ಬರೆದವರು: Thomas Hardy / Tess of the d’Urbervilles
ನಾಯಕನಿಗೆ ಇಂದು ಹೊಸತಲೆನೋವು ಬಂದಿದೆ. ಅವನು ಇದುವರೆಗೆ ಮಾದೇಗೌಡನ ಹತ್ತಿರ ಮೊಕಕೊಟ್ಟು ಮಾತನಾಡಿಲ್ಲ. ಇವೊತ್ತು ಮಾತನಾಡದಿದ್ದರೆ ಯತ್ನವಿಲ್ಲ ಅವನು ಸಮಾಪ ಬಂಧು ಆದರೂ ಅವನ ಮನೆಗೆ ತಾನು ಹೋಗುವುದು ಇಷ್ಟವಿಲ್ಲ. ಕರೆದರೆ ಅವನು ಬರುವನೋ ಇಲ್ಲವೋ? ಈಚೆಗೆ ದಿವಾನರ ಬಳಿ ಡಪ್ಯುಟೇಷನ್ ಹೋಗಿ ಬಂದಿದ್ದಾನೆ. ಆ ಡೆಪ್ಯುಟೇಷನ್ನಲ್ಲಿ ತನ್ನನ್ನು ಸೇರಿಸಿ ಕೊಳ್ಳ ಲಿಲ್ಲ ಎಂದು ನಾಯಕನಿಗೆ ಕೋಪವೂ ಇದೆ : ಸಾಲದೆ, ಹೋಗಿ ಬಂದವನು ಏನಾಯಿತು ಎಂದು ಹೇಳಬೇಡವೆ ? ಹಾಗೆ ಹೇಳಿದ್ದರೆ ತನ್ನ ಘನತೆಗೆ ಕುಂದಲ್ಲವೇ ? ಎಂದು ಅದು ಒಂದು ಸಂಕಟ. ಈ ಸಂಕಟಗಳನ್ನೆಲ ಬದಿಗೆ ತಳ್ಳಿ, ಕೋಪವನ್ನೂ ತುಳಿದು ಹೇಳಿ ಕಳುಹಿಸಿ ದರೆ ಬರದೇ ಹೋದರೆ? ಏನುಗತಿ ? ಬಂದಕ್ಕೆ ಅವನನ್ನು ಎಲ್ಲಿ ಕುಳ್ಳಿರಿಸಿ ಮಾತನಾಡಬೇಕು ? ಮೊದಲನೆ ತೊಟ್ಟಿಯಲ್ಲಿ ಮಾತನಾಡಿ ಸಿದರೆ ಅವನಿಗೆ ಅಪಮಾನ. ಎರಡನೆಯ ತೊಟ್ಟಿಗೆ ಕರೆಯುವುದಕ್ಕೆ ಇಷ್ಟವಿಲ್ಲ. ಏನು ಮಾಡಬೇಕು ?
ಒಂದುದಿನವೆಲ್ಲ ಯೋಚಿಸಿದ: ಮತ್ತೊಬ್ಬರ ಬಳಿ ಸಲಹೆ ಕೇಳುವಹಾಗಿಲ್ಲ. ಅದಿಲ್ಲದೆ, ನಾಯಕನ ಲೋಕಾನುಭನ ಒಂದು ಬುದ್ದಿ ಕಲಿಸಿತ್ತು. ಶ್ರೀಮಂತರು ಯಾರನ್ನಾದರೂ ಸಲಹೆ ಕೇಳಿದರೆ, ಲೋಕದಲ್ಲಿ ಯಾರೇ ಆಗಲಿ, ಶ್ರೀಮಂತರ ಮನಸ್ಸಿಗೆ ಸರಿಯಾಗಿ ಹೇಳು ವರಲ್ಲದೆ, ಕರ್ತವ್ಯವನ್ನು ಕುರಿತು ಹೇಳುವುದಿಲ್ಲ. ಅದೇ ಸೊಗಸು. ಶ್ರೀಮಂತನು ಬೇವಿನ ಮರದ ಮುಂದೆ ನಿಂತು, ಇದೇನು ತೆಂಗಿನಮರ ಕವಲು ಬಿಟ್ಟಿದೆ ? ಎಂದರೆ ಸುತ್ತಲೂ ಇದ್ದವರು, ಹಂಗೇ ಕಾಣ್ತದೆ ಅನ್ನುವರು ಕೆಲವರು : ಹೌದು. ಏನೋ ಆಗಿ, ತೆಂಗಿನಮರ ಕವಲು ಬಿಟ್ಟಿದೆ, ಎಂದು ಒಪ್ಪಿಕೊಂಡು, ನೋಡಿ, ಗರಿಗಳು ಕೊಂಬೆಗಳಾದಾಗ ಸಣ್ಣ ಗರಿಗಳು ಅದಕ್ಕೆ ತಕ್ಕಂತೆ ಚಿಕ್ಕಚಿಕ್ಕವಾಗಿವೆಯಲ್ಲ : ದೈವವಿಲಾಸ! ಯಾರು ಬಲ್ಲರು? ಯಾವ ಕಾಲಕ್ಕೇನೋ ಎಂದು ಕಲಿಯದ, ಕೇಳದ, ತಿಳಿಯದ, ವೇದಾಂತವನ್ನೆಲ್ಲ ನುಡಿದು, ಅದು ಸತ್ಯ ಎನ್ನು ವುದಕ್ಕೆ, ಆ ಸತ್ಯವನ್ನು ತಾವು ಬಲ್ಲೆನು ಎನ್ನುವುದಕ್ಕೆ ಎಷ್ಟು ಬೇಕೋ ಅಷ್ಟು ಹೇಳುವವರೇ ಹೆಚ್ಚು ; ಅದರಿಂದ ನಾಯಕನು ಒಬ್ಬರನ್ನೂ ಸಲಹೆ ಕೇಳುತ್ತಿರಲಿಲ್ಲ. ಯಾವ ಕೆಲಸಮಾಡಬೇಕಾದರೂ ದೀರ್ಫವಾಗಿ ಯೋಚಿಸುವನು. ಪುರಾಣಗಳಲ್ಲಿ ಯಾವುದಾದರೂ ಘಟ್ಟವನ್ನು ನೆನೆದು ಕೊಳ್ಳುವನು : ಅಲ್ಲಿನ ಹಿರಿಯರು ಏನು ಮಾಡಿರುವರು ಎಂಬುದನ್ನು ಯೋಚಿಸಿ ಅದನ್ನು ಸಂದರ್ಭಕ್ಕೆ ಹೊಂದಿಸಿಕೊಂಡು ನಡೆಯುವನು : ಸಾಮಾನ್ಯವಾಗಿ ನೂರಕ್ಕೆ ತೊಂಭತ್ತರಲ್ಲಿ ಗೆಲ್ಲುವನು. ಅದು ಅವನಿಗೆ ವಾಡಿಕೆಯಾಗಿತ್ತು. ಆತನ ದೃಷ್ಟಿಯಲ್ಲಿ ಶ್ರೀಮಂತಿಕೆ ಸೌಭಾಗ್ಯ ಮಾತ್ರ ವಲ್ಲ; ತೆಂಗಿನಮರ ಹತ್ತಿ ಕೂತವನ ಹಾಗೆ : ಬೇಕೆಂದರೂ ಮೆಲ್ಲಗೆ ಇಳಿಯಬೇಕೇ ಹೊರತು ಧುಮುಕುವಂತಿಲ್ಲ. ಮೇಲೆ ಕುಳಿತಿರುವಾಗ ಭದ್ರವಾಗಿಯೇ ಇದ್ದರೂ ಮೈಮರೆಯುವಂತಿಲ್ಲ.
ಈಗಲೂ ಕುಳಿತು ಒಂದು ದಿನ ಯೋಚಿಸಿದನು : ಇದು ಕೃಷ್ಣ ಕಲಹವಾಡದ ಹಾಗೆ ಕರ್ಣನ ಕಿವಿ ಕಚ್ಚಿ ಕೌರವಕುಲವ ಕೊಂದಂತೆ ಮಾಡಬೇಕು ಎಂದು ನಿಶ್ಚಯಿಸಿಕೊಂಡ್ಕು ತನಗೆ ಬೇಡವಾದ ಎಂಬುದನ್ನೂ ಗಮನಿಸದೆ, ಅವನ ನುನೆಗೆ ಹೋಗಿ ತಾನೇ ಕರೆಯ ಬೇಕು ಎಂದು ಗೊತ್ತುಮಾಡಿಕೊಂಡು, ಆ ಸಿದ್ಧಾಂತವನ್ನು ಪುನರ್ವಿ ಮರ್ಶೆ ಮಾಡಿದನು. ಹಲವು ತೆರದಿಂದ ಅದು ಸರಿಯೆಂದಾಯಿತು. ತಲರೇನೋವು ಅರ್ಥಬಿಟ್ಟಿತು.
ಮಾದೇಗೌಡನು ಸುಮಾರು ಮೂವತ್ತು ಮೂವತ್ತದು ವಯಸ್ಸಿನ ಪ್ರಾಯದನನು. ದೇಹ ಅಷ್ಟು ದೊಡ್ಡದಲ್ಲ: ಎತ್ತರ ಇತ್ತು ಅನ್ನಬೇಕು ಆದರೂ ಐದೂವರೆ ಅಡಿಗಿಂತ ದೊಡ್ಡದಲ್ಲ: ದಪ್ಪ ಬಹುಶಃ ಗಳುವಿನ ಬೊಂಬೆಯಲ್ಲ ಬಿದಿರಿನಬೊಂಬೆಯೆನ್ನಿಸಿ ಕೊಳ್ಳುವಷ್ಟು: ತೂಕ ಸುಮಾರು ನೂರು – ಅಥವಾ ನೂರು ಹತ್ತು ಪೌಂಡು ಇರಬಹುದು. ಆರಡಿ ಎತ್ತರದ ನೂರೆಂಭತ್ತು ಪೌಂಡಿನ ನಾಯಕನ ಮಗ್ಗುಲಲ್ಲಿ ಅವನು ನಿಂತರೆ, ಅಂಗಡಿಗಳಲ್ಲಿ ಹಾಕಿರುವ I sold on credit: I sold on cash ಬೊಂಬೆಗಳೆಂತಿ- ರುವುದು.
