ಮಲ್ಲಿ – ೧೧

ಮಲ್ಲಿ – ೧೧

ಬರೆದವರು: Thomas Hardy / Tess of the d’Urbervilles

ರಾಜಕುಮಾರನು ನಾಯಕನು ಬರುವನೆಂದು ಕೇಳಿ ಬಹು ಸಂಭ್ರಮಪಟ್ಟು ಬಂದನು. ರಾಜಕುಮಾರಿಯೂ ಬಂದು ಜೊತೆಗೆ ಸೇರಿದಳು. ರೆಸಿಡೆಂಟ್ರು, ಮಹಾರಾಜರು ಅಲ್ಲಿಯೇ ಇದ್ದರು. ಮಹಾ ರಾಜರನ್ನು ಕಂಡರೆ ನಾಯಕನಿಗೆ ಬಹು ಭಕ್ತಿ. ಅವರ ಕಾಲು ಮುಟ್ಟಿ ನಮಸ್ಕಾರ ಮಾಡಬೇಕೆಂದು ಅವನಿಗೆ ಆಸೆ. ಆದರೆ ಅವರೇ ಡೆಪ್ಯುಟಿ ಕಮೀಷನರೊಡನೆ ಹೇಳಿಕಳುಹಿಸಿದ್ದರು ಅದೆಲ್ಲಾ ಈ ಕ್ಯಾಂಪಿನಲ್ಲಿ ಕೂಡದು ಎಂದು. ಅದರಿಂದ ತನ್ನ ಭಕ್ತಿಯನ್ನು ಏನಿದ್ದರೂ ಮನಸ್ಸಿ ನಿಂದಲೇ ಸಮರ್ಪಿಸಬೇಕಾಗಿತ್ತು. ನಾಯಕನ ಕಣ್ಣಲ್ಲಿ ಮಹಾರಾಜರು ದೇವರು. ರಾಜಕುಮಾರ ಮಹಾರಾಣಿಯ ಮೊಮ್ಮಗ, ಚಕ್ರವರ್ತಿಗಳ ಮಗ ಆದರೂ ಮಹಾರಾಜರಷ್ಟು ದೊಡವನಲ್ಲ. ಆದರೂ ಆಸ್ಥಾನದ ಮರ್ಯಾದೆ ಮೀರಲಾರದೆ ಆತನಿಗೆ ಗೌರವ ತೋರಿಸುತ್ತಿದ್ದರೂ, ಆವನು ಕೈಮುಗಿದುದು ಮೊದಲು ಮಹಾರಾಜರಿಗೆ: ಆಮೇಲೆ ರಾಜಕುಮಾರ ರಿಗೆ. ಆ ಮರ್ಯಾದಾಲೋಪವನ್ನು ಗಣಿಸುವಷ್ಟು ನಿರಭಿಮಾನ ಅವೊತ್ತು ಯಾರಿಗೂ ಇರಲಿಲ್ಲ.

