ಎದ್ದೇಳಿ ಎದ್ದೇಳಿ ಸೋದರರೇ
ಕನ್ನಡದಾ ವೀರಯೋಧರರೇ
ಕನ್ನಡದಾ ಮಣ್ಣಲ್ಲಿ ಮಣ್ಣಾಗಿ
ಕನ್ನಡದಾ ನೆಲದ ಹಸಿರಾಗಿ ||
ಬಡಿದೆಬ್ಬಿಸುತಿಹಳು ತಾಯಿ
ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ
ನುಡಿಯೊಂದ ಕೇಳಿ ಒಲವಿಂದೇ
ತೂಕಡಿಸದಿರಿ ತೂಕಡಿಸದಿರಿ ಮತ್ತೆ
ತಾಯೆ ಸೆರೆಯಲ್ಲಿ ನೀವಾಗಿ
ಭಾವಪರವಶರಾಗಿ ದಾಸ್ಯವನು ನೀಗಿಸಿ ||
ಕನ್ನಡತನದ ಐಸಿರಿಯ ಹೊಳೆಯಹರಿಸಿ
ಆತ್ಮಬಲದಿಂ ಅಭಿಮಾನ ಹಿರಿಮೆಯ
ಬೀಜ ಬಿತ್ತಿ ಮತ್ಸರವ ತೊರೆದು
ಸ್ನೇಹ ಹಸ್ತ ಸಿರಿತನದ ಒಡೆತನದ
ಹೊಸ್ತಿಲಲ್ಲಿ ಬಾಳಗರಿಮೆಯ ಕಟ್ಟ ಬನ್ನಿ ||
ಬಾಳ್ವತೆಯ ಧೃಡ ಸಂಕಲ್ಪದ
ಜ್ಯೋತಿ ಬೆಳಗಿ ಅನಂತಕಾನನದ
ಅಂತರಂಗದಿ ಕನ್ನಡಾಂಬೆಯ ಮಡಿಲ
ಹೂವಾಗಿ ಅರಳಿ ಸೊಬಗನ್ನು ಚೆಲ್ಲಿ
ಮಾನ್ಯತೆಯ ಮೆಟ್ಟಿಲೇರಿ ಭವ್ಯತೆಯಲಿ ||
*****