತು?” ಎಂದು. ಕೇಳಲು ಅವನು ಹೇಳಿದನು:-
*****
ಚಂದ್ರ ಭೂಪತಿಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...