ಗಂಡಸಿನ ‘ಹೂಂಕಾರ’!

ಸೂಳೆಕುದುರೆಯ ಬಿಟ್ಟು
ಮೂಜಗದಿ ಸಂಚರಿಸಿದೆವು,
ಕಟಿ ಹಾಕುವ ಕಲಿಯು
ಒಬ್ಬನಿಲ್ಲವು ಎಂಬ ಹೆಬ್ಬುಬ್ಬಿನೀ ಚಿಹ್ನ
ಗಂಡಸಿನ ಹೃದಯ `ಹೂಂಕಾರ’!

ಮುದುಕನಾಹುತಿ ಕೊಟ್ಟು
ಹುಡುಗಿಯ ತಲೆಬುರುಡಿಯನು
ಕೆಂಪು ಬಟ್ಟೆಯೊಳದ್ದಿ
ಪೂರ್ವ-ಪಶ್ಚಿಮದಿ ಮೆರೆಯಿಸಿದೆವೆಂದು
ಗಂಡಸಿನ ಹೃದಯ `ಹೂಂಕಾರ’!

ಮೂವತ್ತುಮೂರು ಕೋಟಿ
ಕುರಿಗಳನು ಕೂಳಿಲ್ಲದೆಯೆ
ಕೊಂದು, ದೇವತೆಗಳನೆಲ್ಲ
ತುಷ್ಟಪಡಿಸಿದೆವೆಂಬ ಜಯಪತಾಕೆ
ಗಂಡಸಿನ ಹೃದಯ ‘ಹೂಂಕಾರ’!

ಭಿಕ್ಷುಕರನೆಲ್ಲ ಬದಿಗಿರಿಸಿ
ಸಾಲದೆಲೆಗಳ ಹಾಸಿ
ಪಂಚಪಕ್ವಾನ್ನಗಳ ಬಡಿಸಿ
ಒಲ್ಲೆವೆನ್ನುತ ಭುಂಜಿಸಿದ ಬಲಭೀಮರೆಂದು
ಗಂಡಸಿನ ಹೃದಯ `ಹೂಂಕಾರ’!

ಈ ಗಂಡಸರ ಮಂಡಲಕೆ
ಕೊಳ್ಳಿಯ ಕೊಟ್ಟು ಸುಟ್ಟು
ಬಿಡಲಾಯೆಂದು ಯತ್ನಿಸುವೆ,
ಅದಕೆ ನಾನಲ್ಲದಿನ್ನೋರ್ವ ಕಲಿಯಿಲ್ಲೆಂದು
ಗಂಡಸಿನ ಹೃದಯ `ಹೂಂಕಾರ’!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಸಂಜೆ
Next post ವಚನ ವಿಚಾರ – ಮನಸ್ಸು ಕೋತಿ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…