ಕೇಳಲಾರೆಯೂ ಹರಿ ನನ್ನ ಆಲಾಪ
ನಿನಗಾಗಿ ನಾನು ಪರಿತಪಿಸಿರುವೆ
ನನ್ನ ಬಾಳಿನಾಂಗಳದಲಿ ನಿನ್ನ ರೂಪ
ಕಂಡು ನಾನು ಮೋಹಿಸಬೇಕೆಂದಿರುವೆ
ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ
ತುಂಬಲಿ ಎನ್ನ ಎದೆಯ ಬಾನಲಿ
ಮನದ ಮೂಲೆಯಲ್ಲೂ ನಿನ್ನ ಪ್ರೀತಿ ಚೆಲ್ಲು
ನಾಶಗೊಳ್ಳಲಿ ವಿಷಯ ಸುಖ ಬೇಲಿ
ಎಷ್ಟು ಆರಾಧಿಸಿಲಿ ನಿನ್ನ ಸ್ನೇಹ
ಪ್ರಸನ್ನ ನಾಗೆಯೂ ನೀನೊಮ್ಮೆ ನನ್ನ
ತುಂಬಿ ತುಳುಕಲು ಬಾಳ ಬಸಿರಲಿ ನೇಹ
ಅಂಧಕಾರ ಕರಗಿ ಆಗಲಿ ಜೊನ್ನ
ನಿನ್ನ ತೇಜೊ ಥಳಕಿನ ವದನಾರವಿಂದ
ಕಂಡು ಪುಲಕಿತ ಗೊಂಡಿದೆ ನನ್ನ ದೇಹ
ಎತ್ತೆತ್ತ ನೋಡಲೆಲ್ಲಿ ನೀನೆ ಗೋವಿಂದ
ಎನ್ನ ಬಾಳಿನ ತುಂಬ ನಿನ್ನದೆ ಮೋಹ
ಭಾಗ್ಯದ ದಿನವೆಂದು ನನಗೆ ಬಂದಿತು
ಅನುಭವಿಸಬೇಕೆಂದಿರುವೆ ಆ ದಿವ್ಯಸಂಗ
ಅದಕ್ಕಾಗಿ ನನ್ನ ಮನ ನಿತ್ಯವೂ ಬೇಡಿತು
ಮಾಣಿಕ್ಯ ವಿಠಲ ಹರಿಸಾಗರದಿಂದ
*****