ವಾಗ್ದೇವಿ – ೪೭

ವಾಗ್ದೇವಿ – ೪೭

ಶಾಬಯನು ಮರಳೆ ಬರುವ ನಿರೀಕ್ಷಣೆಯಿಂದೆ ಶಾದುಕೊಂಡಿರುವ ಕೊತ್ವಾಲನು ದಾರಿಯಲ್ಲಿ ಸಿಕ್ಕಿ ಉಭಯ ಮೂರ್ತಿಗಳು ಹಾಸ್ಯವದನರಾಗಿ ಮೆಲ್ಲಗೆ ಮಾತನಾಡುತ್ತಾ ನಡೆದರು. ಶಾಬಯ್ಯನ ಮನೆಯಲ್ಲಿ ಒಂದೆರಡು ಘಳಿಗೆ ಪರಿಯಂತರ ಇದ್ದು ಕೊತ್ವಾಲನು ತನ್ನ ಮನೆಗೆ ಬಂದ ಬಳಿಕ ಯಾಕುಬಖಾನನನ್ನು ಕರೆದು ಅಂತರಂಗದಲ್ಲಿ ಅನುಜ್ಞೆಗಳನ್ನು ಕೊಟ್ಟು ಕಳುಹಿಸಿಬಿಟ್ಟನು. ಮರುವಿನ ನೇಮಿಸಲ್ಪಟ್ಟ ಸಮಯಕ್ಕೆ ವಿಮರ್ಶಾಧಿಕಾ ರಿಯು ಮನೆಯಿಂದ ಹೊರಟು ಬರುವಾಗ ದಾರಿಯಲ್ಲಿ ಒಬ್ಬಳು ಮುಮಕಿಯು ಜರೆಯಿಂದ ನೆಲಕ್ಕೆ ಬಗ್ಗಿ ಒಂದು ದೊಣ್ಣೆಯನ್ನು ಊರಿಕೊಂಡು -“ಇನ್ನಿನ್ನು ಹಗಲು ಸಮಯವಾದರೂ ದಾರಿ ನಡೆಯುವುದು ಕಷ್ಟ. ನೇಮರಾಜನ ಗತಿಯೇ ಹಾಗಾಯಿತು. ನನ್ನಂಥಾ ಪರದೇಶಿಗೆ ನಾಯಿಯನ್ನು ಕೊಂದ ಹಾಗೆ ಕೊಂದುಬಿಟ್ಟರೆ ಕೇಳುವವರಾರು?” ಎಂದು ತನ್ನಷ್ಟಕ್ಕೆ ಅಂದುಕೊಳ್ಳುತ್ತಾ ಅತ್ತಿತ್ತ ನೋಡದೆ ಹೋಗುವದನ್ನು ಕಂಡು, ವಿಮರ್ಶಾಧಿಕಾರಿಯು ಅವಳನ್ನು ಸಮಾಪಕ್ಕೆ ಕರೆದು ಅಂಗಿಯ ಜೇಬಿಧಿಂದ ಎರಡಾಣೆ ಪಾವಲಿ ಒಂದು ತೆಗೆದು ಅವಳ ಕೈಯಲ್ಲಿ ಹಾಕಿ ಅವಳನ್ನು ಮಾತನಾಡಿಸಿದನು.

ಮುದುಕಿ–“ಯೇ ಮಗನೇ! ದೇವರು ನಿನಗೆ ವಜ್ರಾಯಿಸ ಕೊಡಲಿ. ಈ ಹೊತ್ತು ಹೊಟ್ಟೆ ತುಂಬಾ ಉಂಬೋಕೆ ಆಯಿತು.”

ವಿಮರ್ಶಾಧಿಕಾರಿ–“ನೇಮರಾಜನಿಗೆ ಯಾರು ಕೊಂದರಂತಿಯಾ??”

ಮುದುಕಿ–“ನಾನೇನು ನೋಡಿಯೇನೇ? ಮಗನೇ ಅವ ಸತ್ತಿದ್ದು ಹೌದೇ. ಅವನ ಹೆಂಡತಿ ಸ್ವಲ್ಪ ಬುದ್ಧಿವಂತೆ. ಅವಳ ಕರ್ಮ ಅವನಿಗೆ ಬಡೀತು. ಅವಳ ದೋಸ್ತಿಗಾರ್ರು ಅವನನ್ನು ಕೊಂದರೆಂದು ಕಾಟಿ ಹೇಳ್ತಾರೆ ಮಗನೇ. ನಾನು ಸಾಯೋ ಮುದುಕೆ! ನನಗ್ಯಾಕೆ ಅದೆಲ್ಲಾ ಪಾರುಪತೃ? ಸರ್ಕಾರದವರು ಕೇಳಿದರೆ ನನ್ನನ್ನು ತೇಕು ಮೇಕು ಮಾಡ್ಯಾರು. ನನ್ನ ನಾಲಿಗೆ ಸುಮ್ಮಗಿರೋದಿಲ್ಲ.. ನೀನ್ಯಾರು. ಮಗನೇ? ‘ ಸರಕಾರದ ಮನಸನೋ??

ವಿಮರ್ಶಾಧಿಕಾರಿ–“ಅಲ್ಲ, ಅಲ್ಲ, ನಾನೊಬ್ಬ ಖುಶಿವಾಶಿ ಮನುಷ್ಯ. ನೀನು ಅಂಜಬೇಡ. ಅವನ ಹೆಣವಾದರೂ ಸಿಕ್ಕಿತೇ?”

ಮುದುಕಿ–“ಹೆಣ ಸಿಕ್ಟೋಕಾಲ ಉಂಟೋ? ಪೆಟ್ಟಿಗೆಯಲ್ಲಿ ಹಾಕಿ ಬೀಗ ಬಂದೊಬಸ್ತಿ ಮಾಡಿ ಕಾಟಿ ಪಟ್ಟಿ ಅರವೆ ಗಂಟು ಅಂದಿ ಪರ ಊರಿಗೆ ಕಳಸಿ ಫಡಚಾ ಆಯಿತಂತೆ. ಇಷ್ಟೊತ್ತು ಉಳದೀತೋ ಮಗನೇ? ನಾನು ಹೋಯಿತೇನೆ. ನಂಗೆ ನಿಲ್ಲೋಕೆ ಆಗುವದಿಲ್ಲ. ಸೊಂಟ ನೋಯಿತತೆ. ಏ ಹಾಐಗುಳಿ-ಏ ಗುಳಗಜ್ಜಾ- ಪಾಪಿ ಮಕ್ಕಳು ಸತ್ತುಕೊಂಡು ಹೋಯಿಲಿ.”

ವಿಮರ್ಶಾಧಿಕಾರಿ- “ಆ ಪೆಟ್ಟಿಗೆ ಹೊತ್ತವರ್ಯಾರು?”

ಮುದುಕಿ–“ನಾನು ನೋಡಿದ್ದರೆ ಹೇಳ್ತಿದ್ದೆ. ಶೆಟ್ಟರ ಜಾಗದಲ್ಲಿ ಅವರ ಮೂಲದ ಹೊಲೆಯರು ಬೇಕಟ್ಟು ಐದಾರೆ. ಬೇರೆ ಜನರು ಯಾಕೆ)? ಏರ್ನ ಮೂಲದ ಹೊಲೆಯರು ಬೇಕಟ್ಟು ಐದಾರೆ. ಬೇರಿ ಜನರು ಯಾಕೆ? ಏನನ್ನ ಪಂಜುಗುಳಿ, ನಂಗೆ ನೂರು ವರ್ಸಾಯಿತು. ವುಚ್ಚ ಕೂಲಿ ಬಂತು.”

ವಿಮರ್ಶಾಧಿಕಾರಿಯು ಈ ಮುದುಕಿಯನ್ನು ಮುಂದರಿಸಬಿಟ್ಟು ಮೆಲ್ಲಗೆ ಅಡಿ ಇಡುತ್ತಾ ಬಂದನು. ಮತ್ತಷ್ಟು ಮೂರ ಒಬ್ಬ ಮುದಿ ಮಡಿವಾಳನು ದೊಡ್ಡ ವಸ್ತ್ರದ ಗಂಟನ್ನು ಹೊತ್ತುಕೊಂಡು ದಣಿದು ಸಾಸೂಯೆನ್ನುತ್ತಾ ಸಾಯಲಿ ಈ ದೇಹ; ಎಷ್ಟು ಒದ್ದಾಡಿದರೂ ಹೊಟ್ಟೆಗೆ ಸಾಕಷ್ಟು, ಅನ್ನದ ಬಗೆಯೇ ಸಿಕ್ಕುವದಿಲ್ಲ ನೇಮರಾಜಗೆ ಬಂದ ಮರಣ ತನಗಾದರೂ ಬಂದರೆ ಆಗುತ್ತಿತ್ತು ಎಂಬ ಹಾಗೆ ತನ್ನಷ್ಟಕ್ಕೆ ಹೇಳಿಕೂಂಡು ಹೋಗುತ್ತಿದ ನು ವಿಮರ್ಶಾಧಿಕಾರಿಯು ಅವನನ್ನು ಕರೆದು ಅವನ ಕೈಯಲ್ಲಿ ನಾಲ್ಕಾಣೆ ಪಾವಲಿಯನ್ನು ಇಟ್ಟು ಸಂಭಾಷಣೆ ಮಾಡಿದೆನು

ವಿಮರ್ಶಾಧಿಕಾರಿ–“ನೇಮರಾಜ ಏನಾಗಿ ಸತ್ತನೋ.?