ರಾಜಕುಮಾರನು ತಾನೇ ಎದ್ದು ಬಂದು ನಾಯಕನು ಮುಗಿದಿದ್ದ ಕೈಗಳನ್ನು ಹಿಡಿದು ಕೊಂಡನು ಕೈ ಬಿಡಿಸಿ, ಕೈಹಿಡಿದು ಕುಲಕಿದನು. ಆತನಿಗೆ ಆಶ್ಚರ್ಯವಾಯಿತು. “ಇದೇನು ಹೀಗೂ ಉಂಟೆ” ಎಂಬ ಭಾವದಿಂದ ಮಹಾರಾಜರ ಮುಖವನ್ನು ನೋಡಿದನು. ಅವರು, ಎದ್ದು ಬಂದು ಆ ಕೈಹಿಡಿದು ನೋಡಿ ತಮ್ಮ ಸಂತೋಷವನ್ನು ಪ್ರಕಟನಾಗಿ ಸೂಚಿಸುತ್ತ, “ರಾಜಕುಮಾರ, ನಾವು ಕೇಳಿದ್ದೇವೆ: ಬೇಕೆಂದಾಗ ಮೈ ಕಲ್ಲಿನಂತಾಗುವುದು ಎಂದು. ಆದರೆ ಯಾವಾಗಲೂ ಕಗ್ಗಲ್ಲಿನಂತಿರುವ ಮೈ ನಾವು ನೋಡಿರಲಿಲ್ಲ. ನಮ್ಮ ಪೂರ್ವಿಕರು ಕಂಠೀರವ ನರಸರಾಜರೆಂಬುವರು, ಸುಮಾರು ನೂರೈವತ್ತು ವರುಷಗಳ ಕೆಳಗೆ ಇದ್ದರು. ಅವರು ಮರದ ಮಂಚದ ಮೇಲೆ ಮಲಗಿದರೆ ಅದು ಮುರಿದು ಹೋಗುತ್ತಿತ್ತಂತೆ. ಅದಕ್ಕಾಗಿ ಕಲ್ಲಿನ ಮಂಚದ ಮೇಲೆ ಮಲಗುತ್ತಿದ್ದರಂತೆ ಎಂದರು.