ಸುಮಾರು ಆರುಗಂಟೆ ಇರಬಹುದು: ನಾಯಕನ ಕುದುರೆ ಮಾದೇಗೌಡನ ಮನೆಯ ಬಾಗಿಲಲ್ಲಿ ನಿಂತಿತು. ಬಾಗಿಲು ತೆಗೆದಿತ್ತು : ಆಳು ದನದ ಕೊಟ್ಟಗೆಯನ್ನು ಗುಡಿಸುತ್ತಿದ್ದಾನೆ. ನಾಯಕನು ಕುದುರೆಯ ಮೇಲೆ ಕುಳಿತು, “ಇದಾರಾ ಅಯ್ಯಾ” ನಿಮ್ಮ ಗೌಡರು ] ? ಎಂದು ಕೇಳಿದನು. ಅಳಿಗೆ ನಂಬಿಕೆಯೇ ಇಲ್ಲ: ನೋಡಿದರೂ ತನ್ನ ಕಣ್ಣು ನಂಬ : ನಾಯಕರು ಬಂದಿರುವರು ಎಂದು ನಂಬುವುದಕ್ಕೆ ಅಷ್ಟು ಹೊತ್ತು ಹಿಡಿಯಿತು. ಆಳು “ಗದ್ದೇ ಕಡೇ ಓಗವ್ರೆ ಬುದ್ದಿ” ಎಂದು ಕೈಮುಗಿದನು. ನಾಯಕನಿಗೇನು ಊರವರಿಗೆಲ್ಲಾ “ಗೊತ್ತು : ಮಾದೇಗೌಡನು ಎಂಟು ಗಂಟೆಗೆ ಏಳುವುದು ಎಂದು. ಆದರೂ ಮನೆ ಮಂದಿಯೆಲ್ಲ ಅವನು ಏಳುವುದಕ್ಕೆ ಮುಂಚೆ ಯಾರಾದರೂ ಬಂದರೆ “ಗದ್ದೇಕಡೆ ಹೋಗವ್ರೆ ಬುದ್ದಿ” ಅನ್ನುವರು. ಮಜ್ಜಿಗೆ ಹಳ್ಳಿಯಲ್ಲಿ “ಗದ್ದೇಕಡೇ ಹೋಗವ್ರೆ ” ಎಂದರೆ, ಇನ್ನೂ ಹಾಸುಗೆ ಬಿಟ್ಟು ಎದ್ದಿಲ್ಲ ಎನ್ನುವುದರ ಪರ್ಯಾಯ ಎಂದಾಗಿತ್ತು.
ನಾಯಕನಿಗೆ ಬೇಕಾಗಿದ್ದುದೂ ಅಷ್ಟೇ! ತಾನು ಬಂದಿದ್ದೆ ಎಂದಾಗಬೇಕು: ಯತ್ನವಿಲ್ಲದೆ ಅವನು ತಾನಾಗಿ ಬರುವಂತಾಗಬೇಕು ಎಂದೇ ನಾಯಕನು ಅಷ್ಟು ಹೊತ್ತಿಗೇ ಗೌಡನನ್ನು ಹುಡುಕಿಕೊಂಡು ಹೋದುದು. ನಾಯಕನಿಗೆ ಆಳಿನ ಮಾತನ್ನು ಕೇಳಿ ನಗು ಬಂತು: ಆದರೂ ನಗುವನ್ನು ತಡೆದುಕೊಂಡು “ನಾ ಬಂದಿದ್ದೆ ಅನ್ನಯ್ಯಾ ನಾಷ್ಟಾ ಆದ ಮೇಲೆ ಗೌಡರನ್ನು ಕಾಯ್ಯೊಂಡಿರುತೀನಿ” ಅಂತ ಹೇಳು. ಎಲ್ಲರೂ ಚನ್ನಾಗವ್ರಾ ಗೌಡರ ಮನೆಯಲ್ಲಿ?” ಎಂದು ಹೇಳಿ. ಕೇಳಿ, ವಿಚಾರಿಸಿಕೊಂಡು ಮುಂದೆ ಬಂದನು.
ಆಳು “ಇದೇನು ಬುದ್ದಿಯೋರು ಬಂದಿದ್ದು ಯಾವತ್ತೂ ಇಲ್ಲವಲ್ಲ!” ಎಂದು ಆಶ್ಚರ್ಯಮಗ್ನನಾಗಿ, ಹೋದನು.
ಸುಮಾರು ಎಂಟುಗಂಟೆಗೆ ಗೌಡನು ಎದ್ದನು. ಅವನು ಎದ್ದ ಕೂಡಲೇ ಗಂಟೆಯಾಗುವುದು. ಆಳು ಬಿಸಿ ಬಿಸಿ ಟೀ ತೆಗೆದುಕೊಂಡು ಹೋಗಿ ಹಾಸುಗೆಯ ಮೇಲೆ ಕೊಡಬೇಕು. ಗೌಡನು ಟೀ ಆದಮೇಲೆ ಎದ್ದು ಕಾಲುಗಂಟೆ ವೆೊಕ ತೊಳೆದುಕೊಂಡು ಬರುವನು. ಆಮೇಲೆ ನಾಸ್ಟಾ. ಅದಾದ ಮೇಲೆ ಒಂದು ಎರಡು ಮೂರು ಸಿಗರೇಟ್; ಜೊತೆಗೆ ಏನೋ ಔಷದಿ. ಅದನ್ನು ಕುಡಿದರೆ ಮೊಕ ಕೆಂಪಾಗುವುದು : ಕಣ್ಣು ಕೊಂಚ ಕಿರಿಗಣ್ಣು ಬೀಳುವುದು. ಆ ಸೊಂಪಿನ ಭಾವದಲ್ಲಿ ಎಳೆ ಬಿಸಿಲು ಬಲಿಯುತ್ತಿರುವಾಗ, ಇಷ್ಟವಿದ್ದರೆ, ಗೌಡನು ಹೋಗಿ ಹೊಲ ಗದ್ದೆ ನೋಡಿ ಬರುವನು.