ಮಡಿನಾಳ-.-“ಹೆಂಡತಿಯೇ ಮೃತ್ಯು ಆಗಿ ಸತ್ತ?

ವಿಮರ್ಶಾಧಿಕಾರಿ–“ಹಾಗಂದರೇನು?” ಮಡಿವಾಳ–“ಹೆಂಡತಿ ಖುಶಾಲಗಾರ್ತಿ. ಗಂಡ ಸಾಧನೆ ಮಾಡಿ ಅವಳ ಕಳ್ಳತನ ಹಿಡಿಯಲಿಕ್ಸೆ ನೋಡಿದ. ಸಿಕ್ಕಿಬಿದ್ದ ಅವಳ ದೋಸ್ತಿಗಾರರು ಕೊಂದು ಸುಧಾರಿಸಿ ಬಿಟ್ಟರು.”

ವಿಮರ್ಶಾಧಿಕಾರಿ–“ಹೆಣ ಏಿನಾಯಿತೋ?”

ಮಡಿವಾಳ–“ಫೆಟ್ಟಿಗೆಯಲ್ಲಿ ಹಾಕೆ ಪರವೂರಿಗೆ ಹೋಗುವ ವಸ್ತ್ರದ ಗಂಟೆಂದು ಬಹಿರಂಗವಾಗಿ ಹೊತ್ತುಕೊಂಡು ಹೋದರು. ಮತ್ತೆ ಏನಾ ಯಿತೋ. ಅಷ್ಟು ಚಾತುರ್ಯ ಇಲ್ಲದವರು ಇಂಧಾ ಕೆಲಸದಲ್ಲಿ ಕೈ ಹಾಕು ತ್ತಾರೋ ಸ್ವಾಮೀ? ತಾವು ಯಾರು ಸರ್ಕಾರದವರಲ್ಲವಷ್ಪೆ? ಸುಮ್ಮನೆ ಬಡವನಾದ ನಾನುಸಾಕ್ಷಿಗೆ ಹೋಗಿ ಅಧ್ವಾನ ಪಡಬೇಕಾದೀತು ನನಗೇನೂ ಗೊತ್ತಿಲ್ಲಾ; ನಾನು ಹೋಗಿ ಬಿಡುತ್ತೇನೆ”

ವಿಮರ್ಶಾಧಿಕಾರಿ–“ಹಾಗೇನೂ ಹೆದರಬೇಡ, ನಾನು ಸರ್ಕಾರದವ ನಲ್ಲ. ಲೋಕವಾರ್ತೆಯನ್ನು ಸುಮ್ಮಗೆ ಕೇಳಿದೆ, ಪೆಟ್ಟಿಗೆ ಯಾರು ಹೊತ್ತು ಕೊಂಡು ಹೋದರು?”

ಮಡಿವಾಳ–“ಯಾರು ಬಲ್ಲಾ. ನಾನು ನೋಡಿಲ್ಲ. ಅವನ ಮೂಲದ ಹೊಲೆಯರೇ ಹೊತ್ತುಕೊಂಡು ಹೋದರೆಂತ ಹೇಳೋದು ಕೇಳಿದೆ’

ಮಡಿವಾಳನು ಅಷ್ಟು ಹೇಳ ತಡೆಯಜಿ ಮುಂದ ನಡೆದುಬಿಟ್ಟಿ. ವಿಮ ರ್ಶಾಧಿಕಾರಿಯು ಇನ್ನಷ್ಟು ದೂರ ಹೋದನು. ಮುಂದಿನಿಂದ ಒಬ್ಬ ಹೊಲೆ ಯನು ಬೇಗ ಬೇಗ ನಡಿಯುತ್ತಿದ್ದನು. ಅವನನ್ನು ತಡದು “ಎಲೇ ಎಲ್ಲಿಗೆ ಓಡುತ್ತೀ? ನಿಲ್ಲು” ಅಂದನು.

ಹೊಲೆಯ-.-“ದೇವೆರೇ (ದೇವರೇ)?

ನಿವರ್ಶಾಧಿಕಾರಿ–”ನೀನು ಯಾರ ಮೂಲದ ಹೊಲೆಯನೊ?”

ಹೊಲೆಯ–“ತಟ್ಟಾಲೆ ಮೂಲತಾಯೆ-(ಸೆಟ್ಟರ ಮೂಲದವ)”

ವಿಮರ್ಶಾಧಿಕಾರಿ–ಯಾವ ಸೆಟ್ಟ? ನೇಮರಾಜ ಸೆಟ್ಟಿಯೇನೊ?

ಹೊಲೆಯ. ಓ (ಹೌದು)?

ವಿಮರ್ಶಾಧಿಕಾರಿ–“ನಿನ್ನ ಧನಿ ಎಲ್ಲಿಯೋ?”

ಹೊಲೆಯ-“ಉಳ್ಳಾಯಿ ಹೈತ ವೋಯಿರ್‌-(ಧನಿ ಸತ್ತುಹೋದರು)?

ವಿಮರ್ಶಾಧಿಕಾರಿ–“ಹ್ಯಾಗೆ ಸತ್ತು ಹೋದರು?”

ಹೊಲೆಯ-“ಉಳೋ ಬಿರ್ಮತ್ತಿ ಅರನಮಾನಿಕೆರ್ಯೆರ್‌ಗೆ-(ಅಯ್ಯೋ! ಬ್ರಹ್ಮಹತ್ಯ; ಅವರನ್ನು ಕೊಂದು ಹಾಕಿದರಂತೆ)”

ವಿಮರ್ಶಾಧಿಕಾರಿ–ಯಾಕೋ, ಯಾರು ಕೊಂದರು?”

ಹೊಲೆಯ–“ಉಳೋ ದಾಯಗಂಟುನೆ, ಆ ದೆತ್ತಿನಾ ಸಾವು ಅಡಂಡ

(ಅಯ್ಯೋ ಆ ಹೆಂಗಸಿನ (ಹೆಂಡತಿಯ) ಸಾವು ಆಯಿತು)?

ವಿಮರ್ಶಾಧಿಕಾರಿ–“ಹಾಗಂದರೇನೊ?”

ಹೊಲೆಯ-.-“ಆ ದೆತ್ತಿನ ಸೀಲೊವಂತೆ ಅಂಚ ಅಂಚನೇ.– (ಆ ಹೆಂಗಸಿನ ಶೀಲ ಹಾಗೆಹಾಗೆಯೇ.)”

ವಿಮರ್ಶಾಧಿಕಾರಿ–“ಅವಳೇ ಕೊಂದುಬಿಟ್ಟಳೊ?”

ಹೊಲೆಯ–“ಅತ್ತ ದೇವೆರೇ, ದೆತ್ತಿಗ್‌ ಬೊಡಾಯಿನಾಕ್ಲು ಮಸ್ಲತ್ತು ಮಾಳ್ತದ ತೆಟ್ಯಲೆನ ಕೆರದು ಪಾಡಿಯೆರಗೆ. ಏನ್‌ ಹೂಯಿಜಿ ಹೊಂಬಾರೋ?- (ಅಲ್ಲ ದೇವರೇ, ಅವಳಿಗೆ ಬೇಕಾದವರು ಮಸ್ಲತ್ತು ಮಾಡಿ ಅವನನ್ನು ಕೊಂದುಹಾಕಿದರಂತೆ. ನಾನು ನೋಡ್ಲಿಲ್ಲಾ ಕೇಳಿದಿರೋ.)”

ವಿಮರ್ಶಾಧಿಕಾರಿ–“ಹೆಣ ಏನಾಯಿತೊ??

ಹೊಲೆಯ–“ವೆಟ್ಟಿಗೆಟ ಹಿಂಜಾದ್‌ ವೋಡೇಗೊ ಕಡಪುಡಿಯೆರಗೆ. ಯೇನ ನಾನಾ ಪೊಂಜೆಲಾ ಪಿನಾಯಿ.. (ಪೆಟ್ಟಿಗೆಯಲ್ಲಿ ತುಂಬಿ ಎಲ್ಲಿಗೊ ಕಳುಹಿಸಿ ಬಿಟ್ಟರಂತೆ, ನಾನು ಇನ್ನೇನೂ ಅರಿಯೆ.)

ವಿಮರ್ಶಾಧಿಕಾರಿ–“ಪೆಟ್ಟಿಗೆ ಹೊತ್ತದ್ದು ಯಾರು?”

ಹೊಲೆಯ–“ಯಾನ ಪೊಂಜಿಲಾ ಪಿನಾಯೆ. ಮಣ್ಣ ಪಾಡಡ..- (ನಾನೊಂದೂ ಅರಿಯೆ. ಮಣ್ಣು ಹಾಕಲಿ.)”

