ಲೋಕದ ಮನೆ ಇದು ಕರ್‍ಮ ಭೂಮಿ
ಕರ್‍ಮಕ್ಕೆ ಮೂಲಾಧಾರ ಮನವು ಹೌದು
ಮನಸ್ಸನ್ನು ಬಿಡದಂತೆ ನಿಗ್ರಹಿಸು ಜೋಕೆ
ಮನವು ಹೇಳಿದಂತೆ ನಿ ಓಡಲೇಕೆ!
ಕಷ್ಟವೊ ಸುಖವೊ ಸಾಂತ್ವನದಿ ಸ್ವೀಕರಿಸು
ಕಷ್ಟಗಳ ನಡುವೆಯೂ ಶಿವನ ಅನುಭವಿಸು
ಈ ಬಾಳೇ ನಿನಗೊಂದು ಪರೀಕ್ಷಾ ಕೇಂದ್ರ
ಉತ್ತೀರ್‍ಣನಾದರಾಯ್ತು ನೀ ನಾಗುವೆ ಇಂದ್ರ
ಪ್ರತಿಯೊಂದು ಮಾಡುವಾಗ ಯೋಚನೆ ಇರಲಿ
ಆ ದೇವರನ್ನು ಕಾಣುವ ಯೋಜನೆ ಇರಲಿ
ನಿನ್ನವರೆಲ್ಲ ನಿನ್ನ ದೇಹಕ್ಕೆ ಸಂಬಂಧವಿರಲಿ
ನಿನ್ನಾತ್ಮ ಮಾತ್ರ ಭಗವನಗೆ ಅರ್‍ಪಿಸಿರಲಿ
ಧ್ಯಾನ ಮಾಡು ನಿತ್ಯ ಶಿವನ ಪರಾಕಾಷ್ಠೆಯಲಿ
ನಿನ್ನ ಪ್ರ್‍ಆರ್‍ಥನೆಯಲ್ಲಿ ಸರ್‍ವರ ಕಲ್ಯಾಣವಿರಲಿ
ಮನದಲಿ ನೂರೆಂಟು ಚಿಂತೆಗಳು ಬೇಡ
ಆ ಕೆಟ್ಟ ವಿಕಾರಗಳಿಗೆ ಅವಕಾಶಬೇಡ
ನಡೆ ನುಡಿಯು ನಿನ್ನದು ಶುದ್ಧವಿರಲಿ
ನಿರ್‍ಭಾವ ನಿರಹಂಕಾರ ನಿನ್ನದಾಗಿರಲಿ
ಲಭಿಸುವವು ಆಗ ಶಾಂತಿ ಆನಂದ
ಮಾಣಿಕ್ಯ ವಿಠಲನೇ ಭಗವದಾನಂದ
*****