ಈ ದಿನ ಎದ್ದು ನಾಷ್ಟಾ ಮಾಡುತ್ತಿದ್ದಾಗ ಗೌಡನಿಗೆ ನಾಯಕನು ತಾನಾಗಿ ಬಂದು ಬರಹೇಳಿ ಹೋದುದು ತಿಳಿಯಿತು. ಅವನಿಗೆ ಆಶ್ಚರ್ಯ: ಸಂತೋಷ. ನಾಯಕನಂಥವನೂ ತನ್ನ ಮನೆಯ ಬಾಗಿಲಿಗೆ ಅಲೆಯ ಬೇಕು ; ಹಾಗೆ ಮಾಡಿಕೊಳ್ಳ ಬೇಕೆಂದಿದ್ದ. ತನ್ನ ಆಶೆ ನೆರವೇರಿತೆಂಬ ಸಂತೋಷ – ನಾಯಕನು ತಾನೇಬಂದನೇ! ಎಂದು ಆಶ್ಚರ್ಯ. ಅಂತೂ ಹೋಗಬೇಕು – ನೋಡಿಕೊಂಡು ಬರಬೇಕು ಎನ್ನಿಸಿತು.
ಸುಮಾರು ಒಂಭತ್ತೂವರೆ ಗಂಟೆಯಿರಬಹುದು. ಗೌಡನು ನಾಯಕನನ್ನು ಕಾಣಲು ಬಂದನು. ಮನೆವಾರ್ತೆ ನಂಜಪ್ಪನು ಗೌಡನನ್ನು ಕರೆದುಕೊಂಡು ಹೋಗಿ ಎರಡನೆಯ ತೊಟ್ಟಿಯ ದಿವಾಸಖಾನೆಯಲ್ಲಿ ಕೂರಿಸಿದನು, ಗೌಡನಿಗೆ ಅಭಿಮಾನಕ್ಕೆ ತೃಪ್ತಿಯಾಯಿತು. “ಪರವಾ ಯಿಲ್ಲ. ನಾಯಕ ನಮ್ಮ ಅಂತಸ್ತಿಗೆ ತಕ್ಕಂತೆ ನಡೆದವನೆ ” ಎನ್ನಿಸಿತು. ನಿರಾಳವಾಗಿ ಕುಳಿತನು.
ನಾಯಕನು ಕೊಂಚ ಹೊತ್ತಿನಲ್ಲಿ ಬಂದನು: “ಏನು ಪಟೇಲ ರಿಗೆ ನಾಷ್ಠಾ ಆಯಿತಾ?” ಎನ್ನುತ್ತಲೇ ಒಳಗೆ ಬಂದನು : ಅವನ ಹಿಂದೆಯೇ ಆಳು ಬಂದು ಮಾಂಸದ ತಿಂಡಿಯನ್ನು ತಂದು ಇಟ್ಟನು.
ಗೌಡನು ನಾಯಕನು ಬಂದಕಿ ಕುಳಿತೇ ಮಾತನಾಡಬೇಕೆಂದು ಇದ್ದನು : ಆದರೆ ಏಕೋ ಏನೋ ಅವನು ಬರುತ್ತಿದ್ದಹಾಗೆಯೇ ಎದ್ದು ನಿಂತನು. ಅವನು ಕುಳಿತುಕೊಂಡಮೇಲೆ ಕುಳಿತುಕೊಂಡನು. ಇಬ್ಬರೂ ತಿಂಡಿ ತಿಂದು, ಕುಡಿದು ಅಡಕೆಲೆಯನ್ನು ಹಾಕಿಕೊಳ್ಳುತ್ತಾ ಮಾತನಾಡಿದರು :
ನಾಯಕನೇ ಮೊದಲು ಕೇಳಿದನು:
“ಅದೇನು ನೀನೆಲ್ಲ ದಿನಾನರ ಹತ್ತಿರಕ್ಕೆ ಹೋಗಿದ್ದರಂತಲ್ಲ!”
“ಅದಾ! ನಾನು ಮೊನ್ನೆಯೇ ಬಂದು ಎಲ್ಲಾ ತಮ್ಮ ಹತ್ರ ಹೇಳಬೇಕು ಅಂತಿದ್ದೆ. ಏನೋ ಆಗ್ಲಿಲ್ಲ. ಅದು ಇಷ್ಟೇ! ಲೋಕ ಎಲ್ಲಾ ಬದಲಾಯತಾ ಅದೆ. ಅದರಲ್ಲಿ ತಮ್ಮ ಒಕ್ಕಲಮಕ್ಕಳು: ರಾಜ್ಯದಲ್ಲಿ ಇರೀನಿಂದಿಡಿದು ರಾಜ್ಯ ಆಳೋ ಮಹಾರಾಜರವರೆಗೆ ಎಲ್ಲರಿಗೂ ಅನ್ನ ಹಾಕೋರು; ಬೆವರು ಸುರಿದು ಬದುಕೋರು : ನಮಗೆ ಸರಕಾರದಲ್ಲಿ ಯಾಕೆ ದೊಡ್ಡ ದೊಡ್ಡ ಹುದ್ದೆ ಕೊಡೋಕಿಲ್ಲ ಅಂತ ಕೇಳೋಕೆ.”
