ಎಣೆಯಿಲ್ಲದೀ ಸೊಬಗ
ನೋಡಿ ಸಂತಸಗೊಂಡು
ಸವಿಯಿದನು ಹಾಡಬೇಕೆಂದುಲಿವ ಜೀವ!
ಆನಂದದಾ ಮುಕುಟ
ಮೌನವೆಂಬುದನರಿದು
ನಿಗ್ರಹಿಸು, ನುಡಿಯದಿರು ನುಡಿಗೂಳಿಯಾಗಿ.
ನೀನು ಕಂಡಿಹ ಚೆಲುವ
ಕೋಟಿ ಕಣ್ಗಳು ಕಂಡು
ಮರೆಯಾಗುವವು ನಿನ್ನ ಕಣ್ಣಿನಂತೆ,
ಕಾಣಿಸಿಹ ಚೆಲುವು ತಾ
ಮರುಚಣಕೆ ಮಾರ್ಪಟ್ಟು
ಮರೆಯಾಗುವದು ಕಳೆದ ಮಾಗಿಯಂತೆ.
*****


















