ಯೆಲಾ ಯೆಲಾ ವಂದೊಂದ ಕಾಲದಲ್ಲಿ ಹಂದಿ ಹುಲಿಯಾಗಿ
ಹೆಗ್ಲನ ಬಂದೀ ಶುಲದೋದವಯ್ಯಾ, ಯೆಂತುಂಡರು
ಯೆತುಂಡರೇನಬೇಡೀ ಕುಂತಿನಂದನರೂ ತರತಂದಿ
ಉಂಡಿದಾರೇ ಮಿಕ್ಕವರೂ ಹಾಗುಂಡರೂ ದಮ್ಮಯ್ಯಾ
ಜೋರು ಕಲ್ಲಿನಲ್ಲೀ ಶಾವಿರಾ ಮೊಲಗಳು
ಬಿದ್ದು ಹೊಯ್ದಾಡಿದರೆ ಆ ಕಲ್ಲ ನೀರು ಕೊಂಬುವರೇನು
ಹಚಿಕಲ್ಲು ಅಡುಗಾಗೀ ಬಿದಿಕಲ್ಲು ಮೇನಾಗೀ
ಗಚ್ಚಗಿಚ್ಚನೇ ಹಚಿಮೆಂಚು ಅರವವೆಲಿಲಿ
ಅಶನೋಡೆಂದ ಚರವೇಜನ (ಸರ್ವಜ್ಞ) || ೧ ||
ಚಲದಲಿ ಪಾಂಡವ್ರು ಮೇಲು ಈ ಕತಿಯಲ್, ಹನುಮಂತ ಮೇಲು
ಬಕ್ತಿಯಲ್ ರಾಮದೇವರೆ ಮೇಲೂ ಮೂರುಲೋಕ
ಕೊಂಡಾಡ್ವಲ್ಲೀ, ಕೃಷ್ಣಮೂರುತಿಯೇ ತಾನೆ ಮೇಲೂ
ಹೇಳಿದ್ನಯ್ಯಾ ತಂದನೋ ತಾನಾ || ೨ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.