ಲಕ್ಷ ಜನುಮಗಳ ಗಳದಾಟಿ ಬಂದೇವು
ಈ ಮನುಜ ಶರೀರ ನಾವು ಪಡೆದೇವು
ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ
ನಿದ್ರೆ ಆಹಾರ ಮೈಥುನದ ದುರಭ್ಯಾಸವೆ!
ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು
ನೀನು ಸಾಕ್ಷಾತ ಪರಮಾತ್ಮನ ತಂತು
ಗಗನದೆತ್ತರದ ಯೋಜನೆಗಳ ಸೃಷ್ಟಿಸಿ
ಈ ಬಾಳೆ ಸಾರ್ಥಕವೆಂದು ಭ್ರಮಿಸಿ
ಅಹಂಕಾರ ನಿನ್ನದು ಕಪ್ಪು ಚುಕ್ಕೆ
ಸದಾ ಎಳುಯುವುದು ನಿನ್ನ ನರಕಕ್ಕೆ
ಮಾನ ಅಪಮಾನ ಶರೀರ ಭಾವಗಳು
ಸದಾ ಅಶಾಂತಿಯ ಅವಿರ್‍ಭಾವಗಳು
ರವಿಯ ತೇಜದ ನೀನು ತೇಜೊ ಬಿಂದು
ಪ್ರೇಮ ಸಾಗರದ ನೀನು ದೈವ ಸಿಂಧು
ನಿನ್ನಸು ಕರ್ಮಗಳೇ ನಿನಗೆ ನೆಳಲು
ನಿನ್ನ ಎತ್ತಿಕೊಳ್ಳುವನು ಮಾಣಿಕ್ಯ ವಿಠಲ
*****