ಇದ್ದಕ್ಕಿದ್ದಂತೆ ನೈಸರ್‍ಗಿಕ ವಿಕೋಪಗಳಾಗಿ ಸಾವಿರಾರು ಜನ ಸತ್ತುಹೋದರು. ನೂರಾರು ಜನ ಭೂಕಂಪದಲ್ಲಿ ಮಡಿದರು, ಸಮುದ್ರ ಬಿರುಗಾಳಿಯಿಂದ ನೌಕೆಗಳು ಅಪ್ಪಳಿಸಿದವು! ಮುಂತಾದ ವರದಿಗಳನ್ನು ನೋಡುತ್ತೇವೆ. ಇದೆಲ್ಲ ಅನಿರಿಕ್ಷಿತ ಮತ್ತು ಇದ್ವಕ್ಕಿದ್ದಂತೆ ಆಕ್ರಮಿಸಿಕೊಂಡ ಆಘಾತವೆಂದು ಅಂದು ಕೊಳ್ಳುತ್ತವೆ. ಆದರೆ ಇಂಥಹ ಅಪಾಯಗಳನ್ನು ಮುಂಚಿತವಾಗಿಯೇ ಮನಗಂಡ ಅನೇಕ ಪಕ್ಷಿ ಪ್ರಾಣಿಗಳು ನಮಗೆ ಅನೇಕ ಸೂಚನೆಗಳನ್ನು ನೀಡುತ್ತವೆ. ನಾವು ಗಮನಿಸುವುದೇ ಇಲ್ಲ. ಈಗ ನೋಡಿ ಪ್ರಾಣಿ, ಪಕ್ಷಿ, ಜಲಚರಗಳು ಅಪಾಯಗಳ ಮುನ್ಸೂಚನೆಯನ್ನು ಹೀಗೆ ನೀಡುತ್ತದೆ. (ವೈಜ್ಞಾನಿಕವಾಗಿ ಕಂಡು ಹಿಡಿಯಲಾಗಿದೆ.) ಹಾವು ಮತ್ತು ಇಲಿಗಳು ತಮ್ಮ ಬಿಲಗಳನ್ನು ಬಿಟ್ಟು ದಿಕ್ಕೆಟ್ಟು ಓಡುತ್ತವೆ. ಮೀನುಗಳು ನೀರಿನಿಂದ ಹಾರುತ್ತವೆ. ಆಕ್ವೇರಿಯಂ ಮೀನುಗಳು ಡಿಕ್ಕಿ ಹೊಡೆಯುತ್ತವೆ. ಆಮೆಗಳು ಪಲ್ಟಿ ಹೊಡೆಯುತ್ತ ಧಾವಿಸುತ್ತದೆ. ದನ, ಕರು, ಕುರಿ, ಮತ್ತು ಕುದುರೆಗಳು ತಾವು ಇರುವ ಸ್ಥಳಕ್ಕೆ ಹೋಗುವದಿಲ್ಲ, ಕೋಳಿಮರಿಗಳು ಗಿಡ ಏರುತ್ತವೆ. ಬಾತು ಕೋಳಿಗಳು ನೀರಿಗೆ ಹೋಗಲು ನಿರಾಕರಿಸುತ್ತವೆ. ನಾಯಿಗಳು ವಿನಾಕಾರಣ ಬೊಗಳುತ್ತವೆ, ಹಂದಿಗಳು ಪರಸ್ಪರ ಕಚ್ಚಾಡುತ್ತವೆ. ಜಿಂಕೆಗಳು ದಿಕ್ಕೆಟ್ಟು ಓಡುತ್ತವೆ ಮತ್ತು ಜಿರಳೆಗಳು ವೃತ್ತಾಕಾರವಾಗಿ ಸುತ್ತುತ್ತವೆ. ಇದೆಲ್ಲ ಕ್ರಿಯೆ ನಡೆಯುವದು ಭೂಕಂಪದ ಮುನ್ಸೂಚನೆಯನ್ನು ತಿಳಿಸುತ್ತದೆ. ಜ್ವಾಲಾಮುಖಿ, ಬಿರುಗಾಳಿ, ಅಥವಾ ನೈಸರ್‍ಗಿಕ ವಿಕೋಪಗಳಾದರೆ, ಜೆಲ್ಲಿ ಮೀನು ೧೦-೧೫ ಗಂಟೆಗಳ ಮೊದಲೇ ಬಿರುಗಾಳಿಯ ಮುನ್ಸೂಚನ ಅರಿಯುತ್ತದೆ. ಆದ್ದರಿಂದ ಸಮುದ್ರ ದಂಡೆಯಿಂದ ಸಮುದ್ರದಾಳಕ್ಕೆ ಹೋಗುತ್ತದೆ. ಕೇಡುಗಾಲ ಬಂದಾಗ ಅದನ್ನರಿತ ಮೀನು ಸಮುದ್ರದಾಳದ ಮೀನು ನೀರಿನ ಮೇಲೆ ಬರುತ್ತದೆ. ಆರ್‍ಕ್ಟಿಕ್ ಪ್ರದೇಶದಲ್ಲಿ ವಾಸಿಸುವ ಟಾರಾಮಿಗಾನ್ ಎಂಬ ಹಕ್ಕಿಯನ್ನು ಪಕ್ಷಿ ಸಂಕುಲದ ಜೋತಿಷಿ ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ತನ್ನ ಪರಿಸರದಲ್ಲಿ ಮುಂದೆ ಆಗಲಿರುವ ಬದಲಾವಣೆಗಳನ್ನು ಗುರುತಿಸುತ್ತದೆ. ವೈಪರಿತ್ಯವಾದ ಸೂಚನೆಗಳೆನಾದರೂ ತಿಳಿದರೆ ಅಲ್ಲಿಂದ ಜಾಗ ಖಾಲಿಮಾಡಿ ಬಿಡುತ್ತವೆ.
*****