ಹೊಲೆಯನ ತಳ್ಳಿ ಇನ್ನು ಬೇಡವೆಂತ ವಿಮರ್ಶಾಧಿಕಾರಿಯು ಮುಂದೆ ನಡೆದನು. ಕೋಸು ಕಣ್ಣ ಮಾಂಬ್ಯಾರಿಯು ಎದುರಿನಿಂದ ಬಂದು ದೊಡ್ಡ ದೊಂದು ಸಲಾಂ ಮಾಡಿ ನಿಂತುಕೊಂಡನು. “ನೀನ್ಯಾರೆಲೇ ಬ್ಯಾರಿ? ಎಂದೋ ನಿನ್ನ ನೋಡಿದ ಹಾಗೆ ಜ್ಞಾಪಕ ಉಂಟು? ಎಂದು ವಿಮರ್ಶಾಧಿ ಕಾರಿಯು ಹೇಳಿದನು.

ಮಾಂಬ್ಯಾರಿ–“ಮುತ್ತು ವರ್ಷ ಖಾವಂದರ ಸಾರಟಿನ ಉದ್ದೇಶಾ ಎರಡು ಎತ್ತು ತಂದು ಕೊಟ್ಟಿ ಮಾಸಳೆ ನಾನೇ ವೊಡೆಯಾ?”

ವಿಮರ್ಶಾಧಿಕಾರಿ–“ಹೌದು. ಹೌದು. ಹೌದು. ಮತ್ತೇನು ವಿಶೇಷ ವರ್ತಮಾನ?”

ಮಾಂಬ್ಯಾರಿ—“ಏನು ಅರಿಕೆ ಮಾಡಲೀ. ಬಡವರು ಇನ್ನು ಮುಂದೆ ಬದುಕಿಕೊಂಡಿರೋದು. ದೊಡ್ಡ ಮುಸ್ಕಿಲ ಖಾವಂದರೇ, ಆಯಿತೋ ಪುಣ್ಯಾತ್ಮ ನೇಮರಾಜ ಸೆಟ್ಟಗೆ ಚಟ್‌ ಮಾಡಿ ಬಿಟ್ಟರು. ನಮ್ಮಂಥವರ ಬಿಸಾತ್‌ ಯೇನು? ಆಯಿತೊ ಕಟ್ಟ ಕಟ್ಟ ದೊಡ್ಡ ಕಟ್ಟ ಆಯಿತೋ?

ವಿಮರ್ಶಾಧಿಕಾರಿ–“ಅವನನ್ನು ಕೊಂದವರ್ಯಾರೊ? ಯಾಕೆ ಕೊಂದರು?

ಮಾಂಬ್ಯಾರಿ–“ಅವನ ಹೆಂಡತಿ–ಆಯಿತೊ ಹಡಕಿ ಚಾಲಿನವಳು. ಅವಳ ಕಳ್ಳತನ ಹಿಡಿಯಲಿಕ್ಕೆ ಆಯಿತೊ, ಕಾದುಕೊಂಡು ಕೂತ. ಆ ಪಾಪದವನಿಗೆ ಆಯಿತೊ? ಹೊಂತಗಾರ ಪೋರ ಒಬ್ಬ ಹೊಡದ ಭರಕೆ ಜೀವನೇ ಆಯಿತೊ ಹಾರಿ ಹೋಯಿತು. ಮತ್ತೆ ನೋಡೋಕುಂಟೇ? ಆಯಿತೋ, ಸತ್ತವ ಸತ್ತ. ಇದ್ದವರು ಸಾಯೇಕಾಗ್ತೇತೊ? ಹೆಣ ಬೇಗ ಬೇಗ ಬೇಗ ಮುದ್ದೆ ಮಾಡಿ ಪೆಟ್ಟಿಗೆ ಒಳಗೆ ತುಂಬಿ ಮೂಲದ ಹೊಲೆಯರಿಂದ ಆಯಿತೋ, ಹೊರಿಸಿ ಅರವೆಪೆಂಡಿ ಅಂದಿಕೊಂಡಿ ಯಾವ ಮಸಣದಲ್ಲಿ ಹಾಕಿಬಿಟ್ಟಿರೊ? ಆಯಿತೊ. ಅಲ್ಲಾನೇ ಬಲ್ಲಾ. ಕೊತ್ತಾಲರೂ ಕಾರ್ಭಾರಿ ಗಳೂ ರಾತ್ರಿ ಹಗಲು ಪೇಚಾಡಿದರೆ ತಲಾವ್‌ ಆಗುತ್ತಿತ್ತೋ? ಇಟ್ಟು ಹೊತ್ತು ಅವಳು ಹಣ ಪುಡಿಮಾಡಿ ಹೊಲೆಯರು ಯಾರಂದಿ ಗೊತ್ತಾಗ ಬಾರದಂದಿ. ಆಯಿತೋ ಯಾವ ಊರಿಗೊ ಕಳುಹಿಸಿಬಿಟ್ಟಳು. ಆಯಿತೋ? ಹೆಣ ಸಿಕ್ಕಿದ್ರೆ ಅಷ್ಟೇ! ಆಯಿತೊ ಖೂನಿ ನಮೂದಿಗೆ ಬಂದಾತು?”

ವಿಮರ್ಶಾಧಿಕಾರಿ–“ಕುಮುದಪುರದ ಮರದಲ್ಲಿ ಯಾರೋ ಒಬ್ಬ ಹೆಂಗಸಿನ ಸಹ ಮಾಡಲಿಕ್ಕೆ ತೊಡಗಿ ಅಲ್ಲಿಯೇ ಅವನು ಖೂನಿಪಟ್ಟನೆನ್ನು ತ್ತಾರೆ. ಅದೇನು ಸುಳ್ಳೆ?”

ಮಾಂಬ್ಯಾರಿ–“ಸತಾ ಸುಳ್ಳು, ಸತಾ ಸುಳ್ಳು. ನನ್ನ ಕಣ್ಣಾಣೆ ಸುಳ್ಳು. ಆ ಮಠದಲ್ಲಿ ಇಬ್ಬರು ಬ್ರಾಹ್ಮಣಿತೀರು ಇರೋದು ಹೌದು. ಅವರೂ ಕೆಟ್ಟ ಚಾಳಿಯವರೇ. ಆಯಿತೋ ಆದಾಗ್ಯೂ ಅಂಧಲ್ಲಿಗೆಲ್ಲಾ ಆ ನೇಮರಾಜ ಹೋಗೊ ಮನಸಾ ಅಲ್ಲ. ಸಾಮಿರಾಯರಿಗೂ ಅವನಿಗೂ ಲೇವಾದೇವಿ ಇತ್ತು. ಅದಕ್ಕಾಗಿ ಹೋಗೋಕೆ ಸಬಬ ಉಂಟು, ನನ್ನ ಥೊರೆ! ಆಯಿತೊ ಮತ್ತೆ ಆ ಹೆಂಗಸರಿಂದ ಅವನು ಗಾಸಯಾದ್ದಲ್ಲಾ! ಸುಮ್ಮಗಾದರೂ ಹೇಳೋಕೆ ಆಗದು. ಆಯಿತೋ! ಮಠ ಮಠದವರಿಗೆ ಜಿದ್ದು ಬಂದೈತೆ. ಅದರಿಂದಾಗ ಕಾಟ ಈ ಮುದಿ ಸಾಮಿಗೂ ಅವರು ಇಟ್ಟುಕೊಂಡ ಆ ಇಬ್ಬರೂ ಬಿರಾಮನ್ತಿರಿಗೂ, ಆಯಿತೊ ಏನಾದರೂ ಗಡಗಂಜಾಲ ಮಾಟಕೆ ಬ್ಯಾರೆ ನಾಲ್ಕುಮಠದವರು ನೋಡ್ತಾರೆ. ಅಪ್ಪಣೆಯಾದರೆ ಈಗ ಹೋಯಿತೇನೆ. ನನ್ನ ಮಗಳ ಮಗನಿಗೆ ಆಯಿತೋ ಈ ಹೊತ್ತು ಒಂದು ಮುಂಜಿ, ಆಯಿತೊ, ಮಾಡೋದೆಂತ ಸನ್ನಾಯ ಮಾಡಿದೆ. ಸ್ವಲ್ಪ ದೂರ ನಡಿಯೋಕೆ ಉಂಟು, ಆಯಿತೊ, ಸಲಾಂ.”

ದಾರಿಯಲ್ಲಿ ತನಗೆ ಕಾಣಿಸಿಕೊಂಡು ಮಾತಾಡಿಸಿಕೊಂಡ ಮುದುಕಿಯ ಆದಿಯಾಗಿ ಮಾಪಳೆ ವರಿವಿಗೂ ಕೊತ್ವಾಲನು ಶಾಬಯ್ಯನ ತಿಳುವಳಿಕೆಯಿಂದ ನಡೆಸಿದ. ಮೋಡಿಯೆಂಬ ಗುಟ್ಟು ತಿಳಿಯದ ವಿಮರ್ಶಾಧಿಕಾರಿಯು ಶಾಬಯ್ಯನು ಹೇಳಿದ ವೃತ್ತಾಂತ ಪೂರ್ಣವಾಗಿ ಸಿದ್ಧಾಂತವಾಯಿತೆಂಬ ಹರುಷದಿಂದ ಮುಗುಳು ನಗೆಮುಖದಿಂದ ಬಂದನು. ಆಗ ದಾರಿಯ ಬದಿಯಲ್ಲಿ ನರಿಗಳಂತೆ ಸಂದು ಮೂಲೆಯಲ್ಲಿ ನಿಂತು ಬಗ್ಗಿ ಸಲಾಂ ಮಾಡಿದ ಆ ಉಭಯ ಮೂರ್ತಿಗಳನ್ನು ನೋಡಿ ಇವರಂಥಾ ಪ್ರಾಮಾಣಿಕತೆಯುಳ್ಳವರು ತನ್ನ ಕೈಕೆಳಗೆ ಸರ್ಕಾರದ ಕೆಲಸ ನೋಡುವವರಲ್ಲಿ ಬೇರೆ ಯಾರೂ ಇಲ್ಲ, ಸುಮ್ಮಗೆ ದುರ್ಮತಿಗಳು ಅವರನ್ನು ದೂರುವರೆಂದು ಭಾವಿಸಿ “ಯೇನಪ್ಪಾ ಯೇನಾದರೂ ಪತ್ತೆ ದೊರಿಯಿತೇ” ಎಂದು ಪ್ರಶ್ನೆ ಮಾಡಿದನು.

