ಹಚ್ಚೆ ಎಲ್ಲರ ಹಕ್ಕು. ಮನುಷ್ಯನ ಹಿಂದೆ ಹಚ್ಚೆ ಮಾತ್ರ ಹೋಗುವುದು! ಜೀವಿತದ ಅವಧಿಯಲ್ಲಿ ಬೇಕಾದ್ದು ಗಳಿಸಿದ್ದರೂ ಅದನ್ನು ಇಲ್ಲೇ ಬಿಟ್ಟು ಹೋಗುವರು. ಅದೇ ಹಚ್ಚೆ ಹಾಕಿಸಿಕೊಂಡರೆ ಅದನ್ನು ಹಿಂದಿಂದೆ ಒಯ್ಯುವರು. ಹೀಗಾಗಿ ಹಚ್ಚೆ-ಹಕ್ಕು ಅದನ್ನು ಯಾರು ಕಸಿಯುವಂತಿಲ್ಲ.
ಈ ಹಚ್ಚೆ ಕಲೆಗೆ ಸುಮಾರು ೫೦೦೦ ವರ್ಷಗಳಷ್ಟು ಇತಿಹಾಸವಿದೆ. ಇದು ನಮ್ಮ ಮೂಲನಿವಾಸಿಗಳ ಆಸ್ತಿ. ಇದನ್ನು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿರುವರು. ಇದನ್ನು ಕಸಿಯುವ ಹಕ್ಕು ಯಾರಿಗಿದೆ?
ಇತ್ತೀಚೆಗೆ ಭಾರತೀಯ ಸೇನಾ ಸಿಬ್ಬಂದಿ, ಅಧಿಕಾರಿಗಳು, ಸೈನಿಕರು, ಹಚ್ಚೆಗಳನ್ನು ಹಾಕಿಸಿಕೊಳ್ಳುವಂತಿಲ್ಲ ಎಂದು ಸೇನಾ ಅಧಿಕಾರಿಗಳು ಆದೇಶಿಸಿದ್ದಾರೆ.
ಭವ್ಯ ಭಾರತೀಯ ಸೇನೆಗೆ ಸೇರಲು ಬಯಸುವ ಅಭ್ಯರ್ಥಿಗಳು ಇನ್ನು ಮುಂದೆ ಹಚ್ಚೆ ಹಾಕಿಸಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಸಂಪ್ರದಾಯ ಆಚರಣೆಗಳ ಹಿತದೃಷ್ಟಿಯಿಂದ ಬುಡಕಟ್ಟು ಹಿಂದುಳಿದ ಜಾತಿ ಜನಾಂಗದವರಿಗೆ ಮಾತ್ರ ಹಚ್ಚೆ ಹಾಕಿಸಿಕೊಳ್ಳಲು ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಭವ್ಯ ಭಾರತೀಯ ಸೇನೆಗೆ ಸೇರಿದ ಮೇಲೆ ನಾನು ಯಾವುದೇ ರೀತಿಯ ಹಚ್ಚೆಗಳನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ತರಬೇತಿಗೆ ತೆರಳುವ ಮುನ್ನ ಅಭ್ಯರ್ಥಿಗಳು ಪ್ರಮಾಣ ಪತ್ರವೊಂದಕ್ಕೆ ಸಹಿ ಮಾಡುವ ವಿಧಿವಿಧಾನ ನಿಯಮವೊಂದನ್ನು ಈಗಾಗಲೇ ರೂಪಿಸಿರುವರು.
ಇಷ್ಟೇ ಅಲ್ಲದೆ, ಸರ್‍ವೇ ಸಾಮಾನ್ಯ ಜನರು ತಮ್ಮ ಶಿಸ್ತು ದಕ್ಷತೆಗೆ ಧಕ್ಕೆಯಾಗದಂತೆ ಧಾರ್ಮಿಕ ಹಾಗೂ ಪ್ರೀತಿ ಪಾತ್ರರ ಹೆಸರು ಚಿಹ್ನೆ ಹಾಕಿಸಿಕೊಳ್ಳಲು ಸಂಪೂರ್ಣವಾಗಿ ಅವಕಾಶ ಕಲ್ಪಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮ ಭಾರತೀಯ ಸೈನ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಬ್ರಿಟೀಶ್ ಮಾದರಿಯ ಆಡಳಿತ, ಸರ್ಕಾರ, ಸಲ್ಲವೆಂದು ಮತ್ತೊಮ್ಮೆ ಸಿಪಾಯಿ ದಂಗೆಗೆ ಕಾರಣವಾಗದಂತೆ ಇಂದಿನ ಘನ ಸರ್ಕಾರ ಎಚ್ಚೆತ್ತು ಕೊಳ್ಳಬೇಕಲ್ಲವೇ?
*****