” ಅವರೇನಂದ್ರು ”
“ನೀವೇಳೋ ಮಾತು ಸರಿಯಾಗಿದೆ. ಆದರೆ ಈಗತಾನೇ ಯೂನಿವರ್ಸಿಟಿ ಮಾಡಿದ್ದೀವಿ, ಇದ್ಯಾವಂತರು ಬರಲಿ. ಅವರಿಗೆ ತಪ್ಪಡೆ ಚಾಕರಿ ಕೊಡಿಸಿತೀವಿ, ಅಂದರು.”
“ಅಲ್ಲಾ ಅದೇನು ಎಲ್ಲಾಬಿಟ್ಟು ಚಾಕರಿ ಕೇಳೋಕೆ ಹೋಗಿದ್ರಿ ? ಏನೋ ಗತಿಯಿಲ್ದೆ ಪುಸ್ತಕ ಇಡಿದಿರೋ ಈ ಹಾರುವರ ಹೈಕಳ್ಗೆ ಹೊಟ್ಟಿಗಿಲ್ಲ: ಅವರಿಗೆ ಚಾಕರಿ ಬೇಕೂ ಅನ್ನೊದು ಏಿನೋ ಸರಿ, ಅದೇಕೆ ನಮ್ಮ ಮಕ್ಕಳ್ಗೂ ಅದೇ ಗತಿ ಬಂತಾ !”
ಗೌಡನು ಒಂದು ಗಳಿಗೆ ಸುಮ್ಮನಿದ್ದನು. ಧೈರ್ಯ ಮಾಡಿ ಹೇಳಿದನು : “ಬುದ್ದಿಯೋರ ತಾವು ಈ ಮಾತು ಹೋದವರ್ಷಾನೆ ಬರಬೇಕಾಗಿತ್ತು. ಇದು ಹೊಟ್ಟೆಗದೆ ಇಲ್ಲ ಅನ್ನೋ ಮಾತಲ್ಲ: ಅಧಿಕಾರದ ಮಾತು. ಮೊನ್ನೆ ನೀವು ಅಮಲ್ದಾರ್ ಚನ್ನೇಗೌಡರು ಬಂದಾಗ ನಮ್ಮೋರು ಅಂತಲ್ವಾ ಅಷ್ಟು ಮರ್ವಾದೆ ಮಾಡಿದ್ದು ? ಅಂಗೇ ಅವರೇ ರೆವಿನ್ಯೂ ಕಮೀಷನ್ನರೋ ಕೌನ್ಸಿಲ್ಲರೋ ಆದ್ರೆ ? ನೋಡಿ ಕಿರಸ್ತಾನರು ತುರುಕರು ಅವರೆಲ್ಲ ಕೌನ್ಸಿಲ್ಲರಾದರು : ನಮ್ಮೋರು ಒಂದು ಇಬ್ಬರಾದರೂ ಆಗಲಿ: ಅದೇನು ? ಮಿಕ್ಕೋರಿಗೆಲ್ಲ ತಲೆಮೇಲೆ ಕೊಂಬಿರೋದು ? ನಮಗಿಲ್ಲದಿರೋದು ? ಕೋಟಿ ರೂಪಾಯಿ ಕಂದಾಯ ಕಟ್ಟೋ ಜನ ಅಲ್ವಾ ನಾವು ? ಏನೂ ಕಂದಾಯ ಕೌಳಿ ಕೊಡದೋರಲ್ಲ ದೊಡ್ಡ ದೊಡ್ಡ ಹುದ್ದೇಗೆ ಬರಬೋದು ? ನಮ್ಮೋರು ಯಾಕೆ ಕೂಡದು ? ಈಗ ತಾವು ಮೇಲಿನ ಮನೆಗೆ ಮೆಂಬರಾದಿರಿ. ಸರಕಾರದೋರಿ ತಮ್ಮನ್ನು ಆರಿಸಿಕೊಂಡರು. ಈಗ ತಾವು ಯಾರಿಗೇನು ಕಡಿಮೆಯಾಗಿರೋದು ? ಈಗ ತಮಗೆ ನೆಂಬರುದಾರ್ರು ಆಗೋಕೆ ಮುಂಚೆ ಇಂಗ್ಲೀಷ್ ಬರುತ್ತಿತ್ತಾ ? ಈಗ ಕಲಿತಿಲ್ಲವಾ ? “ಅಂಗೇ ನಮಗೆ ಬರದಿದ್ದರೆ ಕಲೀತೀವಿ.”
