ತಾತ ನೀನು ಕಥೆ ಹೇಳಿರುವೆ
ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ
ಮೊದಲಿಗೆ ಒತ್ತಿ ಆನ್ ಗುಂಡಿ
ಬೆಳ್ಳಿ ಪರದೆ ಮೂಡಿತು ನೋಡಿ
ಇದಕ್ಕೆ ಹೇಳುವರು ಮೌಸೆಂದು
ಗಣಪತಿ ವಾಹನ ಇಲಿಯೆಂದು
ಕನ್ನಡ ನುಡಿ ಫಾಂಟಾವನ್ನು
ಗಣಕ ಪರಿಷತ್ತು ನೀಡಿದೆ.
ಕನ್ನಡ ನುಡಿಯ ಅಕ್ಷರಧಾಮ
ಇಲ್ಲಿವೆ ನೋಡಿ ಗಿಣಿ ರಾಮ
ಪತ್ರ ಲೇಖನ ಪದ್ಯಗಳನ್ನು
ಬರೆಯಬಹುದು ಬೇಕಾದಷ್ಟನ್ನು
ತಪ್ಪಾದರೆ ಡಿಲೀಟು ಬಟನ್ ಒತ್ತಲು
ಅಳಿಸಿ ಹೋಗುವುದು ಬರೆದುದೆಲ್ಲ
ಇಂಕು ಚೀತ್ಕಾಟ ಏನೂ ಇಲ್ಲ
ನೋಡಲು ಖುಷಿಯು ತೀರದಲ್ಲ
ಒಂದು ಹಾಳೆಯ ತಯಾರಿಕೆಗೆ
ಮರವೊಂದು ಸರಿವುದು ತೆರೆಗೆ
ಕಂಪ್ಯುಟರ್ ಬಳಕೆ ಮಾಡಿದರೆ
ಉಳಿವದು ಅರಣ್ಯ ನಮ್ಮ ಪಾಲಿಗೆ
ಪ್ರಾಣಿ ಪಕ್ಷಿ ನದಿ ಸಸ್ಯ ಉಳಿವಿಗೆ
ಬೇಕು ವನ ವನ ನಮ್ಮ ಬಾಳಿಗೆ
ಕಂಪ್ಯುಟರ್‌ದಿಂದ ಸುದ್ದಿಯನು
ಕಳಿಸಬಹುದೆಲ್ಲೆಡೆ ಕ್ಷಣದಲಿ
ಅಂಚೆ-ಗಿಂಚೆ ಬೇಕಿಲ್ಲ
ವಿಳಂಬ ಮಾತೇ ಇಲ್ಲ.
ಬಹೂಪಯೋಗಿ ಕಂಪ್ಯುಟರ್ ಜಾಲ
ನಮ್ಮಯ ಬದುಕಿನ ಊರುಗೋಲು
*****
೨೭.೦೯.೨೦೧೫