
ಅರಸಿನ ಕುಲವೋ , ಏನಿದ್ದೇನು!
ಸುರವಧುರೂಪೋ ; ಏನಿದ್ದೇನು!
ಗುಣವೋ, ಸೊಬಗೋ, ಏನಿದ್ದೇನು!
ಪದುಮಾ, ಇದ್ದುವು ನಿನಗೆಲ್ಲಾ
ಪದುಮಾ, ಎಚ್ಚತ್ತಳುವುದೆ ಅಲ್ಲದೆ
ಕಣ್ಣಿವು ನಿನ್ನನು ಕಾಣುವುವೆ?
ನೆನಸಿಕೊಳುವೆ, ಬಿಸುಸುಯ್ಯುವೆ, ಇರುಳನು
ನಿನಗೆಯ ಮೀಸಲು ತೆಗೆದಿಡುವೆ.
*****
LANDOR (1775 – 1864): Rose Aylmer














