ಗುರುಗಳಲ್ಲಿ ನಮಸ್ಕರಿಸಿ ಶಿಷ್ಯ ಹೇಳಿದ-
“ಮಳೆ ಸುರಿದಾಗ ಮೋಡಕ್ಕೆ ಮುಕ್ತಿ.
ಗರಿಗೆದರಿದಾಗ ಹಕ್ಕಿಗೆ ಮುಕ್ತಿ.
ಹೂವರಳಿದಾಗ ಮೊಗ್ಗಿಗೆ ಮುಕ್ತಿ.
ಗುಡಿಗಿನಲ್ಲಿ ಮಿಂಚಿಗೆ ಮುಕ್ತಿ.
ನನಗಿಲ್ಲವೇ ಮುಕ್ತಿ?”
– ಎಂದು ಕಣ್ಣು ಮುಚ್ಚಿ ನಿಂತು ಬೇಡಿದ.
“ಶಿಷ್ಯಾ! ಕಣ್ಣಿನ ರೆಪ್ಪೆಯ ತರೆ ತೆರದಾಗ, ಕಣ್ಣಿನ ಪೊರೆ ಕಳಿಚಿದಾಗ, ನಿನ್ನಲ್ಲೇ ಸಿಗುತ್ತದೆ ನಿನಗೆ ಮುಕ್ತಿ” ಎಂದಾಗ ಶಿಷ್ಯನ ಕಣ್ಣು ತೆರೆಯಿತು.
*****