ರೈತರು, ರೈತಮಕ್ಕಳು, ದನಗಾಹಿಗಳು, ಅರಣ್ಯನಿವಾಸಿಗಳು ಮೇಲಿಂದ ಮೇಲೆ ಕಾಡು, ಮೇಡು, ಪೊಟರೆ, ಹಳ್ಳ, ಗಿಡ, ಬಳ್ಳಿಗಳ ನಡುವೆ ತಿರುಗಾಡಲೇ ಬೇಕಾಗುತ್ತದೆ. ಆಗ ಸಹಜವಾಗಿ ವಿಷಜಂತುವಾದ ಹಾವು ಕಚ್ಚಿಬಿಡುತ್ತದೆ. ಆಗ ತಕ್ಷಣಕ್ಕೆ ಔಷಧಿ ಅಥವಾ ಇಂಗ್ಲಿಷ್ ಚಿಕಿತ್ಸೆ ಸಿಗದೇ ಸಾವನ್ನಪ್ಪಬಹುದು. ಈ ರೀತಿಯಾಗಿ ಭಾರತದೇಶದಲ್ಲೊಂದೆ ೨೫ ಸಾವಿರದಷ್ಟು ಜನ ಅಸುನೀಗುತ್ತಾರೆಂದರೆ ಇದರ ಭೀರಕರತೆಯ ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಸಿಗುವ ಆಯುರ್ವೇದ ಸೊಪ್ಪುಗಳನ್ನು ಕಲೆಹಾಕಿ ಸೇವಿಸಿದರೆ ಸಾವನ್ನು ತಪ್ಪಿಸಬಹುದು.
ಒಂದೆಲಗ (ಜ್ಞಾನಪತ್ರೆ), ಕರಿಲಕ್ಕಿ ಸೊಪ್ಪು, ಕರಿನುಗ್ಗೆ ಸೊಪ್ಪು, ಬಿಳಿ ಎಕ್ಕದ ಸೂಪ್ಪು, ನಿಂಬೆ ತುಳಸಿಗಿಡದ ಸೊಪ್ಪು, ನಾಗದಾಳಿ ಸೊಪ್ಪು, ಆಡುಮುಟ್ಟದ ಸೊಪ್ಪು (ಕತ್ತೆಕಾಲಂಬು) ಕಹಿಸೊರೆಎಲೆ, ವಿಷಹಾರಿಸೊಪ್ಪು, ಕರಿ ಉಮ್ಮತ್ತಗದ ಎಲೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ನುಣ್ಣಗೆ ಪುಡಿಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಅಥವಾ ಕಹಿ ಸೊರೆ ಬುರಡೆಯಲ್ಲಿ ಶೇಖರಿಸಿ ಇಟ್ಟುಕೊಂಡು ಹಾವು ಕಡಿದಾಗ ನಿಂಬೆಹಣ್ಣನ್ನು ಸಮಪಾಲುಮಾಡಿ ಮಿಶ್ರಣವನ್ನು ಈ ನಿಂಬೆ ಹಣ್ಣಿನ ಹೋಳಿಗೆ ಸೇರಿಸಿ ಚೀಪಿಸುವುದರಿಂದ ಅಥವಾ ಕುಡಿಯುವುದರಿಂದ (ನೀರನ್ನು ಸೇರಿಸಬಾರದು) ಖಂಡಿತ ಸಾವನ್ನು ತಪ್ಪಿಸಬಹುದು ಹಾವು ಕಡಿದಾಗ ನಿದ್ರೆ ಮಾಡಬಾರದು ಎಂದು ಆಯುರ್ವೇದ ವಿಜ್ಞಾನಿಗಳು ಶೃತಪಡಿಸಿದ್ದಾರೆ.
*****