“ನಾಯಕನು ನಕ್ಕುಬಿಟ್ಟನು. ಅವನ ನಗು ಕೇಳಿ ಗೌಡನಿಗೆ ತಬ್ಬಿಬ್ಬಾಯಿತು. ನಾಯಕನು ಹೇಳಿದನು : “ಪಟೇಲರೆ, ನಾನೂ ಏನು ಮಹಾ ಮೆಂಬರುತನ ಎಂದಿದ್ದೆ. ಮೊದಮೊದಲು ಆ ರೂಲ್ಸು, ಅದು ತಲೆನೋಯುತ್ತಿತ್ತು. ಈಗ ಅದೆಲ್ಲಾ ನೋಡಿಗೂಂಡಿವ್ನಿ. ಆದರೆ ಬಜೆಟ್ನಲ್ಲಿ ನಾವು ಮಾತಾಡೋಕಾಯ್ತದೆ ಅಂತೀರಾ? ಆ ದಾವಣಗೆರೆ ನಂಜುಂಡಯ್ಯನವರು, ಕಾಫಿಪ್ಲಾಂಟರು ವಾಸುದೇವ ರಾಯರು, ಆ ಜಡೆಯೋರು, ಮೈಸೂರಿನ ತಾತಯ್ಯನವರು ಈ ಹುಲಿ ಗಳ ಮುಂದೆ, ನಾವೆಷ್ಟರವರು? ನಾವು ಈ ಇಲ್ಲದ ಪೀಕಲಾಟ ತಂದಿಟ್ಟೊಳ್ಳೋದು ನನ್ನ ಮನಸ್ಸಿಗೆ ಹಿಡಿಯೋಕಿಲ್ಲ. ನಮ್ಮ ಆಸ್ತಿ ಪಾಸ್ತಿ ರೂಢಿಸಿಕೊಳ್ಳೋವ. ಈ ಚಾಕರಿ ನೌಕರಿ ಹೊಟ್ಟಿಗಿಲ್ಲ ದಿದ್ದೋರು ಮಾಡಿಕೊಳ್ಳಿ. ಏನೋ ದೊಡ್ಡಹುದ್ದೆ ಎಷ್ಟಿದ್ದಾವು ? ಎಲ್ಲಾ ಚಾಕರಿಗಳೂ ಸಣ್ಣ ಪುಟ್ಟೋವು. ಸುಬೇದಾರಿ ತಾನೇ ಏನು ಮಹಾ! ಏನೋ ಅಲ್ಲಿ ಇಲ್ಲಿ ಕರಕೂಂಡು ಕಿತ್ತುಕೊಂಡು ಬಾಳೋದು. ಅದೆಲ್ಲಾ ಬರೀ ಜಂಭ. ನಂಗೇನೋ ಬೇಡಾ ಅಂತದೆ ?”
ಗೌಡ ಅದಕ್ಕೆ ಉತ್ತರ ಹೇಳಲಾರದೆ ರೇಗಿಕೊಂಡು ಮಾತ ನಾಡಿದ : “ಬುದ್ಧಿಯೋರು ಹಿಂದಲಕಾಲದೋರು. ಈಗಿನೋರ ಬುದ್ದೀನೇ ತಮಗೆ ತಿಳೀದು. ತಮ್ಮ ಕಾಲದೋರಿಗೆ ಬೇಕಾಗಿದ್ದುದು ಆಸ್ತಿ, ಪಾಸ್ತಿ: ಈಗಿನೋರಿಗೆ ಬೇಕಾದ್ದು ಅಧಿಕಾರ. ಬರೀ ಜಂಭ ಅಂತೀರಿ : ಪರವಾಯಿಲ್ಲ. ಆ ಜಂಭಾನೇ ಬೇಕಾದ್ದು. ಮೊನ್ನೆ ಮೈಸೂರಲ್ಲಿ ನಾವೆಲ್ಲ ಮಾತಾಡಿಕೊಂಡಿದ್ದೀವಿ: ಮಹಾರಾಜರೂ ಕೂಡ, ನಮ್ಮ ಕೈಗೊಂಬೆ ಆಗಬೇಕು. ನಾವು ಹೇಳಿದಂಗೆ ಹೂಂ ಅನ್ನಬೇಕು. ಹಂಗೆ ಮಾಡೋತನಕ ನಾನು ಸುಮ್ಮನಿರೋಕಾದೀತಾ ? ಬರೋ ಸಲ ತಾವು ಎಲೆಕ್ಷನ್ಗೆ ನಿಲ್ಲಿ: ಆಗ ತಮಗೇ ತಿಳೀತದೆ. ನಾವೆಲ್ಲ ಮಾತಾಡಿಕೊಂಡಿನಿ. ಇನ್ನು ಮೇಲೆ ನಮ್ಮ ಓಟಿಲ್ಲಾ ನಮ್ಮೋರಿಗೆ. ತಾವೂ ನಮ್ಮ ಕಡೆ ಸೇರಿ ನಮ್ಮಂಗೆ ಮಾತಾಡಬೇಕು ಅಂಗಿದ್ದರೇನೆ ತಮಗೆ ಓಟು.”
“ಹಂಗಾದಕ್ಕೆ ನಮ್ಮ ಓಟೆಲ್ಲ ನೀನೇ ತಕೊಂಡುಬುಡುತೀರಿ ಅನ್ನಿ.” “ಏನು ಮಹಾ ಕಷ್ಟ ಬುದ್ಧಿ .. ಒಕ್ಕಲಿಗನ ಮಗನಾದರೆ ಒಕ್ಳಲಿಗನಿಗೇ ಕೊಡು ಅನ್ನೋದು. ಮುಗೀತು.”
“ಆಯ್ತು. ಅಲ್ಲಿಗೆ ನೀವೋಗಿ ಮಾಡೋದು ?”
“ಅದೇನು ಮಾಡೋದು ಅನ್ನೋದು ಇಲ್ಲಿಂದ ಯಾಕೆ ? ಈಗ ತಾತಯ್ಯನವರು ಅವರೆಲ್ಲ ಏನು ಮಾಡುತವ್ರೆ ? ಅವರು ಹತ್ತು ಜನ ಸೇರವ್ರೆ ? ಅವರು ಹೆಂಗೇಳಿದ್ರೆ ಅಂಗೆ ಕೇಳ್ತದೆ ಸರಕಾರ. ಹೆಂಗೇ ನಮ್ಮ ಮಾತು ಕೇಳಲಿ!”