ಹೆಣವನ್ನು ಎಲ್ಲಿ ಹೆಂಗೆ ವಿನಿಯೋಗ ಪಡಿಸಿ ಬಿಟ್ರು! ಅವನ್ನು ಹೊತ್ತು ಕೊಂಡು ಹೋದ ಹೊಲೆಯರು ಯಾವ ಊರಲ್ಲಿ ಮಕ್ಕಳು ಮರಿ ಸಮೇತ ಅವಿತುಕೊಂಡು ಬಿಟ್ಟವರೆ? ಈ ಸಮಾಚಾರ ಯಂಧಾ ವೈನ ನಡಿಸಿದರೂ ತಿಳಿದು ಬರುವದಿಲ್ಲ. ಆ ಹೆಂಗನೂ ಅವಳ ಮಿತ್ರರೂ ಇನ್ನೆಷ್ಟು ಚಮತ್ಕಾರಿಕ ಜನರೋ ದೇವರೇ ಬಲ್ಲ. ಖಾವಂದರು ಖುದ್ದಾಗಿ ವಿಚಾರಣೆ ಮಾಡಿ ನಾವು ಕಳ್ಳರೂ ಸುಬಗರೊ? ವಾಗ್ದೇವಿಯನ್ನು ಕಾಪಾಡುವದಕ್ಕೆ ದುರಾ ಚಾರಕರಾಗಿದ್ದೇವೊ, ಮಠದಲ್ಲಿಯೇ ಮೃತನಿಗೆ ಹಾನಿ ಬಂತೂ ಎಂಬ ವಿಷಯನಲ್ಲಿ ನಿಷ್ಕಷ್ವೆ ಮಾಡಿದರೆ ಆಗುತ್ತಿತ್ತೆಂದು ಭೀಮಾಜಿಯು ಬಿನ್ನ ವಿಸಿದನು.. “ನಾನೇನು. ಅವಿಚಾರಿಯೇ! ನನ್ನ ಕೈಲಾಗುವ ಮಟ್ಟಿನ ಸಮಾಚಾರವನ್ನು ನಡಕೊಳ್ಳುವದರಲ್ಲಿ ತಾತ್ಸಾರ ಮಾಡಿದವನಲ್ಲ. ನಡೆದ ವೃಂತ್ತಾಂತಶವೆಲ್ಲವೂ ನನ್ನ ತಿಳವಳಕೆಯಲ್ಲಿ ಸಂಪೂರ್ಣವಾಗಿ ಅದೆ. ಮಠ ದವರು ನಿರಾವರಾಧಿಗಳೇ ಸರಿ. ಮೃತನ ಹೆಂಡತಿಯ ದೆಸೆಯಿಂದಲೇ ಈ ಖೂನಿಕೃತ್ಯ ನಡೆದು ಅವಳ ಮಿತ್ರರ ಅಢ್ಯತೆ ಮತ್ತು ಚಮತ್ಕಾರದಿಂದ ಅದು ಅಡಗಲಿಕ್ಕೆ ಕಾರಣವಾಯಿತು. ಹೆಣವಿನ ವಿನಿಯೋಗ ಕುರಿತು ನಂಬಲಿಕ್ಕೆ ಸಾಕಾಗುವ ವರ್ತಮಾನವು ನನಗೆ ಸಿಕ್ಕಿಯದೆ. ಇನ್ನು ಈ ವಿಚಾರದಲ್ಲಿ ಮಾಡತಕ್ಕದ್ದೇನಿಲ್ಲ ಇಂಧಾ ಪ್ರಕರಣಗಳಲ್ಲಿ ಶವ ಸಿಕ್ಕದೆ ಇದ್ದರೆ ಶ್ರಮ ಪಡುವದು ನಿರರ್ಧಕವೇ. ನೀವು ಹೆಚ್ಚು ಪ್ರಯತ್ನಗಳನ್ನು ನಡೆಸುವದು ಇನ್ನೇನು ಅಗತ್ಯವೆಂದು ನನ್ನ ಮನಸ್ಸಿಗೆ ತೋಚುವದಿಲ್ಲ. ಸರ್ಕಾರದವರ ಕಡೆಯಿಂದ ಏನೂ ಕಸೂರಿ ನಡೆಯಲಿಲ್ಲ. ನಾನು ಒಳ ನೌಕರರ್ಯಾರಿಗೂ ದೂರುವುದಿಲ್ಲ. ವಿಮರ್ಶಾಧಿಕಾರಿಯು ಹೀಗೆಂದಾಗ ಸನ್ನಿಧಾನಕ್ಕೆ ಸಕಲ ವಿಷಯವೂ ಸರ್ವಜ್ಞನಂತೆ ಪರಾಂಬರಿಕೆಯಿರುವದರಿಂದ ತಮ್ಮ ಪಾದಸೇವಕರಾದ ನಮ್ಮ ಅನ್ನವೂ ಮರ್ಯಾದೆಯೂ ಉಳಿಯುವದಕ್ಕೆ ಅನುಕೂಲವಾಯಿತು. ಇನ್ನೊಬ್ಬರಾದರೆ “ಎತ್ತು ಕರುಹಾಕಿತೇ ಕೊಟ್ಟಿಗೆ ಯಲ್ಲಿ ಕಟ್ಟು” ಯೆಂತ ಹೇಳಿ ಬಿಟ್ಟು ನಮ್ಮನ್ನು ತ್ವಂಚಾ ಹಂಚ ಮಾಡಿ ಬಿಡುತ್ತಿದ್ದರು: ಪುಣ್ಯವಂತರಾದ ಖಾವಂದರ ದಯೆಯ ಪ್ರಭಾವದಿಂದ ಹ್ಯಾಗಾದರೂ ಕಾಲಕ್ಷೇಪ ಮಾಡಿಕೊಂಡು ಇರುತ್ತೇನೆ. ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಿಕ್ಕೆ ಶಕ್ತನಲ್ಲವೆಂದು ಭೀಮಾಜಿಯು ಚಂದಾಗಿ ಹೊಗಳಿದ ಕೂಡಲೇ ಕೊಂಚ ಸ್ತೌತ್ಯಪ್ರಿಯನಾದ ವಿಮರ್ಶಾಧಿಕಾರಿಯು ಹೆಚ್ಚಳಪಟ್ಟು ನೀವು ಸ್ವಸ್ಥ ಚಿತ್ತರಾಗಿರಿ, ಮನೆಗೆ ನಡೀರೆಂದು ಅಪ್ಪಣೆ ಕೊಟ್ಟು ತನ್ನ ಮನೆಗೆ ಮರಳಿ ಕಿರಿದಿವಾನರ ಅನುಚ್ಚೆಗಳ ಸಮೇತ ಬಂದಿರುವ ತಳ್ಳಿಯನ್ನು ಕುರಿತು ಕೊತ್ವಾಲನನ್ನು ಕಾರಭಾರಿಯನ್ನು ಗಟ್ಟಿಯಾಗಿ ಆಧರಿಸಿ ಉತ್ತರ ಬರೆದನು.