ರಾಜಕುಮಾರನು ಹೇಳಿದನು “ಈತನು ಆಶ್ಚರ್ಯಪುರುಷ ಇಂದಿನ ಬೆಳ್ಳಿಗೆ ಈತನು ಮಾಡಿದ ಸಿಂಹನಾದ ಇನ್ನೂ ನಮ್ಮ ಕಿವಿಯಲ್ಲಿ ಮೊರೆಯುತ್ತಿದೆ. ನಾವು ಉತ್ತರ ಸಮುದ್ರದಲ್ಲಿ ತಿಮಿಂಗಿಲ ಗಳನ್ನು ಹೊಡೆಯುವಾಗ ಭಲ್ಲೆಯ ಉಪಯೋಗಿಸುವುದು ನೋಡಿದ್ದೇವೆ. ಅವರೂ ಈತನಷ್ಟು ಶಕ್ತರಲ್ಲ. ಈತನೇನಾದರೂ ತಿಮಿಂಗಿಲಗಳನ್ನು ಭಲ್ಲೆಯದಿಂದ ಹೊಡೆದರೆ ಅವೂ ಅಲ್ಲೇ ಸಾಯುವುವೋ ಏನೋ? ನಾವು “ಮೆಡೋಸ್ ಟೀಯಲರ್’ ಬರೆದಿರುವ ಟಪ್ಫೂಸುಲ್ತಾನ್ ಎಂಬ ಗ್ರಂಥದಲ್ಲಿ ಆ ಸುಲ್ತಾನನು ಆನೆಯ ಮರಿಯನ್ನು ಒಂದೇ ಏಟಗೆ ಕತ್ತರಿಸುತ್ತಿದ್ದನು ಎಂದು ಓದಿ, ಬರಿಯ ಮಾತು ಎಂದು ಕೊಂಡಿದ್ದೆವು – ಇಂದು ಈತನ ಅದ್ಭುತಕಾರ್ಯವನ್ನು ನೋಡಿ ಅದನ್ನೂ ನಂಬಬೇಕಾ ಯಿತು. ಮಹಾರಾಜರು ದಯಮಾಡಿ ಈತನನ್ನು ನಮ್ಮ ಜೊತೆಯಲ್ಲಿ ಕಳುಹಿಸಿದರೆ. ನಾವು ಲಂಡನ್ನಿನಲ್ಲಿರುವ ನಮ್ಮ ಸ್ನೇಹಿತರಿಗೆ ಈತನ ಪರಿಚಯಮಾಡಿ ಕೊಡುವೆವು. ನಮ್ಮ ತಂದೆಯವರಂತೂ ಇಂಥವರನ್ನು ನೋಡಿದರೆ ಬಹಳ ಸಂತೋಷ ಪಡುವರು.” ಮಹಾರಾಜರೇ ಸ್ವಯಂ ನಾಯಕನಿಗೆ ರಾಜಕುಮಾರನ ಅಭಿ ಪ್ರಾಯವನ್ನು ತಿಳಿಸಿದರು. ನಾಯಕನಿಗೆ ಅಲ್ಲಿಗೆ ಹೋದರೆ ತನ್ನ ಜಾತಿಯು ಕೆಡುವುದೆಂದು ಅದು ಸಮ್ಮತವಾಗಲಿಲ್ಲ. ಆ ಅಭಿಪ್ರಾಯ ವನ್ನು ತಿಳಿದು, ರಾಜಕುಮಾರನು ನಕ್ಕು ಹೇಳಿದನು: “ನಮ್ಮ ಮ್ಯಾಕ್ಸ್ ಮುಲ್ಲರ್ ಅವರು ಇಂಡಿಯಾದಲ್ಲಿ ಇರುವವರೆಲ್ಲಾ ವೇದಾಂತಿ ಗಳು ಎನ್ನುತ್ತಾರೆ. ಅವರು ಇಂಥನರನ್ನು ಕಂಡರೆ, ಇಂಡಿಯ ನರೆಲ್ಲಾ ಸ್ಯಾಂಡೋಗಳು ಎನ್ನುತ್ತಿದ್ದರು. ಹೀಗೆ ಬುದ್ದಿಶಕ್ತಿ, ದೇಹಶಕ್ತಿ, ಎರಡರಲ್ಲೂ ಅದ್ಭುತ ವಿಜಯ ಸಂಪಾದಿಸಿರುವ ಇಂಡಿಯ ನಮ್ಮ ಚಕ್ರಾಧಿಪತ್ಯದಲ್ಲಿರುವುದು ನಮ್ಮ ಅದೃಷ್ಟ ! ಕಾಶಿಯಲ್ಲಿ ಒಬ್ಬ ಬ್ರಾಹ್ಮಣ ವಿದ್ದಾಂಸರನ್ನು ಭೇಟ ಮಾಡಿಸಿದರು. ಅಕ್ಷರಾಭ್ಯಾಸದಿಂದ ಕಲಿಕ ಸರ್ವವೂ ಅವರಿಗೆ ನೆನೆಪಿರುವುದಂತೆ ! ಅದೆಲ್ಲಾ ಈಚೀಚಿಗೆ ಪ್ರಿಂಟಾಗಿದೆಯಂತೆ ! ಎಲ್ಲವೂ ಸೇರಿ ಸುಮಾರು ಹತ್ತು ಸಾವಿರ – ಮಹಾರಾಜರೆ – ಹತ್ತು ಸಾವಿರ ಪುಟ ಆಗುವುದಂತೆ ! ನಾವು ಮಕಾ ಲೆಯವರ ಸ್ಮರಣ ಶಕ್ತಿಯನ್ನು ಕಂಡು ಅಶ್ವರ್ಯಪಡುತ್ತೇವೆ. ಆ ವಿದ್ವಾಂಸರ ಸ್ಮರಣಶಕ್ತಿ ಹೇಗಿರಬೇಕು. ಅಂತೂ ಇಂಡಿಯ ಪ್ರಂಚಕ್ಕೆ ತಿಳಿಯದ ಇನ್ನೂ ಏನೇನು ಅದ್ಭುತಗಳನ್ನು ಪಡೆದಿರುವುದೋ ಯಾರು ಬಲ್ಲರು? ”

ಮಹಾರಾಜರು ನಗುತ್ತಾ ಹೇಳಿದರು: “ತಮಗೆ ಆ ತರುಣ ಸನ್ಯಾಸಿ ವಿವೇಕಾನಂದರ ವಿಚಾರ ಗೊತ್ತೇ ಇರಬೇಕು. ಅವರ ಗುರುಗಳು ನಿರಕ್ಷರಕುಕ್ಷಿಗಳು. ಜಗತ್ತಿನ ಪ್ರಸಿದ್ಧ ವಿದ್ವಾಂಸರೆಲ್ಲರೂ ಆತನ ಪಾಂಡಿತ್ಯ ಪ್ರತಿಭೆಗೆ ಮುಗ್ಧರಾಗಿ ಹೋದರು.”

