ದಕ್ಷಿಣ ಹಿಂದೂಸ್ಥಾನದಲ್ಲಿ ಪ್ರಧಾನರಾಜ್ಯವಾಗಿರುವ ನಿಜಾಮ ರಾಷ್ಟ್ರದ ರಾಜಧಾನಿಯಾದ ಹೈದರಾಬಾದಿನ ಒಂದಾ ನೊಂದು ರಾಜಬೀದಿಯಲ್ಲಿ ಒಂದಾನೊಂದು ಉಪ್ಪರಿಗೆಯ ಮನೆ. ಆ ಮನೆಯ ದಿವಾನ್ ಖಾನೆಯಲ್ಲಿ ಒಬ್ಜ ತರುಣನು ಆದಿನದ ಅಂಚೆ ಯಲ್ಲಿ ಬಂದ ಕಾಗದವೊಂದನ್ನು ಹಿಡಿದುಕೊಂಡು ಶತಪಥ ತಿರುಗುತ್ತಾ ತನ್ನಲ್ಲಿತಾನೆ, “ಇದೇನು ಆಶ್ಲರ್ಯ! ವಿಳಾಸದಾರರು ಊರುಬಿಟ್ಟುಹೋದುದಾಗಿ ತಿಳಿಯಬಂದುದರಿಂದ ವಾಪಸು ಎಂದು ‘ಷರಾ` ಬರೆದಿದೆ. ಊರುಬಿಟ್ಟುಹೋದುದೆಲ್ಲಿಗೆ? ತೀರ್ಥಯಾತ್ರೆ ಗಳಿ ಗೋಸ್ಥ್ರರ ಹೋಗಿರಬಹುದೆ? ಇಲ್ಲವೆ ವಿಪತ್ತೇನಾದರೂ ಸಂಭವಿಸಿ ತೊ ? ತಿಳಿಯ ಹೇಳುವವರಾರು ? ಮನಸ್ಸಿನಲ್ಲೀನೋ ಒಂದು ಬಗೆಯ ಕಳವಳವುಂಟಾಗಿದೆಯಲ್ಲ ! ಏನುಮಾಡಲಿ ?“ ಎಂದು ಹೇಳಿಕೊಳ್ಳುತ್ತಿದ್ದನು., ಹಾಗೆಯೆ ಸ್ವಲ್ಪ ಹೊತ್ತು ನಿಂತುಕೊಂಡು ಯೋಚಿಸಿ , ಆಗಬೇಕಾದುದು ಆಗಲೇಬೇಕು. ವೃಥಾಚಿಂತಿಸಿ ಫಲ ವೇನು“ ಎಂದಂದುಕೊಂಡು ಕುರ್ಚಿಯಮೇಲೆ ಕುಳಿತು, ಆದಿನದ ವರ್ತಮಾನ ಪತ್ರಿಕೆಗಳನ್ನು ತೆಗೆದುಕೊಂಡನು. ಮೊದಲನೆಯ ಪತ್ರಿಕೆಯಲ್ಲಿಯೆ “ಎಡಿಟರ“`ವರ ಲೇಖನದಮೇಲ್ಗಡೆ ಹೀಗೆಂದಿತ್ತು:– ” ಪುನಹೆಯಲ್ಲಿರುವ ಜಹಗೀರ್ದಾರ್ ಶಂಕರರಾಯರಿಗೆ ಅವ ಸಾನ ಕಾಲವು ಸಮೀಪಿಸಿದೆ. ಅವರು ತಮ್ಮ ಏಕಮಾತ್ರನಾದ ಪುತ್ರ ನನ್ನು ನೋಡಲು ಬಹಳವಾಗಿ ಅಪೇಕ್ಷಿಸುತ್ತಾರೆ. ಆತನಿ ಗೋಸ್ಕರ ಕಳೆದ ಎರಡುತಿಂಗಳಿಂದಲೂ ಕೊರಗುತ್ತಿದ್ದಾರೆ. ಅವರ ವ್ಯಾಧಿಗೆ ಪುತ್ರ ವಿಯೋಗವೇ ಮೂಲಕಾರಣವಾದುದರಿಂದ ಕೈಮಿಂಚುವುದಕ್ಕೆ ಮುಂಚೆಯೆ ಪುತ್ರನಾದವನು ಬಂದು ನೋಡಿದುದೇ ಅದರೆ, ಅವರ ವ್ಯಾಧಿಯು ಬಹುಶಃ ಗುಣವಾಗಬಹುದು.
