೨೦೧೫ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಉತ್ತಮ ಕಾದಂಬರಿಗೆ ಈ ನಗದು ಸಾಹಿತ್ಯ ಪುರಸ್ಕಾರ ಲಭಿಸುವುದು.
ಈ ನಗದು ಪ್ರಶಸ್ತಿಯನ್ನು ಮೊತ್ತಮೊದಲ ಬಾರಿಗೆ ೧೯೬೯ರಿಂದಲೂ ಕೊಡಮಾಡುತ್ತಾ ಬಂದಿದೆಯೆಂದು ಲಂಡನ್‌ನಿಂದ ವರದಿಯಾಗಿರುವುದು.
ಭವ್ಯ ಭಾರತದ ಲೇಖಕಿ ಅನುರಾಧಾರಾಯ್ ಸೇರಿದಂತೆ ಒಟ್ಟು ೧೩ ಮಂದಿ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿಯಲ್ಲಿ ಈಗಾಗಲೇ ಸ್ಥಾನಮಾನ ಪಡೆದಿರುವರು! ಈ ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಸೇರ್‍ಪಡೆಗೊಳ್ಳುವುದೂ ಒಂದು ಹೆಮ್ಮೆಯ ಸಾಧನೆಯೆಂದೇ ಪರಿಗಣಿಸಲ್ಪಡುವರು.
ಅನುರಾಧಾ ರಾಯ್ ಅವರ- “ಸ್ಲೀ ಪಿಂಗ್ ಅನ್ ಜುಪಿಟರ್” ಕೃತಿ ಈ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿದ್ದಾರೆ!
ಈ ಪ್ರಶಸ್ತಿ ಪಟ್ಟಿಯಲ್ಲಿನ ೧೩ ಕೃತಿಗಳಲ್ಲಿ ಬ್ರಿಟನ್ ಲೇಖಕ ಟೊಮ್ ಮ್ಯಾಕ್‌ಕರ್‍ತಿ ಅವರ ‘ಸವೈ ಐಸ್ಲಾಂಡ್, ಆಂಡ್ರೂ ಒ ಹಗನ್ ಅವರ- ದಿ ಇಲ್ಯುಮಿನೇಷನ್, ಭಾರತ ಮೂಲದ ಲೇಖಕ ಸಂಜೀವ್‌ಸಹೊತ ಅವರ ‘ದಿ ಇಯರ್ ಆಫ್ ದಿ ರನ್ ವೇಸ್’ ಒಳಗೊಂಡಿವೆ.
ಐವರು ಸದಸ್ಯರನ್ನೊಳಗೊಂಡ ತೀರ್‍ಪುಗಾರರು ಈಗಾಗಲೇ ಒಟ್ಟು ೧೫೬ ಕೃತಿಗಳಲ್ಲಿ ೧೩ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದರಲ್ಲಿ ಆಯ್ದ ಆರು ಕೃತಿಗಳ ಅಂತಿಮ ಪಟ್ಟಿಯನ್ನು ೨೦೧೫ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸುವರು.
೨೦೧೫ರ ಅಕ್ಟೋಬರ್ ೧೩ರಂದು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮವಾಗಿ ಘೋಷಿಸುವರು.
ಇದು ೨೦೧೫ರ ಮ್ಯಾನ್‌ಬುಕರ್ ಪ್ರಶಸ್ತಿಯ ರೂಪರೇಷೆಯಾಗಿದ್ದು ಭವ್ಯ ಭಾರತದ ಅನುರಾಧಾ ರಾಯ್ ಅವರಿಗೆ ಈ ಸಾರಿಯ ಪ್ರಶಸ್ತಿಯು ಲಭಿಸಲೆಂದು ನಾವು ನೀವು ಶುಭ ಕೋರೋಣವಲ್ಲವೇ?
ನನ್ನ ಮುದ್ದು ಪುಟಾಣಿಗಳೆ… ನೀವೆಲ್ಲ ಇಂದಿನಿಂದಲೇ ಮನಸ್ಸು ಮಾಡಿ! ನಾನೂ ಇಂಗ್ಲೀಷ್ ಸಾಹಿತ್ಯ ಅಭ್ಯಾಸ ಮಾಡಿ ಇಂಗ್ಲೀಷ್‌ನಲ್ಲಿ ಸಾಧನೆ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತೇನೆಂಬ ಗುರಿ, ಹಠ, ಸಾಧನೆ ಹೊಂದುವಿರಲ್ಲವೇ?
*****