ಆ ಜವಾಬನ್ನು ಕಿರಿದಿವಾನರಿಗೆ ಮುನಶಿಯು ಓದಿ ಹೇಳಿದನು. ಸರಿ ನಡಿ, ಇನ್ನೇನು ಅನುಮಾನ ಪಡತಕ್ಕ ಕಾರಣವಿಲ್ಲ. ಮೃತನ ಹೆಂಡತಿ ಕೆಟ್ಟ ಮುಂಡೆ, ಅವಳನ್ನು ಆನೆ ಕಾಲಿಗೆ ಕಟ್ಟಿ ತುಳಿಸಿ ಬಿಟ್ಟರ ಲೋಕದಲ್ಲಿ ಕೀರ್ತಿ ಬರುವದು. ಇರಲಿ ಈಗಿನ ನ್ಯಾಯಶಾಸ್ತ್ರ ಬಹು ಸೂಕ್ಷ್ಮವಾಗಿರು ವುದರ ದೆಶೆಯಿಂದ ಪೂರ್ವಕಾಲದ ನಡವಳಿಕೆಯು ಹಳೆದಾಗಿ ಮರ್ಯಾದೆ ಇಲ್ಲದೆ ಮೂಲೆ ಸೇರಿ ಹೋಯಿತು. ಶಿವಾ ಶಿವಾ” ಎಂದು ಕಿರಿ ದಿವಾನನು ಪಶ್ಚಾತ್ತಾಪ ಪಡುತ್ತಿರುವ ಸಮಯದಲ್ಲಿ ಶಿವನಾಮೋಚ್ಚಾರವು ಅರೆನಿದ್ರೆ ಗಣ್ಣಿನಿಂದ ಆಸನದಲ್ಲಿ ಕೂತಿರುತಿದ್ದ ಹಿರಿ ದಿವಾನನ ಕಿವಿಗೆ ಬಿತ್ತು. ಅವನು ಸತ್ಪರ ಎರಡು ಕಿವಿಗಳಿಗೂ ಕೈ ಬೆರಳುಗಳನ್ನು ಸೇರಿಸಿ ಬಿಟ್ಟು ರಾಮ ನಾಮೋಚ್ಚಾರಣೆಯಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳುವದರಲ್ಲಿ ಬಿದ್ದನು. ಅಂತೂ ಇಂತೂ ಮಠದಲ್ಲಿ ಶೃಂಗಾರಿಯ ದೆಸಯಿಂದ ನಡೆದ ಖೂನಿಯೊಂದು ದಕ್ಕಿಯೇ ಹೋಯಿತು. ನಿರಪರಾಧಿಯಾಗಿ ಪತಿಯ ದುರ್ಮರಣದ ಕಾರಣ ದಿಂದ ದುಃಖದಲ್ಲಿ ಮುಳುಗಿ ಕಷ್ಟ ಪಡುವ ಮೃತನ ಹೆಂಡತಿಯ ಮೇಲೆ ಮಿಥ್ಯಾಪವಾದ ಬಿದ್ದು ಅವಳಿಗೆ ದಷ್ಕೀರ್ತಿ ಬರುವದಾಯಿತು. ಇದೊಂದು ಷಟ್ಪುರರಾಜ್ಯಕ್ಕೆ ಬಂದ ಅರಿಷ್ಟವೆನ್ನ ಬೇಕೆಂದು ಸಂಭಾವಿತರನೇಕರು ತಮ್ಮಷ್ಟಕ್ಕೆ ಹೇಳಿಕೊಂಡರು. ತಳ್ಳಿಯ ಉದ್ದೇಶವು ನೆರವೇರಿತು. ಚತುರ್ಮಠದವರ ಮೇಲೆ ವಿಮರ್ಶಾಧಿಕಾರಿಗೆ ವೈರಭಾವ ಹೆಚ್ಚಾಗಿ ಮುಂದೆ ಅವರ ಕಾರ್ಯಗಳೆಲ್ಲಾ ಹಾನಿಯಾಗಲಿಕ್ಕೂ ಕುಮುದಪುರ ಮಠಾಧಿಪತಿಯ ಹಟವು ನಡೆಯುನದಕ್ಕೆ ಸರ್ವಾನುಕೂಲ ಸಿಕ್ಕುವದಕ್ಕೂ ಸುಲಭವಾಯಿತು.

ರಾಮದಾಸರಾಯನು ಶಾಬಯ್ಯನ ದರ್ಭಾಷೆಯಿಂದ ಪ್ರಕೋಪವೆಬ್ಬಿಸಲ್ಪಟ್ಟವನಾಗಿ ಕೊತ್ವಾಲನ ಮಧ್ಯಸ್ಥಿಕೆಯನ್ನು ನಡೆಯಬಿಡದೆ ನೇಮ ರಾಜನ ಖೂನಿಯನ್ನು ಕುರಿತು ಮೃತನ ಹೆಂಡತಿಯಿಂದ ಹೊಂದಿದ ವಕಾಲತ್ತನ್ನು ಬಿಸುಟು ಹೋದನೆಂದು ಹಿಂದೆ ಹೇಳಿಯದೆ. ಈ ವಕೀಲನು ತಡೆಯದೆ ನೃಸಿಂಹಪುರಕ್ಕೆ ಹೋದನು. ಅಲ್ಲಿರುವ ಇಷ್ಟ ಮಿತ್ರರಿಗೂ ಮಠಾಧಿಪತಿಗೂ ನೇಮರಾಜನ ಮರಣದ ಸಮಾಚಾರವನ್ನೂ ಕುಮುದ ಪುರದಲ್ಲಿ ವಾಗ್ದೇವಿಯ ಪಕ್ಷವಾಗಿ ಮುಖ್ಯಾಧಿಕಾರಿಗಳು ನಡೆಸುವ ವಿಚಾ ರಣೆಯ ಚರಿತ್ರೆಯನ್ನೂ ವರ್ಣಿಸಿ ಬಳಿಕ ತನಗೆ ಶಾಬಯ್ಯನಿಂದ ಆದ ಅವಮರ್ಯಾದಿಯ ವಿಷಯದಲ್ಲಿ ಮುಯ್ಯುಗೆಮುಯ್ಯಿ ತೀರಿಸಿಕೊಳ್ಳಲಿಕ್ಕೆ ಪ್ರತಿಜ್ಞೆ ಮಾಡಿಕೊಂಡಿರುವೆನೆಂದು ಪಟ್ಟಾಂಗ ಕೊಚ್ಚಿದನು. ಕಾರಭಾರಿಯ : ದೂರು ಕಾಣಿಸಿ ಒಂದು ದೊಡ್ಡ ಮನವಿಯನ್ನುಬರೆದು ರಾಜದ್ವಾರಕ್ಕೆ ತಾನೇ ಹೋಗಿ ಅದನ್ನು ಕೊಟ್ಟು ಬರುವೆನೆಂದು ಹೊರಟು ಖರ್ಚಿಗೆ ಕೊಂಚ ದ್ರವ್ಯಸಹಾಯವನ್ನು ಅಪೇಕ್ಷಿಸುವದಕ್ಕೆ ನೃಸಿಂಹ ಮಠಾಧಿಪತಿಗಳ ಮುಂದೆ ದಂಡಪ್ರಣಾಮ ಮಾಡಿ ನಿಂತುಕೊಂಡನು.

ಅವರು. ಸಮಗ್ರ ಪೂರ್ವೋತ್ತರವನ್ನು ವಿಚಾರಿಸಿ ತಿಳಕೊಂಡು “ಅಯ್ಯಾ, ಹುಡುಗನೇ, ಅವಸರ ಮಾಡಿ ಸಿಕ್ಕಿಬೀಳಬೇಡಾ. ರಾಜಸೇವಕ ರು ವಿಷಜಂತುಗಳಂತೆ ತುಂಬಾ ನಂಜುಳ್ಳವರು. ಅವರ ಕೂಡೆ ಸೆಣಸಾಟ ಸಲ್ಲದು. ನಿನ್ನ ಉಪಜೀವನವೂ ಅವರ ಕೂಡೆ ಅನುನಯವಾಗಿ ನಡ ಕೊಳ್ಳುವ ಸುಗುಣದ ಮೇಲೆ ಪೂರ್ಣವಾಗಿ ಆಧರಿಕೊಂಡಿರುತ್ತಾ ಉನ್ಮಾದ ದಿಂದ ಪತಂಗದಂತೆ ಬೆಂಕಿಯಲ್ಲಿ ಬಿದ್ದು ಹಾನಿ ಪಡಬೇಡ. ಸಂದರ್ಭ ಮುಂದೆ ಸಿಕ್ಕಲಾರದೆನ್ನಬಹುದೇ? ಆಗ ದ್ವಿಗುಣವಾಗಿ ಮುಯ್ಯಿಗೆ ಮುಯ್ಯಿ ತೀರಿಸಿಕೋ ಬಹುದು. ತಾಳಿದವ ಬಾಳ್ಯಾನೆಂಬ ಅನುಭವಸಿದ್ದವಾದ ವಚನ ಕೇಳರಿಯೆಯಾ?” ಎಂದು ಸನ್ಯಾಸಿಗಳು ರಾಮದಾಸನಿಗೆ ಬುದ್ಧಿ ಹೇಳಿದರು.

ಅವರೆ ಮುಖ್ಯ ಉದ್ದೇಶವು ರಾಮದಾಸನು ಕೇಳುವ ದ್ರವ್ಯವನ್ನು ಉಳಿಸಿಕೊಳ್ಳಬೇಕೆಂಬದಾದರೂ ಅವರು ಹೇಳಿದ ಬುದ್ಧಿಯು ಯಾರೂ ಸಮ್ಮತಿಸತಕ್ಕದ್ದಾದುದರಿಂದ ಅದನ್ನು ಅನುಸರಿಸುವದು ಉತ್ತಮವೆಂದು ರಾಮದಾಸನಿಗೆ ಹಲವರು ಹೇಳಿದರು. ಪರಂತು ಅವನು ಕೇಳದೆ ಉಳಿದ ಮೂವರು ಮಠಾಧಿಪತಿಗಳನ್ನು ಕಾಡುವುದಕ್ಕೆ ಹೋದ ವರ್ತಮಾನವನ್ನು ತಿಳಿದು, ಅವರೆಲ್ಲರಿಗೂ ಅಂತರಂಗದಿಂದ ತಮ್ಮ ಮನೋಗತವನ್ನು ನೃಸಿಂಹ ಮಠದ ಅಧಿಪತಿಗಳು ತಿಳಿಸಿದ ದೆಸೆಯಿಂದ ಅವರ್ಯಾರೂ ಇವನ ಹುಳಿ ರಗ ಳೆಗೆ ಕಿವಿಕೊಡದೆ ಹೋದರು. ವಕೀಲನು ಕುದಿಯುವ ಕ್ರೋಧದಿಂದ ಮರಳಿ ಮನೆ ಸೇರಿ ಕುಮುದಪುರದ ಸನ್ಯಾಸಿಯ ಪಕ್ಷಕ್ಕೆ ಸೇರಿ ಚತುರ್ಮಠ ದವರನ್ನು ಕುಣಿಸಿ ಬಿಡುವೆನೆಂದು ರವಧ ಹಾಕಿಕೊಂಡನು. ಇದು ಆ ಮಠ ದವರ ಕಿವಿಗೆ ಬಿತ್ತು. ಅವರೆಲ್ಲರೂ ಒಟ್ಟು ಗೂಡಿ ಅವನನ್ನು ಜಾತಿಯಿಂದ ತೆಗೆ ದಿಡಲಿಕ್ಕೆ ಉದ್ಯುಕ್ತರಾದರು.