ಪೂನಾ
ಕೆಪ್ಟನ್ ಕಾಕ್ಸ್ ಎಂ.ಡಿ., ಐ, ಎಮ್, ಎಸ್ ತಾ
ಸಿವಿಲ್ˆ ಸರ್ಜನ್. “
ಯುವಕನ ಕೈಯಿಂದ ಪತ್ರಿಕೆಯು ಕೆಳಗೆಬಿದ್ದಿತು ಕಣ್ಣಿ ನಿಂದ ಧಾರೆಯಾಗಿ ನೀರು ಹರಿಯಲು ಪ್ರಾರಂಭವಾಯಿತು. ಎದು ರಿಗಿದ್ದ ಗಡಿಯಾರವನ್ನು ನೋಡಿದನು, ೯ ಗಂಟಿಯಾಗಿತ್ತು. ತಡ ಮಾಡದೆ ಎದ್ದು. ಉಡುಪನ್ನು. ಹಾಕಿಕೊಂಡು ಆ “ನ್ಯೂಸ್ ಪೇಪರ“ ನ್ನು ತೆಗೆದುಕೊಂಡು ಎಲ್ಲಿಯೋ ಹೋಗಿಬಂದನು. ಅನಇತರ ಸೇವ ಕನಿಗೆ ಫುನಹೆಗೆ ಹೊರಡಬೇಳಕೆಂದು ತಿಳಿಸಿ ಸಾಮಾನುಗಳನ್ನು ಕಟ್ಟಿ ಅರ್ಧಗಂಟೆಯಲ್ಲಿ ಸಿದ್ದಮಾಡಿ ಗಾಡಿಯಲ್ಲಿಟ್ಟು ಕರೆಯಬೇಕೆಂದು ಹೇಳಿದನು. ಹಾಗೆಯೆ ಆ ಪತ್ರಿಕೆಯನ್ನು ಸ್ವಲ್ಪ ಹೊತ್ತು ನೋಡುತ್ತಿ ದ್ವರೂ ಅನ್ಯಮನಸ್ಕನಾಗಿದ್ದುದರಿಂದ ಯಾವುದೂ ಮನಸ್ಸಿಗೆ ಹಿಡಿ ಯಲಿಲ್ಲ. ಆದುದರಿಂದ , “ರೈಲ` ಗಾಡಿಯಲ್ಲಿ ನೋಡೋಣ“ ವೆಂದಂ ದುಕೊಂಡು ಇಟ್ಬುಬಿಟ್ಟ ನು. ಅನಂತರ ಸ್ನಾನಸಂಧ್ಯಾವಂದನೆಗಳನ್ನು ಮಾಡಿ ಸ್ವಲ್ಪ ಆಹಾರವನ್ನು ತೆಗೆದುಕೊಂಡು ರೇಲ್ವೇಸ್ಟೇಷನ್ನಿ ಗೆ ಹೋಗಿ ಸೇರಿದನು. ಮನಸ್ಸಿನಲ್ಲಿ ವೃತ್ತಾಂತಪತ್ರಿಕೆಯ ವರ್ತಮಾನದಿಂದುಂಖಾದ ವೃಥೆಯ ಜತೆಗೆ ತಾನು ಬರೆದಿದ್ದ ಕಾಗದವು ಹಿಂದಿ ರುಗಿ ಬಂದುದರಿಂದುಂಟಾದ ವ್ಯಥೆಯೂ ಸೇರಿದ್ದಿತು. ಆದುದರಿಂದ ಆಹಾರವು ಅದಿನ ಅವನಿಗೆ ರುಚಿಸಲಿಲ್ಲ. ೧೧ ಗಂಟೆಗೆ ಸರಿಯಾಗಿ ರೇಲ್ ಗಾಡಿಯು ಸಿದ್ದವಾಯಿತು. ಮೊದಲನೆಯ ತರಗತಿಯ ಗಾಡಿ ಯಲ್ಲಿ ಸಾಮಾನುಗಳು ಇಡಲ್ಪಟ್ಟುವು. ನಮ್ಮ ಯುವಕನು ಗಾಡಿ ಯಲ್ಲಿ ಕುಳಿತುಕೊಂಡು ಸೇವಕನಿಗೆ ಮನೆಯನ್ನು ಎಚ್ಚರವಾಗಿ ನೋಡಿಕೊಂಡಿರಬೇಕೆಂದ್ದೂ ತಾನು ಬೇಗನೆ. ಹಿಂದಿರುಗುವುದಾಗಿ ಯೂ ತಿಳಿಸಿದನು. ಗಾಡಿಯು ಮುಂದಕ್ಳೆ ಹೊರಟಿತು. ಯುವಕನು ವೃತ್ತಾಂತಪತ್ರಿಕೆಯನ್ನು ಪುನಹಾ ತೆಗೆದುಕೊಂಡು ಮೊದಲಿ ನಿಂದಲೂ ಕ್ರಮವಾಗಿ ಓದತೊಡಗಿದನು. ಓದುತ ಓದುತೆ ಒಂದು ಕಡೆ ” ಒಂದು ವಿಚಿತ್ರವಾದ ಸಿವಿಲ್ ಮೊಕದ್ದಮೆ“ ಎಂಬ ಅಭಿಧಾನ ವುಳ್ಳ ಒಂದು ಲೇಖನವನ್ನು. ಸೋಡಿದನು, ಅದನ್ನೋದುತ್ತಲೆ ಅವನ ಮುಖವೆಲ್ಲವೂ ಬೆಳ್ಳಗಾಗಿ ಹೋಗಿ ಕೂತಿದ್ದವನು ಹಾಗೆಯೆ ಮಲಗಿ ಕೊಂಡನು. ಮನಸ್ಸಿನ ಯಾತನೆಯು ಬಹಳವಾಗಿದ್ದಿತು. ಅ ಗಾಡಿ ಯಲ್ಲಿ ಅವನೊಬ್ಬನೇ ಪ್ರಯಾಣ ಮಾಡುತ್ತಿದ್ದರಿಂದ ಅಶ್ರುಧಾರೆ ಗಳು ನಿರ್ಭಯವಾಗಿ ಕಪೋಲಗಲನ್ನು ತೋಯಿಸುತ್ತಿದ್ದವು. ಬಹಳ ಶ್ರಮದಿಂದ ಆ ಹಗಲನ್ನೂ ರಾತ್ತಿಯನ್ನೂ ಕಳೆದು ಮಾರಣೆಯದಿನ ಪುನಹೆ ಪಟ್ಟಣವನ್ನು ಸೇರಿದನು.
*****
ಮುಂದುವರೆಯುವುದು