” ಹೌದು, ಹೌದು ತಮ್ಮ ಪೂಜ್ಯ ತಂದೆಯವರು ಅವರಿಗೆ ಸಹಾಯ ಮಾಡಿದರಂತೆ. ತಾವೂ ಹಾಗೆಯೇ ಅದ್ಭುತವಾದ ಪಾಂಡಿತ್ಯ ವುಳ್ಳರನ್ನು ಪ್ರೋತ್ಸಾಹ ಕೊಟ್ಟು ಮುಂದಕ್ಕೆ ತರಬೇಕು. ಮರೆತಿದ್ದೆ. ನಾಯಕರ ಆಶ್ರಯದಲ್ಲಿರುವ ಆ ಹುಡುಗಿ ಅವಳಿಗೆ ಅದ್ಭುತವಾದ ದೇವರ ವರವಿದೆ ಆ ಮಗುವಿಗೆ ಸಾಹಿತ್ಯ ಸಂಗೀತಗಳಲ್ಲಿ ತಕ್ಕ ಶಿಕ್ಷಣ ಕೊಡಿಸಿ ಬೆಳೆಸಿ. ತಮಗೆ ಸಾಧ್ಯವಾಗದಿದ್ದರೆ ಬಿಷಪ್ಪರು ಬಂದಿದ್ದಾರೆ. ಅವರ ಕಾನ್ವೆಂಟಿಗೆ ಕಳುಹಿಸಿಕೊಡಿ. ಅಕೆಗೆ ಯೋಗ್ಯತೆಯಿದೆ, ವಿಶೇಷ ತರಬೇತು ಬೇಕು.”

ಆಗಬಹುದು. ಆ ಮಗುವಿಗೆ ವಿದ್ಯಾರ್ಥಿವೇತನವನ್ನು ಕೊಟ್ಟು ಅವಳು ವಿದ್ಯಾವತಿಯಾಗುವಂತೆ ನೋಡಿಕೊಳ್ಳುತ್ತೇವೆ.”

“ನಮಗೆ ರಾಜಕೀಯದಲ್ಲಿ ಕೈಹಾಕುವುದು ಸಮ್ಮತವಿಲ್ಲ. ಆದರೂ ಮಾತು ಬಂತೆಂದು ಹೇಳುತ್ತೇವೆ. ತಾವು ಸಾಧ್ಯವಾದರೆ ಮಾಡಬಹುದು. ಇಲ್ಲವಾದರೆ ಇಲ್ಲ. ತಮ್ಮ ಪ್ರೋತ್ಸಾಹವು ಕ್ರಿಶ್ಚಿ ಯನ್ರಿಗೂ ಲಭಿಸಲಿ. ಅವರು ಸಣ್ಣ ಕೋಮಿನವರು ; ಅವರಿಗೆ ತಪ್ಪ ಪ್ರೋತ್ಸಾಹದ ಅವಶ್ಯಕತೆಯು ಬೇಕಾದಪ್ಟಿದೆ.”

” ಆಗಬಹುದು. ಆ ವಿಷಯವನ್ನು ನೆನೆಸಿನಲ್ಲಿಟ್ಟುಕೊಂಡು ನಡೆಯುತ್ತೇವೆ.”

” ನಾಯಕರು ನಾಳೆಯ ದಿನ ನಮ್ಮ ಜೊತೆಯಲ್ಲಿ ಬರುವರು ತಾನೇ?” ಮಹಾರಾಜರು ಆ ಮಾತನ್ನು ನಾಯಕರಿಗೆ ಹೇಳಿದರು. ನಾಯಕನು, “ಮಹಾಪಾದದ ಅಪ್ಪಣೆ ಆದ ಹಂಗೆ ನಡೆಯುವನನು ಬುದಿ ” ಎಂದು ಕೆ ಕೈಮುಗಿದನು.

