ಜಂಭದ ಹುಂಜವು ಒಂದಿತ್ತು
ನಿತ್ಯವು ಕೊ ಕೊ ಕೊ ಎನ್ನುತ್ತಿತ್ತು
ಸೂರ್ಯ ಹುಟ್ಟುವುದೇ ನನ್ನಿಂದ
ಎಂದೆನ್ನುತ್ತಿತ್ತು ಗರ್ವದಿಂದ
ಜಗಳಗಂಟ ಹುಂಜವದು
ಸದಾ ಜಗಳ ಕಾಯುತ್ತಿತ್ತು
ಉಳಿದ ಕೋಳಿಗಳು ಹೆದರಿ ಪಾಪ
ಹಾಕುತ್ತಿದ್ದವು ಹಿಡಿ ಹಿಡಿ ಶಾಪ
ಈ ರಾಜ್ಯಕೆ ನಾನೇ ರಾಜ
ದೇವರಿಗಿಂತ ನಾನು ಅಗ್ರಜ
ಕೊ ಕೊ ಕೋ ಎಂದೆನ್ನುತ್ತ
ತಿರುಗುತ್ತಿತ್ತು ಒದೆಯುತ್ತ
ಕೋಳಿಯ ಹಿಂಡಿನ ಸಾಬಣ್ಣ
ಕರೆಸಿದ ದಳ್ಳಾಳಿಯ ಬೂಬಣ್ಣ
ಜಂಭದ ಹುಂಜವ ಮಾರಿದನು
ಬಂಧ ಮುಕ್ತಗೊಳಿಸಿದನು
ಮನೆಗೆ ಹೊತ್ತೊಯ್ದ ಬೂಬಣ್ಣ
ಕತ್ತಿಯ ಹರಿತಗೊಳಿಸಿದನು
ಸೀಳಿದ ಹುಂಜದ ಕತ್ತನ್ನು
ಒದ್ದಾಡಿ ಬಿಟ್ಟಿತು ಪ್ರಾಣವನು
ಜಂಭವು ಯಾರಿಗೂ ತರವಲ್ಲ
ಮರೆಯಲೇಬಾರದು ಮಕ್ಕಳೇ
ನಯ ಭಯ ವಿನಯ ಮುಪ್ಪುರಿ
ಗೊಂಡರೆ ಬದುಕು ಸ್ಪಟಿಕ ಝರಿ
*****