ಹೊಸ ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳ ಹರಾಜು ಪ್ರಕ್ರಿಯೆಯ ೪೦ ಸುತ್ತುಗಳು ಈಗಾಗಲೇ ಪೂರ್ಣವಾಗಿದ್ದು ಬೆಂಗಳೂರಿನ ಒಂದು ರೇಡಿಯೊ ಚಾನೆಲ್ ಹರಾಜಿನ ಬಿಡ್ ಮೊತ್ತ ೧೦೫ ಕೋಟಿ ರೂಪಾಯಿ ದಾಖಲಿಸಿರುವುದು…!
ಅಬ್ಬಾ! ಬಿಡ್ ದಾಖಲಿಸಿದ ಎರಡನೆಯ ಮಹಾನಗರವಾಗಿ ಬೆಂಗಳೂರು ಈಗಾಗಲೇ ಹೊರ ಹೊಮ್ಮಿದೆ.
ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳು ಬೆಂಗಳೂರಿನಲ್ಲಿ ಬಲು ಜನಪ್ರಿಯತೆ ಹೆಚ್ಚಿಸಿಕೊಂಡಿರುವುದನ್ನು ಮತ್ತು ಅವುಗಳಿಗಿರುವ ಬಲು ಬೇಡಿಕೆಯನ್ನು ಇದು ಬಿಂಬಿಸಿರುವುದು.
ದಿನಾಂಕ ೦೭-೦೮-೨೦೧೫ ರಂದು ೪೦ ಸುತ್ತುಗಳು ಪೂರ್ಣಗೊಳ್ಳುವುದು. ಇದು ಮೂರನೆಯ ಹಂತದ ಹರಾಜು ಪ್ರತಿಕ್ರಿಯೆಯೆಂದು ಖಚಿತ ಪಡಿಸಿರುವುದು!
ದಿನಾಂಕ ೧೦-೦೮-೨೦೧೫ ರಂದು ೪೧ ನೆಯ ಸುತ್ತು ಹರಾಜು ಪ್ರಕ್ರಿಯೆ ಆರಂಭವಾಗಲಿದೆಯೆಂದು ಸ್ಪಷ್ಟ ಪಡಿಸಿರುವುದು.
ಮೊತ್ತ ಮೊದಲು ಹರಾಜು ಪ್ರಕ್ರಿಯೆಯಲ್ಲಿ ೬೯ ಮಹಾನಗರಗಳಿಗೆ ೧೩೫ ತರಂಗಾಂತರಗಳನ್ನು ಹರಾಜಿಗಿಡಲಾಗಿತ್ತು. ಇದು ಇದುವರೆಗೆ ಒಟ್ಟು ೯೪೬ ಕೋಟಿ ರೂಪಾಯಿ ಬಿಡ್ ದರ ಬಾರಿ ಬಾರಿ ದಾಖಲಾಗಿರುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ಅಂಕಿ ಅಂಶಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ.
ನವ ದಿಲ್ಲಿಯಲ್ಲಿ ವಾಹಿನಿಯ ಬಿಡ್ ಮೌಲ್ಯ ೧೪೪ ಕೋಟಿ ರೂಪಾಯಿಗೆ ಈಗಾಗಲೇ ಏರಿಕೆಯಾಗಿದ್ದು ಇದುವರೆಗೆ ೫೬ ಮಹಾನಗರಗಳಲ್ಲಿ ೮೬ ಚಾನಲ್‌ಗಳ ಬಿಡ್ ಯಶಸ್ವಿಯಾಗಿದೆಯೆಂದು ಖಷಿತಪಡಿಸಿರುವುದು.
ನಮ್ಮ ದೇಶದಲ್ಲಿ ಎಫ್ ಎಮ್ ರೇಡಿಯೊ ವಾಹಿನಿಗಳ ಪ್ರಸಾರವನ್ನು ವಿಸ್ತರಿಸುವ ಸಲುವಾಗಿ ವಾರ್ತಾ ಮತ್ತು ಪ್ರಸಾರ ಖಾತೆಯು ೨೦೧೧ ರಲ್ಲಿ ಮಾರ್ಗದರ್ಶಿಯನ್ನು ಈಗಾಗಲೇ ಹೊರಡಿಸಿತ್ತು. ತದನಂತರ ಟ್ರಾಯ್ ಶಿಫಾರಸ್ಸುನ್ನು ಪಡೆದು ಈಗಿರುವ ಎರಡನೆಯ ಹಂತದ ಪರವಾನಗಿಯನ್ನು ಮೂರನೆಯ ಹಂತಕ್ಕೆ ವಿಸ್ತರಿಸಲು ಅದು ನಿರ್ಧರಿಸಿತ್ತು. ಅದರ ಪ್ರಕಾರ ಈಗ ಎಫ್ ಎಮ್ ಮೂರನೆಯ ಹಂತದ ಹರಾಜು ಪ್ರಕ್ರಿಯೆ ಜರುಗುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ದೃಢ ಪಡಿಸಿದ್ದು ಇರುತ್ತದೆ.
ಮುದ್ದು ಮಕ್ಕಳೆ… ಎಫ್‌ಎಮ್ ರೇಡಿಯೋ ಕತೆ ಕೇಳಿದಿರಲ್ಲ …? ಪ್ರತಿಯೊಂದು ಮನೋರಂಜನೆಯ ಚಾನಲ್ ಹಿಂದೆ, ಒಂದು ಕತೆಯಿರುವುದು ಅದನ್ನು ಆಲಿಸಿದಾಗಲೇ ಅದರ ಹಿನ್ನಲೆ ತಿಳಿಯುವುದು ಅಲ್ಲವೇ?
*****

