ರಾಜಕುಮಾರನು ಆ ವಿನಯನನ್ನು ನೋಡಿ ಬಹು ಸಂತೋಷ ಪಟ್ಟು ಹೇಳಿದನು, “ಮಹಾರಾಜಕ್ಕೆ ತಾವು ಬಹಳ ಅದಷ್ಟಶಾಲಿಗಳು. ತನ್ನು ಪ್ರಜೆಗಳ ರಾಜಭಕ್ತಿ ವಿಶ್ವಾಸಗಳೆನ್ನು ನೋಡಿ, ನಮಗೆ ನಮ್ಮ ಬ್ರಿಟಿಷರ ನೆನೆಪಾಗುತ್ತದೆ. ಮಿಕ್ಕಕಡೆಗಳಲ್ಲೂ ನಾವು ರಾಜಭಕ್ಲಿ ಯನ್ನು ಕಂಡಿದ್ದೇವೆ. ಆದರೆ ಮೈಸೂರಿನ ಪ್ರಜೆಗಳ ರಾಜಭಕ್ತಿ ವಿಶ್ವಾಸಗಳು ಅಕೃತ್ರಿಮವಾದವು. ಇವು ಹೀಗೆಯೇ ಬಹಳ ಕಾಲವಿರ ಲೆಂದು ಪರಮೇಶ್ವರನಲ್ಲಿ ಹರಕೆ ಹೊರುತ್ತೇವೆ. ನಾಯಕರಿಗೆ ಹೇಳಿ, ಈದಿನ ನಮ್ಮ ಎದುರಿನಲ್ಲಿ ನಡೆದ ಸಾಹಸ ನಾವೆಲ್ಲಿಯೂ ನೋಡಿರಲಿಲ್ಲ. ನಮ್ಮ ಪ್ರಖ್ಯಾತರಾದ ಬೇಟೆಗಾರರು ಮತ್ತೊಮ್ಮೆ ಅವರ ಪ್ರತಾಪ ನೋಡಬೇಕು ಎನ್ನುತ್ತಾರೆ. ನಾವೂ ಇನ್ನೆರಡು ದಿನ ಹೆಚ್ಚಾಗಿ ನಿಲ್ಲಬೇಕೆಂದುಕೊಂಡು, ಇಡಿ ವೈಸ್ರಾಯರಿಗೆ ಬರೆದಿದ್ದೇವೆ. ನಾವು ಇರುವವರೆಗೂ ಇವರೂ ಇಲ್ಲಿಯೇ ಇರಬೇಕು. ಆ ಶಿಶು ನೇದಾಂತಿಯ ಹಾಡುಗಳನ್ನೂ ಕೇಳಿಸಬೇಕು ಎಂದು ಹೇಳಿ.”

ಆ ಮಾತುಗಳನ್ನು ಕೇಳಿ ಮಹಾರಾಜರಿಗೂ ಆನಂದವಾಯಿತು. ಹಾಗೆ ಆನಂದದಿಂದ ಹರಿವಾಣದಗಲವಾಗಿದ್ದ ಮುಖವನ್ನು ನೋಡಿ ನಾಯಕನಿಗೂ ಸಂತೋಷವಾಯಿತು.