ಉತಾವಳಿಯಲ್ಲಿ ಪ್ರಥಮವೀಳ್ಯದವನಾದ ರಾಮದಾಸನ ಪ್ರತಿಷ್ಠೆಯು ವ್ಯರ್ಥವಾಗಿ ಕೆಟ್ಟು ಇವನ ಭವಿಷ್ಯವೇ ಹಾಳಾಗುವಧೆಂಬ ಹೆದರಿಕೆಯಿಂದ ಮುದುಕನಾದ ಅವನ ತಂದೆಯು ಮಗನನ್ನು ಸಂಗಡ ಕಟ್ಟಿಕೊಂಡು ಅವನ ಮೇಲೆ ಮುನಿದ ಸನ್ಯಾಸಿಗಳಿಗೆ ಪಾದಾಕ್ರಾಂತನಾಗಿ ತನ್ನ ವೃದ್ಧಾಪ್ಯವನ್ನು ಲಕ್ಷಿಸಿ ಅವನನ್ನು ಕ್ಷಮಿಸಬೇಕೆಂದು ಬೇಡಿಕೊಂಡನು. ಕೊಂಚ ವಾಛಾಟವಾದ ಮೇಲೆ ಇನ್ನು ಮುಂದೆ ನಾಲ್ಕು ಮಠದವರ ಮೇಲೆ ಭಕ್ತಿಯಿಂದ ನಡ ಕೊಂಡರೆ ಶ್ರೇಯಸ್ಸೂ ಧನ ಲಾಭವೂ ದೊರೆಯುವದು. ಅಡ್ಜಾದಿಡ್ಡಿಯಾಗಿ ನಡಕೊಂಡರೆ ತೀರಾ ತ್ಯಜಿಸಿ ಬಿಡೋಣಾದೀತೆಂದು ಅವರು ಎಚ್ಚರಿಸಿ ಬಿಟ್ಟರು. ಆದರೆ ಅವನ ಮೇಲೆ ಅವರಿಗೆ ವಿಶ್ವಾಸವು ಸಹಜವಾಗಿ ಕಡಿಮೆ ಯಾಯಿತು. ಮುಖ್ಯತ ಉಪದ್ರಕಾರಿ ಮಾತ್ರವಲ್ಲ, ತಮ್ಮ ಗುಟ್ಟು ಸ್ವಲ್ಪವಾದರೂ ತಿಳಿದಿರುವವನಾದುದರಿಂದ ಅವನು ತಮ್ಮ ಎದುರು ವಾದಿಯ ಪಕ್ಷಕ್ಕೆ ಸೇರುವದು ಪ್ರಶಸ್ತವಲ್ಲವೆಂದು ತೋರಿದ ಕಾರಣ ಅವರು ಅವನನ್ನು ತಮ್ಮ ಕಡೆಯ ವಕೀಲನೆಂದು ಹೇಳಕೊಳ್ಳಲಿಕ್ಕೆ ಬಿಟ್ಟರೂ ಮುಂದೆ ನಡಿಯಲಿಕ್ಟಿರುವ ದೊಡ್ಡ ದೊಡ್ಡ ವ್ಯವಹರಣೆಗಳಲ್ಲಿ ಈ ಕೊರಳು ಕೋಐಕ ನೊಬ್ಬನನ್ನೇ ನಂಬಿದರೆ ತಮ್ಮ ಕಾರ್ಯಗಳೆಲ್ಲಾ ಕಾಕತ್ರವಾಗಿ ಹೋಗುವ ವೆಂಬ ಭಯದಿಂದ ಕುಮುದಪುರದಲ್ಲಿ ವಾಸವಾಗಿರುವ ಹೆಸರುಹೋದ ವಕೀಲ ಕೋದಂಡಪಾಣಿರಾಯನನ್ನು ತಮ್ಮ ಕಡೆಯಿಂದ ವ್ಯವಹರಿಸಲಿಕ್ಕೆ ನೇಮಿಸಿ ಅವನ ಸಂಗಡ ರಾಮದಾಸನು ಕೂಡಿ ನಡೆಯಬೇಕೆಂದು ಆಜ್ಞಾ ಪಿಸಿದರು.

ಇಲ್ಲಿ ವಿವರಿಸುವ ಚರಿತ್ರೆಯ ಮುಂದಿನ ಅನುಸಂಧಾನವನ್ನು ವಾಚ ಕರು ಚೆನ್ನಾಗಿ ತಿಳಿಯುವದಕ್ಕೆ ಸಂದರ್ಭವಾಗುವಂತೆ ಇದರ ಮೊದಲೇ ಪ್ರಸ್ತಾಸಿಸಲ್ಪಟ್ಟ ಪಂಚಮಠಗಳ ಉತ್ಪತ್ತಿಯನ್ನು ಕುರಿತು ಐತಿಹ್ಯವನ್ನು ಸಂಕ್ಷೇಪವಾಗಿ ತಿಳಿಸುವ ಅಗತ್ಯವಿದೆ.

ಪ್ರಾಚೀನ ಕಾಲದಲ್ಲಿ ವಸಂತನಗರದ ಮೃದಂಗಪೇಟೆ ಎಂಬ ಉಪ ನಗರದಲ್ಲಿ ಶ್ರೀಧರಭಟ್ಟನೆಂಬ ಪರಮಭಕ್ತನಾದ ಗೀರ್ವಾಣ ಪಂಡಿತ ನೊಬ್ಬನು ಖ್ಯಾತಿನಂತನಾಗಿ ಬದುಕಿಕೊಂಡಿದ್ದನು. ಅವನಿಗೆ ಹುಟ್ಟಿದ ಗಂಡು ಮಕ್ಕಳಲ್ಲಿ ಚೊಚ್ಚಲ ಮಗ ಶಾರ್ಙ್ಗಪಾಣಿ ಎಂಬ ಯೌವನಸ್ಥನು ಕಡುಮೂರ್ಖನಾಗಿದ್ದನು. ಅವನು ಹೆತ್ತವರ ಮಾತನ್ನು ಒಂದು ಸಲವಾ ದರೂ ಮನ್ನಿಸದೆ. ಒಬ್ಬನಿಂದಾದರೂ ಒಳ್ಳೆ ಯವನೆನ್ಸಿಸಿಕೊಳ್ಳದೆ ಸಹಿಸ ಕೂಡದ ಲೂಟಿಯಲ್ಲಿ ಅಮರಿಕೊಂಡು ಕಾಲ ಕಳೆಯುತ್ತಿದ್ದನು ಅವನ ಬುದ್ಧಿಯನ್ನು ತಿದ್ದುವದಕ್ಕೆ ತಂದೆಯು ನಡೆಸಿದ ಹಲವು ಯುಕ್ತಿಗಳು ನಿರರ್ಥ ಕವಾದ ದೆಸೆಯಿಂದ ಅವನು ಮಗನ ಗೊಡವೆಯನ್ನು ಬಿಟ್ಟು ಸುಮ್ಮ ಗಾದನು.

ಈ ಹುಡುಗನಿಗೆ ಷೋಡಶ ವರ್ಷ ಪ್ರಾಯ ತುಂಬುವ ಸಮಯ ಅವನು ಮಿತಿಮಾರಿ ಉಪದ್ರವಕಾರಿಯಾದುದರಿಂದ ಅವನನ್ನು ಆ ಊರಿನಿಂದ ಹೇಗೆ ಹೊರಡಿಸಿಬಿಡೋಣ ಎಂಬ ವಿಚಾರವು ಅಲ್ಲಿಯ ನಿವಾಸಕರಿಗೆ ಗಲಿಬಿಲಿ ಯನ್ನು ಹುಟ್ಟಿಸಲಿಕೆ ಹತ್ತಿತು. ಒಂದಾನೊಂದು ದಿನ ಅಕಸ್ಮಾತ್ತಾಗಿ ಶಾರ್ಙ್ಗಪಾಣಿಯು ವಿಹಾರಾರ್ಥನಾಗಿ ಸಣ್ಣದೊಂದು ವನವನ್ನು ಪ್ರವೇಶಿಸಿ ತನ್ನ ಚಂಚಲವಾದ ಕೈಗಳಿಗೆ ಯಾವ ಉದ್ಯೋಗವನ್ನು ಕೊಡುವದೆಂದು ತಿಳಿಯದೆ ಅತ್ತಿತ್ತ ನೋಡಿಕೊಂಡಿದ್ದನು. ಒಂದು ಮರದ ಕೊಂಬೆಯಲ್ಲಿ ಚಲೋದಾದ ಪಕ್ಷಿಗಳ ಗೂಡೊಂದು ಅವನ ದೃಷ್ಟಿಗೆ ಬಿತ್ತೇಬಿತ್ತು. ಆಗ ಅವನ ದುಸ್ಟಭಾವವು ಅವನನ್ನು ಸುಮ್ಮಗಿರಬಿಡಲಿಲ್ಲ.