“ಆಗಲಪ್ಪ ! ಹೂಂ ಅನ್ನೋವ. ಸರಕಾರ ಕೇಳದ್ರು ಆಗೇನು ಮಾಡ್ತೀರಿ ? ನಿಮ್ಮೋರಿಗೆಲ್ಲ ಚಾಕರಿ ಕೊಟ್ಟರು. ಆಗ ಏನು ಮಾಡ್ತೀರಿ ??
“ಮಿಕ್ಕ ಕೋಂನೋರ ಮೇಲೆಲ್ಲ ನಮ್ಮ ಅಧಿಕಾರ ಚಲಾಯಿ ಸ್ತೀವಿ.?
“ಮೈಸೂರಲ್ಲಿ ನಿಮ್ಮ ಕೋಂ ಒಂದೇನೋ ಇರೋದು? ಮಿಕ್ಕೋರೂ ಅವ್ರೋ ?”
” ಮಿಕ್ಟೋರೂ ಅವ್ರೆ !”
“ಅವರೂ ನಿಮ್ಮಂಗೇ ಮಾಡ್ದೆ)?”
ಗೌಡನಿಗೆ ಏನು ಹೇಳಬೇಕೋ ತಿಳೀಲಿಲ್ಲ. ಅದಕ್ಕೆ ಇನ್ನೂ ಅಷ್ಟು ಕೂಗಿ ಹೇಳಿದನು : “ಬುದ್ದಿ, ನೀವು ಇಂಗ್ಲಿಷ್ ಕಲಿತು ಬೇರೆ ಥರಾ ಆಗೋದ್ರಿ. ನಮ್ಮನ್ನು ಪಲ್ವೀ ಹೊಡಿಸಬೇಡಿ, ನಮ್ಮಂಗಾಗಿ. ”
ಇದುವರೆಗೂ ಕಾದಿದ್ದ. ನಾಯಕನು ಸಮಯ ನೋಡಿ ಗುಂಡು ಹೊಡೆಯುವ ಬೇಟೆಗಾರನಂತೆ, ಸೆಟೆದುಕೊಂಡು ಕೇಳಿದನು :
“ಅದೇನು ಮೊನ್ನೆ ನಡೆದ ಹೋಟಲಿನ ಪರಸಂಗ ?”
“ಆಂ! ಯಾವೊತ್ತು? ”
“ಮೈಸೂರಲ್ಲಿ ಕಣಯ್ಯ
ನೀವೆಲ್ಲ ಹೋಟಲ್ನೋನ್ನ ಮೇಲೆ ಬಿಳಾಕೆ ಹೋಗದ್ದರಂತಲ್ಲ! ”
ಗೌಡನು ನಾಯಕರಿಗೆ ಆದು ಗೊತ್ತಾಗಿರಬಹುದು ಅಂದು ಕೊಂಡಿರಲಿಲ್ಲ. ಏನೋ ಸಾರಿಸುವನಂತೆ, “ಅದೇನೋ
ಬುದ್ಧಿಯ ವರ ಗಂಟ ತಂದ-ಮಗ ಯಾರು? ” ಎಂದು ಬಿಟ್ಟ. ”
“_. ಮಗ ಅಲ್ಲ; ತಾತಯ್ಯನವರು ಖುದ್ದು ಬರೆಸವ್ರೆ ? ನಂಜಪ್ಪ, ಬಾರಯ್ಯ ಇಲ್ಲಿ. ಗೌಡರಿಗೆ ಸುಲಾವಣೆ ಮಾಡಿಸು.”
ನಂಜಪ್ಪ ಬಂದು ಓದಿದನು : “ರಾಜ್ಯಶ್ರೀ ನಾಯಕರ ಸನ್ನಿಧಿಗೆ. ಮಜ್ಜಿಗೆ ಹಳ್ಳಿ ಪಟೇಲ್ ಮಾದೇಗೌಡರು, ಇಲ್ಲಿ ಬಂದು ಹೊಟೇಲಿನಲ್ಲಿ ಇಳಿದುಕೊಂಡು ಅವಿವೇಕ ಮಾಡಿದ್ದಾರೆ. ಹೊಟೇಲಿನವನನ್ನು ಅವನು ಮಾಡಬಾರದ ಕೆಲಸ ಮಾಡಬೇಕೆಂದು ಒತ್ತಾಯಮಾಡಿ, ಮಾಡ ದಿದ್ದರೆ ನಿನ್ನನ್ನೂ ಇಲ್ಲಿಂದ ಎಬ್ಬಿಸಿ ಬಿಡುತ್ತೇನೆಂದು ಹೆದರಿಸಿದ್ದಾರೆ. ಅವನು ಹೆದರಿಕೊಂಡು ಹೊಟೇಲು ಬಿಟ್ಟು ಓಡಿ ಬಂದಿದ್ದಾನೆ. ವಿವರ ಗಳೆಲ್ಲ ಚಿ! ನರಸಿಂಹಯ್ಯನ ಮೂಲಕ ಹೇಳಿಕಳುಹಿಸಿದ್ದೇನೆ. ಆತನು ತಮ್ಮ ಬಂಧುವೆಂದು ಗೊತ್ತಾಯಿತಾಗಿ ಎಲ್ಲವೂ ಹಾಗೆ ಹಾಗೇಇದೆ. ತಮಗೆ ಸಾಧ್ಯವಾದರೆ ಆತನನ್ನು ಅಂಕೆಯಲ್ಲಿರಿಸಿಕೊಳ್ಳಿ. . ಇಲ್ಲದಿದ್ದರೆ ಆಮೇಲೆಯಾದರೂ ನಮ್ಮ ತಮ್ಮ ಸ್ನೇಹವನ್ನು ಉಪಯೋಗಿಸಲು ಯತ್ನಿಸಬೇಡಿ.”
