ಕ್ಷಣ ಕ್ಷಣಕ್ಕೂ ನಿ ಬದಲಾಗದಿರು
ನಿನ್ನ ಅಂತರ ಭಾವ ಅರಿತುಕೊಳ್ಳು
ಕಷ್ಟ ಸುಖಗಳಿಗೆ ಹತಾಷೆ ನಾಗದಿರು
ಮುಕ್ಕಣ ಭಾವಗಳ ಬೆಳೆಸಿಕೊಳ್ಳು
ಮೌನವಾಗಲು ನೀ ಕಲಿಯಬೇಕು
ನಿಂದೆಗಳ ಮಾಡದೆ ಬಿಡಬೇಕು
ಸಕಲ ಜೀವಗಳಲ್ಲೂ ಸಮಾನತೆಬೇಕು
ಸಾಕ್ಷಿಯಾಗಿ ಎಲ್ಲವೂ ನೋಡಬೇಕು
ಮನಸ್ಸು ರಂಜನೆಗೆ ದಾಸನಾಗಬೇಡ
ಕ್ಷಣಿಕ ಯೋಜನೆಗಳಿಗೆ ಕಾಲಹರಣಬೇಡ
ಮೊದಲು ನಿನ್ನ ನೀ ರೂಪಿಸುಕೊಳ್ಳು
ಇನ್ನೊಬ್ಬರ ಬಾಳ್ವೆಗೆ ಲೇವಡಿ ಮಾಡಬೇಡ
ಪೂರ್‍ವ ಕರ್‍ಮದಂತೆ ನಿನಗೆಲ್ಲ ಫಲ
ಮನುಷ್ಯ ಜನ್ಮಕ್ಕೆ ಎಷ್ಟೊಂದು ಫೇರಿ
ಗೋಡೆಗೆ ತೂಗು ಹಾಕಿದ ಚಿತ್ರದಂತೆ ನೀ
ಅನುಭವಿಸಿ ಸಫಲಿಸು ಬಾಳು ಜಯಬೇರಿ
ಈಗೊಂದು ಅವಕಾಶ ನಿನಗೆ ಬಂದಿದೆ
ಇದನ್ನು ಎಚ್ಚರಿದಿ ನೀನು ಅನುಸರಿಸು
ಬಿರುಗಾಳಿ ಬರುವ ಮುಂಚೆ ದೋಣಿ ಸಾಗಲಿ
ಮಾಣಿಕ್ಯ ವಿಠಲನ ತೀರಕ್ಕೆ ಪಯಣಿಸು
*****