ಅರೆ ಘಳಿಗೆ ತಾಮಸ ಮಾಡದೆ ಅವನು ಆ ಗೂಡನ್ನು ಎಳೆದು ಕೆಳಗೆ ಬಿಸುಟು ಅದರ ಶೋಧವನ್ನು ಮಾಡಲಾರಂಭಿಸಿದನು. ಅದರೊಳಗೆ ಇರು ತ್ತಿದ್ದ ಹೆಣ್ಣು ಗಂಡು ಪಕ್ಷಿಗಳು ಜೀವದಾಶೆಯಿಂದ ಹಾರಿಹೋದುವು. ಸಂಪೂರ್ಣವಾಗಿ ಬೆಳೆದ ಮೊಟ್ಟೆಗಳು ಅದರಲ್ಲಿಯೇ ಇದ್ದವು. ಅವುಗಳೆಲ್ಲಾ ಕಲ್ಲಿನ ಮೇಲೆ ಬಿದ್ದು ಚಾನಾಹಾನಿಯಾದವು. ನಾಶವಾದ ಮೊಟ್ಟೆಗಳನ್ನು ನೋಡಿ ಮೂಕ ಪ್ರಾಣಿಗಳಾದ ಉಭಯ ಪಕ್ಷಿಗಳು ಪಡುವ ಶೋಕವಹ್ನಿಯು ಒಡನೆ ಅವನನ ಜ್ಞಾನಚಕ್ಸುವನ್ನು ತೆರೆಯಿತು. ವೈರಾಗ್ಯವು ಪೂರ್ಣವಾಗಿ ಅವನ ಮನಸ್ಸಿನಲ್ಲಿ ನೆಲೆಯಾಯಿತು. ಇನ್ನು ಛಾನಸ ಮಾಡದೆ ಮನೆಗೆ ಮರಳಿ ಮಾತಾಪಿತೃಗಳ ಸನ್ನಿಧಿಯಲ್ಲಿ ನಿಂತು ತೀರ್ಥಾಟಣೆಗೆ ಅಪ್ಪಣೆಯನ್ನು ಬೇಡಿಕೊಂಡನು. ವಿನೋದಕರವಾಗಿ ಏನೋ ಅಂದುಕೋಥಾನೆ ಎಂಬ ಊಹೆಯಿಂದ “ಸರಿ ಸರಿ ಒಳ್ಳೇ ಮಾತು? ಎಂದು ಹಾಸ್ಯಕರವಾಗಿ ಒಂದು ಉತ್ತರವು ತಂದೆಯ ಬಾಯಿಯಿಂದ ಹೊರಟತು. ತಾಯಿಯು ಮೌನ ತಾಳಿದಳು.

“ಅಪ್ಪಣೆ” ಎಂದು ಶಾರ್ಙ್ಗಪಾಣಿಯು ಹೆತ್ತವರಿಗೆ ಭಕ್ತಿಯಿಂದ ಅಡ್ಡ ಬಿದ್ದು ಮನೆಗೆ ಬೆನ್ನುಹಾಕಿದನು. ಅವನು ಊರಿನಲ್ಲೆಲ್ಲಿಯೂ ನಿಲ್ಲದೆ ಅರಣ್ಯಗಳನ್ನು ಹೊಕ್ಕು ಕಂದಮೂಲಾದಿಗಳಿಂದಲೂ ಹಣ್ಣು ಹಂಪಲು ಗಳಿಂದಲೂ ಕ್ಷುಥೆಯನ್ನು ನಿವಾರಣೆ ಮಾಡಿಕೊಳ್ಳುತ್ತಾ ನಾನಾ ತೀರ್ಥ ಯಾತ್ರೆಗಳನ್ನು ಮಾಡಿ ಬದರಿಕಾಶ್ರಮಕ್ಕೆ ತಲಪಿದನು. ಬದರಿ ನಾರಾಯಣ ದೇವರ ಸನ್ನಿಧಿಯಲ್ಲಿ ಏಕಾಗ್ರಚಿತ್ತದಿಂದ ಉಗ್ರತಪಸ್ಸನ್ನು ಮಾಡುವ ಕಾಲ ದಲ್ಲಿ ಅವನ ಭಕ್ತಿಗೆ ನಾರಾಯಣಮೂರ್ತಿಯು ಒಬ್ಬ ವ್ಯಾಧನ ರೂಪವನ್ನು ಧರಿಸಿ ಬೇಟೆಯಾಡುವ ರಭಸಕ್ಕೆ ತಪಸ್ವಿಯು ಒಮ್ಮಿಂದೊಮ್ಮೆ ಕಣ್ಣು ತೆರೆದು ನೋಡಿದನು. ವ್ಯಾಧನು ಕೈಯಲ್ಲಿ ಒಂದು ಚಿಕ್ಕ ಪಕ್ಷಿಯನ್ನು ಹಿಡಿದುಕೊಂಡು ಅದರ ಕೊರಳನ್ನು ಕ್ರೂರವಾಗಿ ಅಮಕುವದಕ್ಕೆ ಹತ್ತಿದನು. “ಏನಿಷ್ಠರುಣಿ! ನನ್ನ ಕಣ್ಣು ಮುಂದೆ ನಿಲ್ಲದೆ ನಡೆದು ಬಿಡು. ಇಲ್ಲವಾದರೆ ನಿನ್ನನ್ನು ಈಗಲೇ ಶಪಿಸಿಬಿಡುವೆನು? ಎಂದು ಮಹಾ ಸಿಟ್ಟಿನಿಂದ ಬ್ರಾಹ್ಮಣನು ಗರ್ಜಿಸಿದನು. ನಾರಾಯಣನು ತನ್ನ ದಿವ್ಯ ರೂಪವನ್ನು ತೋರಿಸಿ ನಸುನಗೆಯಿಂದ-“ಇಗೋ ಪ್ರಸನ್ನನಾದೆ” ಎಂದು ನುಡಿದನು. ಶಾರ್ಜ್ಗಪ್ರಾಣಿ ಸಾಷ್ಟಾಂಗವೆರಗಿ ತಾನು ಸಿಟ್ಟಿನ ವಶವಾದ ಅಪರಾಧವನ್ನು ಕ್ಷಮಿಸಬೇಕೆಂದು ಪಾದಾಕ್ರಾಂತನಾದನು. ನಾರಾಯಣನು ಏನು ಅಫ್ಪಣೆ ಕೊಟ್ಟನೆಂದರೆ:-

“ಶಾರ್ಙ್ಗಪಾಣಿಯೇ! ನಿನ್ನ ತಪಸ್ಸಿಗೆ ಮೆಚ್ಚಿಯವೆನು. ಪರಂತು ಷಡ್ವೈರಿಗಳಲ್ಲಿ ಕ್ರೋಧಒಂದನ್ನಲ್ಲದೆ ಉಳಿದವುಗಳನ್ನು ಜಯಿಸಿದೆ. ನಿನ್ನ ಪೂರ್ವಜನ್ಮ ಕೃತಪಾಪವು ಬಲಿತ ಕಾರಣ ಕ್ರೋಧವು ನಿರ್ಗತವಾಗಲಿಲ್ಲ. ಇದಕ್ಕಾಗಿ ಇನ್ನು ಸಂತಪ್ತನಾಗದಿರು ಈಗಲೇ ಈ ಸ್ಥಳವನ್ನು ಬಿಟ್ಟು ನೈಮಿಷಾರಣ್ಯಕ್ಕೆ ನಡೆ. ಅಲ್ಲಿ ಸಮಸ್ತ ಋಷಿಗಳ ದರ್ಶನವು ದೊರೆಯುವುದು. ಅಲ್ಲಿಯೇ ನಿನಗೆ ಸನ್ಯಾಸವೂ ಪ್ರಾಪ್ತಿಯಾಗುವದು. ಬಳಿಕ ಷಟ್ಟುರನಗರಕ್ಕೆ ಮರಳು. ಅಲ್ಲಿ ಸೀನು ಮಾಡತಕ್ಕ ಕಾರ್ಯವಾವುದೆಂದು ಕೇಳು ಪಂಚ ವೈರಿಗಳನ್ನು ನೀನು ಸಂಪೂರ್ಣವಾಗಿ ದಮನ ಮಾಡಿದ ತಾರ್ಕಣೆಗಾಗಿ ಐದು ಮಠಗಳನ್ನು ಸ್ಥಾಪಿಸು. ಪ್ರತಿ ಒಂದು ಮಠಕ್ಕೆ ಒಂದು ಆಶ್ರಮವನ್ನು ಕೊಡು; ಅವುಗಳ ವೃದ್ಧಿಯ ಉಪಾಯವನ್ನು ಜಾಗ್ರತೆಯಿಂದ ನಡಿಸು. ನನ್ನ ಪ್ರೀತ್ಯರ್ಥವಾಗಿ ಒಂದು ದೇವಾಲಯವನ್ನು ಕಟ್ಟಿ ಅದರ ವಿನಿಯೋಗ ಕ್ಯೋಸ್ಕರ ಶಾಶ್ಚತವಾದ ಅಚ್ಚುಕಟ್ಟು ಮಾಡಿ ಬಿಡು. ಈ ದೇವಾಲಯವನ್ನು ಪಂಚ ಮಠದವರು ತಮ್ಮ ಮೂಲಾಧಾರವೆಂದು ತಿಳಕೊಂಡು ನಡಕೊಳ್ಳಲಿ. ನನ್ನ ಆಜ್ಞೆಯನ್ನು ಅನುವರ್ತಿಸಿ ಷಡ್ವೈರಿ ದಮನಾಚಾರ್ಯನೆಂಬ ನಾಮ ನನ್ನು ಧರಿಸಿ ಸ್ವಮತಾಭಿಮಾನಭರಿತನಾಗಿ ಕೀರ್ತಿಯನ್ನು ಗಳಿಸಿ ಅಂತ್ಯದಲ್ಲಿ ನನ್ನಲ್ಲಿ ಐಕೃತೆಯನ್ನು ಹೊಂದುವಿ.” ಹೀಗೆಂದು ನಾರಾಯಣನು ಅಂತ ರ್ಧಾನನಾದನು.