ಆ ವೇಳೆಗೆ ಸಂಧ್ಯಾ ಸೂಚಕವಾದ ತುತ್ತೂರಿಗಳು ಕೇಳಿಸಿದುವು. ರಾಜಕುಮಾರನೆದ್ದು ಬಂದು ನಾಯಕನ ಕೈಹಿಡಿದುಕೊಂಡನು- ಮತ್ತೆ ಆಶ್ಚರ್ಯವಾಯಿತು: “ಮಹಾರಾಜರ, ಇದೇನು? ನಾಯಕರ ಕೈ ಮುಟ್ಟಿನೋಡಿ. ಆಗ ರಾಯಲ್ ಓಕ್ ಮರದ ತುಂಡಿನಂತೆ, ಉಕ್ಕಿನ ತುಂಡಿನಂತೆ ಇದ್ದ ಕೈ ಈಗ ರೇಶಿಮೆಯ ಮೆತ್ತೆಯಾಗಿದೆ.? ಎಂದು ನಾಯಕನ ಕೈಯನ್ನು ಹಿಡಿದು ಮಹಾರಾಜರ ಕೈಯಲ್ಲಿಟ್ಟನು.

ಅವರು “ಇದೇ ಸರಿಯಾದ ಸ್ಥಿತಿ” ಎಂದು ಪಕ್ಕದಲ್ಲಿದ್ದ ಪ್ರಿನ್ಸ್ ಗೋಪಾಲರಾಜೇ ಅರಸಿನನರನ್ನು ನೋಡಿದರು. ಅವರು ಕೂಡಲೇ ಬಂದು ಕೈನೀಡಿದರು. ರಾಜಕುಮಾರನು ಅವರ ಕೈತೋಳುಗಳನ್ನು ಮುಟ್ಟಿ ನೋಡಿದನು. ಮೆತ್ತಗೆ ಮೃದುವಾಗಿದ್ದ ಮಾಂಸಖಂಡಗಳನ್ನು ನೋಡಿ, “ಹೆಂಗಸಿನ ಮೈಗಿಂತ ಮೃದುವಾಗಿದೆ” ಎಂದನು

” ಪರೀಕ್ಷೆಯಾಗಬೇಕು ” ಎಂದು ಹೇಳಿ ಮಹಾರಾಜರು ರಾಜಕುಮಾರನ ಜೊತೆಯಲ್ಲಿ ಬಂದಿದ್ದ ಬಾಕ್ಸರ್ನನ್ನು ಕರೆದು “ಇವರ ಕೈಹಿಡಿದುಕೊ ” ಎಂದರು.

ಬಾಕ್ಸರ್ನು ರಾಜಕುಮಾರನ ಸೂಚನೆಯಂತೆ ಮುಂದೆ ಬಂದು ಅರಸಿನವರ ಕೈಹಿಡಿದನು. ಅರಸಿನವರು ಒಂದು ಸಲ ಒದರಿದರು. ಬಾಕ್ಸ್ರ್ನ ಹಿಡಿತವು ಹಾರಿ ಹೋಯಿತು. ಅರಸಿನವರು ಬಾಕ್ಸರ್ನ ಕೈಹಿಡಿದರು. ಅವನು ಬಿಡಿಸಿಕೊಳ್ಳ ಬೇಕೆಂದು ಒದರಿದನು; ಎಳೆದನು: ತಿವಿದನು. ಆಗಲಿಲ್ಲ. ಮುಖ ಕೆಂಪಾಯಿತು. ರೇಗಿತು. ಔಡು ಕಚ್ಚಿ, ಮುಷ್ಟಿ ಹಿಡಿದು ನೆಲಕ್ಕೆ ಬಗ್ಗಿ ಥಟ್ಟನೆ ಮೇಲಕ್ಕೆದ್ದನು. ಅರಸಿನನರ ದೇಹವೆಲ್ಲ ಮೇಲಕ್ಕೆದ್ದಿತು.ಹಿಡಿತ ತಪ್ಪಲ್ಲಿಲ್ಲ. ರಾಜಕುಮಾರನು ಮುಂದೆ ಬಂದು ಅರಸಿನವರ ಭುಜ ತಟ್ಟಿದನು. ದೇಹವು ವಜ್ರಪ್ರತಿಮೆಯಾಗಿದ್ದುದು. ನೋಡಿ ಆಶ್ಚರ್ಯ ಚಕಿತನಾಗಿ “ಎಲಾ, ನೀವು ಇಂಡಿಯನ್ರು ಒಬ್ಬೊಬ್ಬರೂ ಆಶ್ಚರ್ಯ ಪುರುಷರು. ಇನ್ನು ಬಿಡಿ” ಎಂದನು. ಅರಸಿನವರು ಬಿಟ್ಟರು. “ಬಾಕ್ಸರ್ನ ಕೈ ಚಪ್ಪಟೆಯಾಗಿ ಹೋಗಿತ್ತು.

