ನುಡಿಯೊಳಗಣಾ ನಿನ್ನ ನುಡಿಯಲಿ
ಕನ್ನಡತನವು ನಲಿವಾಗಿರಲಿ ಸದಾ
ನಡೆಯೊಳಗಣಾ ನಿನ್ನ ನಡೆಯಲಿ
ಕನ್ನಡತನವು ಹಸಿರುಸಿರಾಗಿರಲಿ ಸದಾ
ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ
ಜನುಮಕೂ ನಿನ್ನ ಕೀರ್ತಿ ಬೆಳಗಲಿ ಹಣತೆಯಾಗಿ ಸದಾ
ದುರಭಿಮಾನದ ಕೊಳೆಯ ತೊಳೆದೊಗೆದು
ಮಾನಭಿಮಾನದ ಮಾನ್ಯತೆ ನೆಲೆಯಾಗಿರಲಿ ಸದಾ
ಜನ್ಮಭೂಮಿಯ ಕಣಕಣ ಕರುಳ ಬಳ್ಳಿ
ಧಮನಿ ಧಮನಿಯಲ್ಲೂ ಸ್ಥಿರತೆ ಕಾಣಗೈಯಲಿ ಸದಾ
ಬಂಧನಗಳ ಕಡು ಹಿಂಸೆ ಕಡಿವಾಣದ
ಸಲಾಕೆಗಳ ಬಿಚ್ಚೊಗೆದೊಗೆದು ಸದಾ
ನೋವು ನಲಿವ ನುಂಗಿತಾ ಬೇಸತ್ತ ಬಾಳಿಗೆ
ಹಸನಾಗಿ ಸುಧೆಯಾಗಿರಬೇಕು ನೀ ಸದಾ
ಧರ್ಮ ಕರ್ಮ ಎಂಬ ಕೈ ಗನ್ನಡಿ ಹಿಡಿದು ಭಾವನೆಗಳ
ಮುಷ್ಠಿಯಲಿ ಪುಷ್ಠಿಯಾಗಿರಬೇಕು ಬಾಳಿಗೆ ಸದಾ
ಕನ್ನಡತಾಯ ಮಡಿಲ ಮಣಿ ಮುತ್ತಾಗಿ
ನವಿರಾಗಿ ನಲಿಯುತ್ತಿರ ಬೇಕು ಕನ್ನಡ ಕಣ್ಮಣಿಯಾಗಿ ಸದಾ
*****