ವಚನ ವಿಚಾರ – ಸಮತೆ

ವಚನ ವಿಚಾರ – ಸಮತೆ

ಆರೇನೆಂದಡೂ ಓರಂತಿಪ್ಪುದೆ ಸಮತೆ
ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ
ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ
ಇಂತಿದು ಗುರುಕಾರುಣ್ಯ
ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ
ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್ನವರ ನೀನೆಂಬುದೆ ಸಮತೆ.

[ಓರಂತೆ- ಕಾಳಿಕೆ-ಕಲ್ಮಶ, ಸ್ತೌತ್ಯ-ಸ್ತುತಿ, ಅವಿತಥ-ವಂಚನೆ]

ಸಿದ್ಧರಾಮನ ವಚನ. ಯಾರು ಜರಿದರೂ ಅವರು ನನ್ನ ಮನಸ್ಸಿನ ಕಲ್ಮಶ ಕಳೆದರು ಅನ್ನುವುದೇ ಸಮತೆ. ಯಾರಾದರೂ ಹೊಗಳಿದರೆ ಅವರು ನನ್ನ ಜನ್ಮಾಂತರದ ಹಗೆಗಳೆಂದು ತಿಳಿಯುವುದು ಸಮತೆ. ಹೀಗೆ ಇರುವುದು ಗುರುಕರುಣೆಯಿಂದಷ್ಟೆ ಸಾಧ್ಯವಾದೀತು. ನಮ್ಮ ಮನಸ್ಸು, ಮಾತು, ದೇಹದಲ್ಲಿ ಸುಳ್ಳು, ವಂಚನೆ ಇರದಿದ್ದರೆ ದೇವರಿಗೆ ಸೇರಿದವರೆಲ್ಲರನ್ನೂ ದೇವರೆಂದೇ ತಿಳಿಯುವುದು ಸಮತೆ.

ದೇವರು ಎಲ್ಲೆಡೆಯಲ್ಲೂ ಇದ್ದಾನೆ ಎಂಬುದು ಬಲುಮಟ್ಟಿಗೆ ನಾವು ಕಲಿತಮಾತು, ಹೊರತು ನಮ್ಮ ಅನುಭವವಲ್ಲ. ಅದು ಒಂದು ವೇಳೆ ಅನುಭವವೇ ಆದರೆ ಆಗ ನಾನು ಮಾತ್ರವಲ್ಲ ಲೋಕದಲ್ಲಿ ಕಾಣುವುದೆಲ್ಲವೂ ದೇವರೇ ಅನ್ನುವುದು ಅನುಭವವೇ ಆದರೆ ಆಗ ಪ್ರತ್ಯೇಕತೆಗೆ, ಭೇದಭಾವಕ್ಕೆ ಅವಕಾಶವೆಲ್ಲಿ? ಸಿದ್ಧರಾಮನ ಸಮತೆಯ ಕಲ್ಪನೆಯ ಒಂದು ಮುಖ ಇದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರಕೋಲು
Next post ಮುಕ್ತಿಯ ತೀರ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…