ಪಟೇಲನು ಸೋಫಾದಲ್ಲಿ ಅಡಗಿಕೊಂಡನು. ಹದ್ದನ್ನು ಕಂಡ ಕೋಳಿ ಪಿಳ್ಳೆಯಂತಾದನು. “ಏನಯ್ಯಾ ಮಾಡಿದೆ ? ಮನೆಗೆ ಹೆಸರು ತರೋನೇನಯ್ಯಾ ನೀನು ? ನೀನು ಇಂಥ ಪಟಂಗ ಅಂತೆ ತಿಳಿದಿದ್ದರೆ, ನಿನ್ನ ಗುಂಡು ಹಾಕಿ ಸುಟ್ಟು ಬುಡುತಿದ್ದೆ. ನಮ್ಮನ್ನ ತಿದ್ದೊಕೆ ಬಂದ ತಿಮ್ಮಪ್ಪ ಇವನು; ಕೋಮನೆಲ್ಲ ಉದ್ದಾರ ಮಾಡೋನು ನೀನೇಕೆ ಕೋಡದಂಗಾದೆ ಇಕೋ ನಾಳೆ ಸಂಜೆ ಒಳಗಾಗಿ ನಮಗೆ ರಾಸ್ತೀ ಪತ್ರ ಬರಬೇಕು. ಆ ಹೋಟಲ್ ನೋನ್ಗೆ ಏನೇನು ನಷ್ಟಾ ಅಗಿದೆ. ಅದೆಲ್ಲ ಭರ್ತಿಮಾಡಿ ಕೊಟ್ಟು ತಪ್ಪಾಯಿತು ಹೇಳಬರಬೇಕು. `ತಿಳೀತಾ
*
“ಮೇಷ್ಟ್ರೆ !”
“ಸಾರ್ ” ನರಸಿಂಹಯ್ಯ ಬಂದನು. ಆತನನ್ನು ಕಂಡು ಗೌಡನು ಅರ್ಧವಾಗಿ ಹೋದನು
“ಇಕೋ ಇನರ್ನೇ ಕರಕೊಂಡುಹೋಗಿ ಎಲ್ಲಾ ಸೆಟಲ್ ಮಾಡಿಸಿ.” ತಾತಯ್ಯನೋರ ಪಾದಕ್ಕೆ ಬಿದ್ದು, – ತಪ್ಪಾಯ್ತು ಅಂದು ಅವರಿಂದ ಕಾಗದ ತರಬೇಕು. ಇಲ್ಲದಿದ್ದರೆ, ಮಜ್ಜಿಗೆಹಳ್ಳೀಲಿ, ನಿಂಗೆ ನಿಲ್ಲೋಕೆ ಅಂಗೈಯಗಲ ತಾವು ಇಲ್ಲದಂತೆ ಮಾಡಬೇಕಾದೀತು. ”
ಆ ಗರ್ಜನೆಗೆ ಗೌಡನು ನಡುಗಿ ಹೋದನು: “ಅಪ್ಪಣೆ, ಬುದ್ಧಿ” ಎಂದು ಎದ್ದು ನಿಂತು ಕೈಮುಗಿದನು.
“ಯಾವಾಗ ಹೊರಡುತೀ ?” “ಇವೊತ್ತು ಸಂಜೇಗೆ.”
“ಊಟ ಮಾಡಿಕೊಂಡು ಹೊರಡು. ಸಾರೋಟನಲ್ಲೇ ಹೋಗಿ ಬಾ.”
” ಅಪ್ರಣೆ.”
ಗೌಡನು ಎದ್ದು ಹೋಗುತ್ತ ಏನೋ ಪಕ್ಕಕ್ಕೆ ತಿರುಗಿದನು. ಅಲ್ಲಿ ಮಲ್ಲಿಯು ನಿಂತಿದ್ದಾಳೆ. ಅವಳ ಕಣ್ಣು ಕೆಂಪಗೆ ಅವನನ್ನು ಸುಡುವಂತಿದೆ. ಆ ಕಣ್ಣಿನ ನೋಟದ ಹಿಂದಿರುವ ಬಿಸಿ ಅವನನ್ನು ಮುಟ್ಟಿದಂತೆ, ಅವನಿಗೆ ಚುರ್ ಎನ್ನಿಸಿತು. ಅಭಿಮಾನದಿಂದ ಕಣ್ಣಲ್ಲಿ ನೀರೂರಿತು. ಆ ನೀರು, ಆ ಹನಿ, ಕೆಳಗುರುಳುವಷ್ಟರಲ್ಲಿ ಅವನು ಸರ್ರನೆ ಬಾಗಿಲು ದಾಟಿ ಹೊರಟುಹೋದನು.
*****