ಶ್ರೀಮನ್ನಾರಾಯಣನ ಅಪ್ಪಣೆಯನ್ನು ಪೂರ್ಣವಾಗಿ ಅನುಸರಿಸಿ ಸನ್ಯಾಸವನ್ನು ಹೊಂದಿದ ತಪಸ್ವಿಯು ಷಡ್ವೈರಿ ದಮನಾಚಾರ್ಯರೆಂಬ ಹೆಸರಿನಿಂದ ಷಟ್ಟುರ ನಗರವನ್ನು ಪ್ರವೇಶಿಸಿ ಪಂಚಮಠಗಳನ್ನು ಸ್ಥಾಪಿಸಿ ದನು. ಅವುಗಳ ಅಭಿವೃದ್ಧಿಗೋಸ್ಟರ ಬಹು ಜಾಗ್ರತೆಯಿಂದ ಸೂತ್ರಗಳನ್ನು ರಚಿಸಿ ಕಾಳಿಕಾನದಿಯ ಸಂಬಂಧ ಪುಣ್ಯಕ್ಷೇತ್ರವಾದ ಕುಮುದಪುರದಲ್ಲಿ ಆದಿನಾರಾಯಣ ಮೂರ್ತಿಯನ್ನು ಪ್ರತಿಷ್ಠೆಮಾಡಿ ಆ ಹೆಸರಿನ ದೇವಾಲಯ ವನ್ನು ಕಟ್ಟಸಿ ಅಮಿತ ಕೀರ್ತಿಯನ್ನು ಪಡೆದನು. ಈ ಆಚಾರ್ಯನಿಂದ ಏರ್ಪಡಿಸೋಣಾದ ಅನೇಕ ವಿಧಿಗಳಲ್ಲಿ ಪ್ರಕೃತದ ಅನುಸಂಧಾನಕ್ಕೆ ಪ್ರಾಸಂಗಿಕವಾಗಿರುವದೊಂದನ್ನು ಇಲ್ಲಿ ವಿವರಿಸೋಣ.

ಪ್ರತಿ ಒಂದು ಮಠದಿಂದ ಆಶ್ರಮಹೊಂದಿದ ಶಿಷ್ಯನು ಗುರುಮಠದಲ್ಲಿ ಗುರುವಿನಾಜ್ಞೆಗನುಸಾರವಾಗಿ ಶಿಕ್ಷಣವನ್ನು ಹೊಂದಿದ ತರುವಾಯ ದಿಗ್ವಿ ಜಯಕ್ಕೆ ಹೊರಡುವ ಮುಂಚೆ ಆದಿನಾರಾಯಣ ದೇವಾಲಯಕ್ಕೆ ಚಂದ್ರ ತಾರಾಬಲನೋಡಿ ಉತ್ತರಾಯಣ ಪ್ರಾರಂಭದಲ್ಲಿ ಆಡಂಬರದಿಂದ ಪ್ರವೇಶಿಸ ಬೇಕು. ಮಹೋತ್ಸವಗಳನ್ನು ನಿಯಮಿತ ಕಾಲಾಂತರಗಳಲ್ಲಿ ನಡೆಸಿ ಅಲ್ಲಿ ಒಂಭತ್ತುಮಾಸಗಳ ಪರಿಯಂತರ ದೇವರ ಸನ್ನಿಧಿಯಲ್ಲಿ ನೇಮಮಾಡಿ ಕೊಂಡಿದ್ದ ಬಳಿಕ ಒಂದು ವರ್ಷದೊಳಗೆ ದಿಗ್ವಿಜಯವನ್ನು ಮಾಡಿ ಮರಳಿ ಮಠವನ್ನು ಪ್ರವೇಶಿಸಿ ‘ ಶಿಷ್ಯ ಸಮೂಹದ ಮೇಲೆ ವಿಚಾರಸಚಾರ ನಡೆಸಬಹುದು.

ಈ ವಿಧಿಯನ್ನು ಕೈಕೊಳ್ಳದ ಸನ್ಯಾಸಿಯು ಮಠಾಧಿಪನಾಗಿ ಆಳುವು ದಕ್ಕೆ ಸರ್ವಧಾ ಅರ್ಹನಾಗನು. ಇಂಥ ದೊಡ್ಡ ಇಕ್ಕಟ್ಟಿನಿಂದ ಪಾರಾಗುವ ಮೊದಲು ಒಬ್ಬ ಸನ್ಯಾಸಿಯು ತನ್ನ ಗುರುವಿನ ಉತ್ತರಾಧಿಕಾರಿಯಾಗಲಿಕ್ಕೆ ಸಂದರ್ಭವಿಲ್ಲವಷ್ಟೆ. ಹೀಗಾಗಿ ಸೂರ್ಯನಾರಾಯಣನನ್ನು ದಣಿಸಲಿಕ್ಕೆ ಶತ್ರುಗಳಿಗೆ ಪರಮೋತ್ತಮವಾದ ಅನುಕೂಲ ಸಿಕ್ಕಿತು.

ಸೂರ್ಯನಾರಾಯಣನ ಆಶ್ರಮವನ್ನು ವಿರೋಧಿಸುವ ನಾಲ್ಕು ಮಠ ದವರು ಅದನ್ನು ಸಮ್ಮತಿಸದೆ ಹೊಸ ಆಶ್ರಮವನ್ನು ಕೊಡಿಸಿರುವ ಪ್ರಯುಕ್ತ ಸೂರ್ಯನಾರಾಯಣನನ್ನು ಗುರುಗಳ ಸಂಗಡವಾಗಲೀ ಪ್ರತ್ಯೇಕವಾಗಿ ಯಾಗಲೀ ಆ ದೇವಸ್ಥಾನ ಪ್ರವೇಶಿಸಲಿಕ್ಕೆ ಯತ್ನಿಸುವ ಕಾಲದಲ್ಲಿ ದೊಡ್ಡ ದೊಂದು ಜಗಳ ಹತ್ತುವ ಸಂಭವವು ಒದಗದೇ ಇರದು. ಅದರ ನಿವಾರ ಣೆಯ ಹಾಗೂ ತಮ್ಮ ತಮ್ಮ ಹಟ ನಡಿಯುವ ಉಪಾಯವನ್ನು ಮಾಡು ವದಕ್ಕೆ ಉಭಯಪಕ್ಷದವರು ಪವಿತ್ರಕರ್ತರಾದರು. ಯಾಕೆಂದರೆ ಕುಮುದ ಪುರದ ಮಠದ ಶಿಷ್ಯನು ಆದಿನಾರಾಯಣಾಲಯವನ್ನು ಪ್ರವೇಶಿಸಬೇಕಾದ ಕಾಲವು ಬಹಳ ದೂರವಿರಲಿಲ್ಲ. ಇತ್ತಂಡದವರು ತಮ್ಮ ಪಂಥವನ್ನು ನಡೆಸುವುದಕ್ಕೆ ನಾನಾ ಉಪಾಯಗಳನ್ನು ರಚಿಸುವುದರಲ್ಲಿ ಬಿದ್ದರು. ಆದರೆ ಚಂಚಲನೇತ್ರರಿಗೆ ಯಾವ ಭಯವೂ ಇರಲಿಲ್ಲ. ಕಾರಭಾರಿಯೂ ಕೊತ್ವಾ ಲನೂ ಸೂರ್ಯಚಂದ್ರರಂತೆ ತಮ್ಮ ಒತ್ತಾಸೆಯ ಕಾಂತಿಯನ್ನು ಸಂಪೂರ್ಣ ವಾಗಿ ಕುಮುದಪುರದ ಮಠದ ಮೇಲೆಯೇ ಪಸರಿಸುತಿದ್ದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಪ್ನನೌಕೆ
Next post ಮನ್ನಿಸುವ ದೇವ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…