ಎಲ್ಲರನ್ನೂ ಬೀಳ್ಕೊಟ್ಟು ರಾಜಕುಮಾರನು ಒಳಕ್ಕೆ ಹೋಗುತ್ತ “ರೆಸಿಡೆಂಟ್, ಇವರು ಇಷ್ಟು ಅದ್ಭುತ ಶಕ್ತಿಯನ್ನು ಹೇಗೆ ಸಂಪಾದಿಸು ತ್ತಾರೆ?” ಎಂದು ಕೇಳಿದನು.

“ಇವರಲ್ಲಿ ಗರಡಿಗಳಿವೆ: ಆ ಗರಡಿಗಳಲ್ಲಿ ಸಾಮುಮಾಡಿ ಇವರು ವಜ್ರಶರೀರಿಗಳಾಗುತ್ತಾರೆ, ರಾಜಕುಮಾರ.”

“ಮತ್ತೆ ಇವರನ್ನು ಹೇಗೆ ಆಳುತ್ತೀರಿ? ” “ಇವರು ನ್ಯಾಯಪರರು. ನಾವು ನ್ಯಾಯವಾಗಿದ್ದೇವೆಂದು ಅವರು ಬಗ್ಗಿದ್ದಾರೆ.”

“ಆದರೂ ಇಷ್ಟು ಶಕ್ತಿ ! ಅಬ್ಬಾ !”

“ಹೌದು. . ನನಗೆ ಅರ್ಥವಾಯಿತು. ಅದಕ್ಕೇನಾದರೂ ಮಾಡೋಣ.”

ರೆಸಿಡೆಂಟನು ರಾಜಕುಮಾರ ದಂಪತಿಗಳನ್ನು ಒಳಕ್ಕೆ ಬಿಟು ಬರುವವರೆಗೂ ಎಲ್ಲರೂ ಅಲ್ಲಿಯೇ ಇದ್ದರು. ಅವನು ಬಂದ ಮೇಲೆ ಮಹಾರಾಜರೂ ಸಪರಿವಾರರಾಗಿ ಹೊರಟರು.

ನಾಯಕನು ಎಲ್ಲರನ್ನೂ ಬೀಳ್ಳೂಂಡು ಹಿಂತಿರುಗಿದನು. ಅವನಿಗೆ ತನ್ನ ಮೈಯಲ್ಲಿದ್ದ ಬಿಗುವೂ ಮನಸ್ಸಿನಲ್ಲಿದ್ದ ರಾಕ್ಷಸಾವೇಶವೂ ಕಳೆದು ಹೋಗಿರುವುದು ಕಂಡು ಆಶ್ಚರ್ಯವಾಯಿತು. “ಇದೇನು? ಮಹಾರಾಜರಂಥವರ ದಿವ್ಯ ಸನ್ನಿಧಾನದ ಫಲವೋ? ” ಎನ್ನಿಸಿತು.

ಆದರೆ ನಾಯಕನು ತನಗಾಗಿರುವ ವ್ಯತ್ಯಾಸವನ್ನು. ಅರಿಯ ಬಲ್ಲವನಾಗಿದ್ದನೇ ಹೊರತು, ಅದು ಏತಕ್ಕೆ ಆಗಿದೆಯೆಂಬುದನ್ನು ಹೇಳಲು ಸಮರ್ಥನಾಗಿರಲಿಲ್ಲ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಪಾ ಸಾಗರ
Next post ಗದ್ಯ (ಯೆಲಾ ಯೆಲಾ ವಂದೊಂದ)

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…