“ತನ ಬಾವ ತನ್ ಗುರುತಾಆಆ ಹಿಡಿದಾನೆಯಾಅಅ ತಾನಾ”ಅಅಅಅಅಅ
ಲಂದೀ ತಾಅಅ ನೀಗೇಏಏ ಹೇಳುತನೆಯೊ ತಾನಾ || ೧ ||
“ಅಯ್ಯೋ ನನ ತಮ್ಮಾ ನೀ ಕೇಳೋ ಲೀಗಿನ್ನು
ನಿನ ಬಾವ ನಿನ್ನ ಗುರುತಾ ಹಿಡಿದಿದುರೇ ತಾನಾ || ೨ ||
ಲಾಗಳು ನನಗೀಗೇ ಮೋಸಾಲಾಆ” ತಾನಾ
“ಅಣ್ಣಾ ನಾ ಬರಣ್ಣಾ ತಟುಕಂಡೀ ವೀಗಿನ್ನು || ೩ ||
ನಿನ್ನಾ ಆಬರ್‍ಣ ಅಣ್ಣಗೆ ದರುಸಿದಿಯಾ ತಾನಾ”
“ಅಂದ್ಹೇಳರು ಶೀಟ್ಟೇ ಬಕ್ಕಾಲಾ ವೀಗಿನ್ನು” || ೪ ||
ಅಂದ್ಹೇಳೂ ತಾನೇ ನುಡಿತಳೆಯೊ ತಾನಾ
“ಅಯ್ಯೋ ನನ್ನಕ್ಕಾ, ನೀ ಕೇಳೇ ವೀಗಿನ್ನು || ೫ ||
ಹೊಡುದುರು ವಂದು ಪೆಟ್ಟೇ ತಿನುತೇನೇ ತಾನಾ
ಬಯ್ದಾರೊಂದು ವಾಕ್ಸೀ ಕೇಳುತೇನೇ ವೀಗಿನ್ನು || ೬ ||
ನಿನ್ನ ಆಬರ್‍ಣ ತನಗಾಲಾ ತಾನಾ
ಹೆಣ್ಣೂ ಯೇಸಾನೇ ಕೊಡುಬೇಕೇ ಲೀಗಿನ್ನು” || ೭ ||
ಲಂದ್ಹೇಳು ತಾನೀಗೇ ನುಡಿತನೆಯೇ ತಾನಾ
ತಮ್ಮನ ಹನುಟೀನೇ ತಾಳುಲಾರದೇ ಲೀಗಿನ್ನು
ತನಾಲಾಬರಣಾ ಕೊಟ್ಟಿದಳೋ ತಾನಾ || ೮ ||
*****
ಹೇಳಿದವರು: ಗೊಂಡ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.