ಭಸ್ಮ ಸ್ನಾನವ ಮಾಡಿದೆ

ಎಂಥಾ ಸುಂದರ ಭಸ್ಮಾ ಥಳಥಳ ಥಳಥಳ
ಭಸ್ಮಸ್ನಾನವ ಮಾಡಿದೆ
ಬೂದಿ ಭಸ್ಮವ ಬಿಟ್ಟೆ ಜ್ಯೋತಿ ಭಸ್ಮವ ಹಿಡಿದೆ
ಭಸ್ಮ ಸ್ನಾನವ ಮಾಡಿದೆ

ಬೆಳಕು ತುಂಬಿದ ಭಸ್ಮ ಥಳಕು ಚಿಮ್ಮಿದ ಭಸ್ಮ
ಜ್ಯೋತಿ ಸ್ನಾನವ ಮಾಡಿದೆ
ಚಿದ್ಲಿಂಗ ಶಿವಯೋಗಿ ಲಕಲಕ ಹೊಳಿದಂತ
ಜ್ಯೋತಿ ಸ್ನಾನವ ಮಾಡಿದೆ

ಅಂತರಂಗದ ಗಂಗಿ ಚಂದ ಸುಂದರ ತುಂಗಿ
ನಿಂಗಿ ಸಂಗಿಯ ದಾಟಿದೆ
ಎಂಥಾ ಮಾಯಾ ಮಾಟ ಥಪಥಪ್ಪ ಥಪ್ಪಟ್ಟ
ಲಟ್ಟಣಗಿ ಪೆಟ್ಟು ಮೀರಿದೆ

ಸೂರ್‍ಯ ಸ್ನಾನವ ಗೈದೆ ಚಂದ್ರ ಸ್ನಾನವ ಗೈದೆ
ರುದ್ರ ಸ್ನಾನವ ಮಾಡಿದೆ
ರುದ್ರ ಲೋಕದ ತಂದಿ ಛಿದ್ರ ಲೋಕವ ಸುಟ್ಟ
ಜ್ಞಾನ ಸ್ನಾನವ ಮಾಡಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತೆಗಾರ್ತಿ ಶ್ಯಾಮಲಾ
Next post ನಾಗರಪಂಚಮಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…